ರಷ್ಯಾದಲ್ಲಿ ಬಂದಿಳಿದ ಅಮೆರಿಕ ವಿಮಾನ 
ವಿದೇಶ

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ಆನ್‌ಲೈನ್ ವಿಮಾನ ಸಂಚಾರ ಮೇಲ್ವಿಚಾರಣಾ ವ್ಯವಸ್ಥೆಗಳ ಪ್ರಕಾರ, ವಾಷಿಂಗ್ಟನ್ ಡಿಸಿಯ ಸಮೀಪದ ಆಂಡ್ರ್ಯೂಸ್ ಏರ್ ಫೋರ್ಸ್ ಬೇಸ್ನಿಂದ ಹೊರಟಿದ್ದ ವಿಮಾನ ಸೋಮವಾರ ಬೆಳಗ್ಗೆ ಮಾಸ್ಕೋ ತಲುಪಿದೆ.

ಮಾಸ್ಕೋ: ರಷ್ಯಾ ಮತ್ತು ಅಮೆರಿಕ ನಡುವಿನ ವಾಯುಪ್ರದೇಶ ನಿರ್ಬಂಧಗಳ ನಡುವೆಯೇ ಅಮೆರಿಕದ Boeing C-17A Globemaster III ಸೇನಾ ಸಾರಿಗೆ ವಿಮಾನವೊಂದು ಮಾಸ್ಕೋದಲ್ಲಿ ಇಳಿದಿರುವುದು ಕುತೂಹಲ ಮೂಡಿಸಿದೆ.

ವಿಮಾನದ ಮಿಷನ್ ಮತ್ತು ಅದರಲ್ಲಿದ್ದ ಸರಕುಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.

ಆನ್‌ಲೈನ್ ವಿಮಾನ ಸಂಚಾರ ಮೇಲ್ವಿಚಾರಣಾ ವ್ಯವಸ್ಥೆಗಳ ಪ್ರಕಾರ, ವಾಷಿಂಗ್ಟನ್ ಡಿಸಿಯ ಸಮೀಪದ ಆಂಡ್ರ್ಯೂಸ್ ಏರ್ ಫೋರ್ಸ್ ಬೇಸ್ನಿಂದ ಹೊರಟಿದ್ದ ವಿಮಾನ ಸೋಮವಾರ ಬೆಳಗ್ಗೆ ಮಾಸ್ಕೋ ತಲುಪಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ ಸುಮಾರು 10 ಗಂಟೆಗೆ ವಿಮಾನ ರಷ್ಯಾ ರಾಜಧಾನಿಯಲ್ಲಿ ಲ್ಯಾಂಡ್ ಆಗಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ TASS ವರದಿ ಮಾಡಿದೆ.

ಲಭ್ಯವಿರುವ ವಿಮಾನ ಟ್ರ್ಯಾಕಿಂಗ್ ಮಾಹಿತಿಯ ಪ್ರಕಾರ, C-17 ಹಲವು ಹಂತಗಳ ಪ್ರಯಾಣದ ಬಳಿಕ ರಷ್ಯಾ ವಾಯುಪ್ರದೇಶ ಪ್ರವೇಶಿಸಿದೆ. ಮೊದಲು ಚಾರ್ಲ್ಸ್‌ಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ/ವಾಯುನೆಲೆಯಲ್ಲಿ ನಿಲುಗಡೆ ಮಾಡಿದ್ದ ವಿಮಾನ ಬಳಿಕ ಲಾಟ್ವಿಯಾದ ರಿಗಾಗೆ ತೆರಳಿತ್ತು. ಅಲ್ಲಿಂದ ರಷ್ಯಾ ಗಡಿಯತ್ತ ಪ್ರಯಾಣ ಮುಂದುವರಿಸಿತ್ತು.

ಲಾಟ್ವಿಯಾದಿಂದ ಹೊರಟ ಅಮೆರಿಕದ ಸೇನಾ ವಿಮಾನ ನೇರವಾಗಿ ರಷ್ಯಾ ಪ್ರದೇಶದತ್ತ ತೆರಳಿತ್ತು ಎಂದು ಯುರೋಪಿಯನ್ ಒಕ್ಕೂಟದ ವಾಯು ಸಂಚಾರ ನಿಯಂತ್ರಣ ಅಧಿಕಾರಿಯೊಬ್ಬರು TASSಗೆ ತಿಳಿಸಿದ್ದಾರೆ. C-17 ಗ್ಲೋಬ್‌ಮಾಸ್ಟರ್ III ಅಮೆರಿಕ ವಾಯುಪಡೆಯ ಪ್ರಮುಖ ಭಾರೀ ಸಾರಿಗೆ ವಿಮಾನವಾಗಿದ್ದು, ಸೈನಿಕರು ಹಾಗೂ ವಿವಿಧ ರೀತಿಯ ಸರಕುಗಳನ್ನು ತ್ವರಿತವಾಗಿ ಸಾಗಿಸಲು ಬಳಸಲಾಗುತ್ತದೆ.

ಉದ್ದೇಶ ನಿಗೂಢ

ಈ ಬಾರಿ ವಿಮಾನದ ಉದ್ದೇಶವೇನು ಎಂಬುದು ಸ್ಪಷ್ಟವಾಗಿಲ್ಲ. ಮಿಷನ್ ರಾಜತಾಂತ್ರಿಕ ಕಾರ್ಯಕ್ಕೆ ಸಂಬಂಧಿಸಿದ್ದೇ, ಕೈದಿಗಳ ವಿನಿಮಯಕ್ಕಾಗಿಯೇ ಅಥವಾ ಇತರ ದ್ವಿಪಕ್ಷೀಯ ಆಡಳಿತಾತ್ಮಕ ಕಾರಣಗಳಿಗಾಗಿಯೇ ಎಂಬ ಬಗ್ಗೆ ಪೆಂಟಗನ್ ಅಥವಾ ರಷ್ಯಾದ ವಿದೇಶಾಂಗ ಸಚಿವಾಲಯ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಕ್ರೆಮ್ಲಿನ್ ಸ್ಪಷ್ಟನೆ

ಈ ಹಿಂದೆ Flightradar24 ಮಾಹಿತಿಯನ್ನು ಉಲ್ಲೇಖಿಸಿದ್ದ ಅಲ್ ಜಜೀರಾ ಕೂಡ ಅಮೆರಿಕದ ವಾಯುಪಡೆಯ ಸಾರಿಗೆ ವಿಮಾನವೊಂದು ಮಾಸ್ಕೋದ ವ್ನುಕೋವೊ ವಿಮಾನ ನಿಲ್ದಾಣದಲ್ಲಿ ಇಳಿದಿರುವುದಾಗಿ ವರದಿ ಮಾಡಿತ್ತು. ಆದರೆ ವಿಮಾನದ ಆಗಮನದ ಬಗ್ಗೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಕ್ರೆಮ್ಲಿನ್ ಹೇಳಿದೆ.

ಉಕ್ರೇನ್ ಯುದ್ಧ ಆರಂಭವಾದ ಬಳಿಕ ಅಮೆರಿಕ ಹಾಗೂ ಅದರ ಯುರೋಪಿಯನ್ ಮಿತ್ರ ರಾಷ್ಟ್ರಗಳು ರಷ್ಯಾ ವಿರುದ್ಧ ಹಲವು ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ಇದರ ಭಾಗವಾಗಿ ಪರಸ್ಪರ ವಾಯುಪ್ರದೇಶ ನಿರ್ಬಂಧವೂ ಜಾರಿಯಲ್ಲಿದೆ.

ರಷ್ಯಾದ ವಿಮಾನಗಳಿಗೆ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ವಾಯುಪ್ರದೇಶದಲ್ಲಿ ಪ್ರವೇಶ ನಿರ್ಬಂಧಿಸಲಾಗಿದ್ದು, ಪ್ರತಿಯಾಗಿ ರಷ್ಯಾ ಕೂಡ ‘ಸ್ನೇಹಪರವಾಗಿಲ್ಲದ’ ರಾಷ್ಟ್ರಗಳ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಇಂತಹ ಪರಿಸ್ಥಿತಿಯಲ್ಲೇ ಅಮೆರಿಕದ ಸೇನಾ ವಿಮಾನ ಮಾಸ್ಕೋದಲ್ಲಿ ಇಳಿದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!