ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಅಮೆರಿಕಕ್ಕೂ ಒಕ್ಕರಿಸಿದ ರೂಪಾಂತರಿ ಮಾರಿ, ಜಗತ್ತಿನ 24 ದೇಶಗಳಲ್ಲಿ ಒಮಿಕ್ರಾನ್ ಸೋಂಕು ಪತ್ತೆ!: WHO

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಒಮಿಕ್ರಾನ್ ರೂಪಾಂತರಿ ಕೋರೋನಾ ಸೋಂಕು ಇದೀಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಜಗತ್ತಿನ ಬರೊಬ್ಬರಿ 24 ದೇಶಗಳಲ್ಲಿ ಈ ಮಾರಕ ಒಮಿಕ್ರಾನ್ ರೂಪಾಂತರಿ ಕೋರೋನಾ ಸೋಂಕಿನ ಸೋಂಕಿತರು ಪತ್ತೆಯಾಗಿದ್ದಾರೆ.

ಓಮಿಕ್ರಾನ್ ರೂಪಾಂತರಿ
Srinivasa Murthy VN
Updated On : 3 Dec 2021, 2:18 pm

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಒಮಿಕ್ರಾನ್ ರೂಪಾಂತರಿ ಕೋರೋನಾ ಸೋಂಕು ಇದೀಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಜಗತ್ತಿನ ಬರೊಬ್ಬರಿ 24 ದೇಶಗಳಲ್ಲಿ ಈ ಮಾರಕ ಓಮಿಕ್ರಾನ್ ರೂಪಾಂತರಿ ಕೋರೋನಾ ಸೋಂಕಿನ ಸೋಂಕಿತರು ಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಅಮೆರಿಕಾದಲ್ಲಿ ಮೊದಲ ಓಮಿಕ್ರೋನ್ ಪ್ರಕರಣ ಪತ್ತೆ: ದಕ್ಷಿಣ ಆಫ್ರಿಕಾದಿಂದ ವಾಪಸಾದ ವ್ಯಕ್ತಿಯಲ್ಲಿ ಸೋಂಕು!

ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದ್ದು, '2 ಡಜನ್ ಗೂ ಅಧಿಕ ದೇಶಗಳಲ್ಲಿ ಈ ಹೊಸ ಒಮಿಕ್ರಾನ್ ಕೊರೊನಾ ರೂಪಾಂತರಿ ಸೋಂಕು ಪ್ರಕರಣಗಳು ವರದಿಯಾಗಿದೆ. ಅಂತೆಯೇ ಈ ಓಮಿಕ್ರಾನ್ ರೂಪಾಂತರಿ ಸೋಂಕು ಇರುವ ದೇಶಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ನಿನ್ನೆಯಷ್ಟೇ ಅಮೆರಿಕದಲ್ಲೂ ಈ ಓಮಿಕ್ರಾನ್ ರೂಪಾಂತರಿ ಸೋಂಕು ಪತ್ತೆಯಾಗಿತ್ತು. ಆ ಮೂಲಕ ಈ ಪಟ್ಟಿಗೆ ಅಮೆರಿಕ ಕೂಡ ಸೇರ್ಪಡೆಯಾಗಿದ್ದು, ಈ ಪಟ್ಟಿಗೆ ಸೇರ್ಪಡೆಯಾದ 24ನೇ ದೇಶವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳು ತಿಳಿಸಿವೆ.

Advertisement

Advertisement

ಇದನ್ನೂ ಓದಿ: ಅಗತ್ಯ ಬಿದ್ದರೆ ಒಮಿಕ್ರಾನ್ ಗಾಗಿ 2 ತಿಂಗಳಲ್ಲಿ ಪ್ರತ್ಯೇಕ ಲಸಿಕೆ ಸಿದ್ಧ: ಮಾಡರ್ನ ಕಂಪನಿ

ಈ ಕುರಿತು ಜಿನೀವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ WHOನ ಆರೋಗ್ಯ ತುರ್ತು ಕಾರ್ಯಕ್ರಮದ COVID-19 ತಾಂತ್ರಿಕ ಪ್ರಮುಖರಾದ ಮಾರಿಯಾ ವ್ಯಾನ್ ಕೆರ್ಖೋವ್ (Maria Van Kerkhove), ಹೊಸ ರೂಪಾಂತರವು ಎಷ್ಟು ಬೇಗನೆ ಹರಡುತ್ತದೆ ಮತ್ತು ಅದು ಎಷ್ಟು ತೀವ್ರವಾಗಿರುತ್ತದೆ ಎಂಬುದರ ಕುರಿತು ವಿಜ್ಞಾನಿಗಳು ಶೀಘ್ರದಲ್ಲೇ ಮಾಹಿತಿ ನೀಡುವ ನಿರೀಕ್ಷೆಯಿದೆ. ಇದು "ಆರಂಭಿಕ ದಿನಗಳು" ಆಗಿರುವಾಗ, ಕೆಲವು ರೋಗಿಗಳು ಸೌಮ್ಯವಾದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದಕ್ಕೆ ಕೆಲವು ಸೂಚನೆಗಳಿವೆ. ನಾವು ದಿನಗಳಲ್ಲಿ ಪ್ರಸರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಹೊಂದಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 'Omicron' ರೂಪಾಂತರಿಯಿಂದ ಜಾಗತಿಕ ಅಪಾಯ ಹೆಚ್ಚು: ವಿಶ್ವ ಆರೋಗ್ಯ ಸಂಸ್ಥೆ

ಅಂತೆಯೇ ಓಮಿಕ್ರಾನ್ ರೂಪಾಂತರಿ ಚಿಕಿತ್ಸೆಯಲ್ಲಿ ಲಸಿಕೆಗಳ ಮಹತ್ವದ ಕುರಿತು ಮಾತನಾಡಿದ ಅವರು, ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ಪರಿಣಾಮಕಾರಿತ್ವದಲ್ಲಿ ಕಡಿತವಿದ್ದರೂ ಲಸಿಕೆಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಸೂಚಿಸಲು ಯಾವುದೇ ಸೂಚನೆ ಇಲ್ಲ. ಈ ಬಗ್ಗೆ ಸೂಕ್ತ ಸಂಶೋಧನೆಗಳು ನಡೆಯುತ್ತಿದ್ದು ಅವುಗಳ ವರದಿ ಬಂದ ಬಳಿಕ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು. ಅಲ್ಲದೆ ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಓಮಿಕ್ರಾನ್ ರೂಪಾಂತರಿಯನ್ನು ಕಳವಳಕಾರಿ ರೂಪಾಂತರ ಎಂದು ಘೋಷಣೆ ಮಾಡಿದೆ. ಅದಾಗ್ಯೂ ಲಸಿಕೆ ಪಡೆಯುವುದು ಉತ್ತಮ ಆಯ್ಕೆಯಾಗಿದ್ದು, ಏಕೆಂದರೆ ಅದು ನಿಮ್ಮ ಜೀವವನ್ನು ಉಳಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ವಿಮಾನ ಹಾರಾಟ ನಿರ್ಬಂಧಿಸಿದ 18 ದೇಶಗಳ ವಿರುದ್ಧ ದಕ್ಷಿಣ ಆಫ್ರಿಕಾ ಆಕ್ರೋಶ 

ದಕ್ಷಿಣ ಆಫ್ರಿಕಾ ಕಳಕಳಿಯನ್ನು ಮೆಚ್ಚಿದ WHO
ಇದೇ ವೇಳೆ ಓಮಿಕ್ರಾನ್ ರೂಪಾಂತರಿ ಪತ್ತೆ ವಿಚಾರವಾಗಿ ದಕ್ಷಿಣ ಆಫ್ರಿಕಾ ಕಳಕಳಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸುತ್ತದೆ ಎಂದು ಹೇಳಿದ ಕೆರ್ಖೋವ್, 'ದಕ್ಷಿಣ ಆಫ್ರಿಕಾದ ಪಾರದರ್ಶಕತೆ ಮತ್ತು ಅದರ ಇಚ್ಛೆಗಾಗಿ "ಡೇಟಾವನ್ನು ಹಂಚಿಕೊಳ್ಳಲು ಮಾತ್ರವಲ್ಲ, ಮಾಹಿತಿಯನ್ನು ಹಂಚಿಕೊಳ್ಳಲು ಮಾತ್ರವಲ್ಲದೆ ಮಾದರಿಗಳನ್ನು ಹಂಚಿಕೊಂಡಿದೆ. ಅವರ ಕಳಕಳಿಯನ್ನು WHO ಶ್ಲಾಘಿಸುತ್ತದೆ. ಅಂತೆಯೇ ಆ ದೇಶದ ಮೇಲಿನ ಪ್ರಯಾಣ ನಿಷೇಧಗಳಿಂದ ಹಲವು ಸಮಸ್ಯೆಗಳಾಗುತ್ತಿದ್ದು, ಮಾದರಿಗಳನ್ನು ದೇಶದಿಂದ ಹೊರಗೆ ಸಾಗಿಸಲು ಕೆಲವು ಸವಾಲುಗಳನ್ನು ಉಂಟುಮಾಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. 

ಇದನ್ನೂ ಓದಿ: ಜಗತ್ತಿನಾದ್ಯಂತ ಒಮಿಕ್ರಾನ್ ಇದುವರೆಗೆ ಎಲ್ಲೆಲ್ಲಿ, ಎಷ್ಟು ಮಂದಿಯಲ್ಲಿ ಕಾಣಿಸಿಕೊಂಡಿದೆ?

ಏತನ್ಮಧ್ಯೆ, ದಕ್ಷಿಣ ಆಫ್ರಿಕಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕಬಲ್ ಡಿಸೀಸ್ ನೀಡಿರುವ ವರದಿಯನ್ವಯ ಬುಧವಾರ ಕಳೆದ 24 ಗಂಟೆಗಳಲ್ಲಿ ಕೊರೋನವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ದ್ವಿಗುಣವಾಗಿದ್ದು, ಅಂದರೆ 8,561 ಕ್ಕೆ ದ್ವಿಗುಣಗೊಂಡಿದೆ ಎಂದು ವರದಿ ಮಾಡಿದೆ. ಆದಾಗ್ಯೂ, ಸಾವಿನ ಸಂಖ್ಯೆ ಮತ್ತು ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಗಮನಾರ್ಹವಾಗಿ ಬದಲಾಗಿಲ್ಲ ಎಂದು ಅದು ಹೇಳಿದೆ.  
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement