ಕೋವಿಡ್-19 ಲಸಿಕೆ 
ವಿದೇಶ

'ಫಿಜರ್ ಸಂಸ್ಥೆಯ ಕೋವಿಡ್ ಲಸಿಕೆ ಶೇ.95ರಷ್ಟು ಪರಿಣಾಮಕಾರಿ; ಸರ್ಕಾರದ ತುರ್ತು ಅನುಮೋದನೆ ಅಗತ್ಯ'

ಅಮೆರಿಕ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಫಿಜರ್ ಮತ್ತು ತನ್ನ ಜರ್ಮನಿ ಮೂಲದ ಪಾರ್ಟ್ನರ್ ಬಯೋನ್ ಟೆಕ್ ಸಂಸ್ಥೆ ಜಂಟಿಯಾಗಿ ಸಂಶೋಧಿಸಿರುವ ಕೋವಿಡ್ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿದ್ದು, ಸರ್ಕಾರದ ತುರ್ತು ಅನುಮೋದನೆ ಅಗತ್ಯ ಎಂದು  ಹೇಳಿದೆ.

ನ್ಯೂಯಾರ್ಕ್: ಅಮೆರಿಕ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಫಿಜರ್ ಮತ್ತು ತನ್ನ ಜರ್ಮನಿ ಮೂಲದ ಪಾರ್ಟ್ನರ್ ಬಯೋನ್ ಟೆಕ್ ಸಂಸ್ಥೆ ಜಂಟಿಯಾಗಿ ಸಂಶೋಧಿಸಿರುವ ಕೋವಿಡ್ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿದ್ದು, ಸರ್ಕಾರದ ತುರ್ತು ಅನುಮೋದನೆ ಅಗತ್ಯ ಎಂದು  ಹೇಳಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಫಿಜರ್ ಸಂಸ್ಥೆ ತನ್ನ ಲಸಿಕಾ ಪ್ರಯೋಗದ 2ನೇ ಮಧ್ಯಂತರ ವರದಿ ಬಂದಿದ್ದು, ವರದಿಯಲ್ಲಿ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿದೆ. ಅಂತೆಯೇ ಸೋಂಕಿಗೆ ತುತ್ತಾದ ಹಿರಿಯ ವಯಸ್ಕರು ಸಾವಿನ ದವಡೆಗೆ ನೂಕುವುದನ್ನು ತಡೆಯುತ್ತದೆ.  ಲಸಿಕೆಯನ್ನು ಕೋವಿಡ್ ಸೋಂಕು ದೃಢಪಟ್ಟ 170 ಸೋಂಕಿತರ ಮೇಲೆ ಪ್ರಯೋಗ ಮಾಡಲಾಗಿದ್ದು, ಲಸಿಕೆಯ ಪ್ರಾಥಮಿಕ ಪರಿಣಾಮಕಾರಿತ್ವದ ವಿಶ್ಲೇಷಣೆಯು ಮೊದಲ ಡೋಸ್ ನೀಡಿದ 28 ದಿನಗಳ ನಂತರ ಕೋವಿಡ್ -19 ವಿರುದ್ಧ ಬಿಎನ್‌ಟಿ 162 ಬಿ 2 ಲಸಿಕೆ ಶೇಕಡಾ 95  ರಷ್ಟು ಪರಿಣಾಮಕಾರಿ ಎಂದು ತೋರಿಸುತ್ತಿದೆ. ಪ್ಲೇಸಿಬೊ ಗುಂಪಿನಲ್ಲಿ 162 ಮಂದಿಯ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಳೆದ ನವೆಂಬರ್ 9ರಂದು ಫಿಜರ್ ಸಂಸ್ಥೆ ತನ್ನ ಲಸಿಕಾ ಪ್ರಯೋಗ ಶೇ.90ರಷ್ಟು ಪರಿಣಾಮಕಾರಿಯಾಗಿದೆ ಎಂದು ತನ್ನ ಮೊದಲ ಮದ್ಯಂತರ ವರದಿಯಲ್ಲಿ ಹೇಳಿತ್ತು. ಈ ಪ್ರಯೋಗಕ್ಕಾಗಿ 100 ಸೋಂಕಿತರನ್ನು ಬಳಕೆ ಮಾಡಲಾಗಿತ್ತು. ಈ ಪ್ರಯೋಗಕ್ಕೆ ಸುಮಾರು 43 ಸಾವಿರ ಸ್ವಯಂ  ಕಾರ್ಯಕರ್ತರು ಹೆಸರು ನೋಂದಾಯಿಸಿಕೊಂಡಿದ್ದರು. 

ಪ್ರಸ್ತುತ ಫಿಜರ್ ಸಂಸ್ಥೆಯಲ್ಲಿ 170 ಮಂದಿ ಸೋಂಕಿತರು ಲಸಿಕಾ ಪ್ರಯೋಗದಲ್ಲಿದ್ದು, ಈ ಪೈಕಿ ಲಸಿಕೆ ತೆಗೆದುಕೊಂಡ ಹೊರತಾಗಿಯೂ 8 ಮಂದಿ ಸ್ವಯಂ ಕಾರ್ಯಕರ್ತರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಒಬ್ಬರಲ್ಲಿ ಸೋಂಕಿನ ಲಕ್ಷಣಗಳು ಉಲ್ಬಣಗೊಂಡಿದೆ ಎಂದು ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; ಎಲ್ಲರ ಮನಗೆದ್ದ US ಮ್ಯಾನೇಜರ್ ಪ್ರತಿಕ್ರಿಯೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT