15 ಲಕ್ಷದ ಕಾರು 4 ಲಕ್ಷಕ್ಕೆ, 12 ಲಕ್ಷದ ಕಾರು 3 ಲಕ್ಷಕ್ಕೆ! ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ದುಬಾರಿ ಕಾರುಗಳು; ಇದಕ್ಕೆ ಸರ್ಕಾರವೇ ಗ್ಯಾರಂಟಿ!

ಕೇಂದ್ರ ಸರ್ಕಾರ ಹಾಗೂ ವಿವಿಧ ಬ್ಯಾಂಕ್‌ಗಳ ಇ-ಹರಾಜು ಮೂಲಕ 12, 15, 17, 20ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳನ್ನು ಕೇವಲ 3 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಗೆ ಪಡೆಯಲು ಸಾಧ್ಯವಿದೆ. ಅದೇಗೆ ಗೊತ್ತಾ?
Cars
Online Desk
Updated on

ಪ್ರತಿಯೊಬ್ಬರಿಗೂ ಕಾರ್ ಖರೀದಿಸಬೇಕು, ಫ್ಯಾಮಿಲಿ ಜೊತೆಗೆ ತಮ್ಮದೇಯಾದ ನಾಲ್ಕು ಚಕ್ರದ ವಾಹನದಲ್ಲಿ ಟೂರ್ ಹೋಗಬೇಕು ಅನ್ನೋದು ಅತಿ ದೊಡ್ಡ ಆಸೆ; ಆದ್ರೆ, ಈ ಆಸೆಗೆ ಅತಿ ದೊಡ್ಡ ತೊಡಕು ಅಂದ್ರೆ, ಅದುವೇ ಬಜೆಟ್! ಹೌದು, ಲಕ್ಷಾಂತರ ರೂಪಾಯಿ ಕೊಟ್ಟು SUV, CUV, Sedan, Crossover ಹೀಗೆ ಹಲವು ರೀತಿಯ ಹೈ ಬಜೆಟ್ ಕಾರುಗಳನ್ನು ಖರೀದಿಸಲು ಹಿಂದೂ ಮುಂದು ನೋಡುತ್ತೇವೆ! ಆದ್ರೆ ನಿಮಗೆ ಗೊತ್ತಾ ಲಕ್ಷಾಂತರ ರೂಪಾಯಿ ಬೆಲೆ ಬಾಳೋ ಕಾರುಗಳು ಕೇವಲ 3 ರಿಂದ 4 ಲಕ್ಷಕ್ಕೆ ಕೆಲವೊಮ್ಮೆ ಅದಕ್ಕಿಂತಲೂ ಕಡಿಮೆ ಬೆಲೆಗೆ ಸಿಗುತ್ತದೆ ಎಂದು? ಹಾಗಾದ್ರೆ, ಅವುಗಳನ್ನು ಖರೀದಿಸೋದು ಹೇಗೆ ಗೊತ್ತಾ? ಇಲ್ಲಿದೆ ಆ ಕುರಿತ ವರದಿ:

ಹೌದು, ನೀವು ಕೇಳಿರುವುದು ನಿಜ. ಕೇಂದ್ರ ಸರ್ಕಾರ ಹಾಗೂ ವಿವಿಧ ಬ್ಯಾಂಕ್‌ಗಳ ಇ-ಹರಾಜು ಮೂಲಕ 12, 15, 17, 20ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳನ್ನು ಕೇವಲ 3 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಗೆ ಪಡೆಯಲು ಸಾಧ್ಯವಿದೆ. ಅದೇಗೆ ಗೊತ್ತಾ?

ಯಾರ ಕಾರುಗಳು ಸಿಗುತ್ತವೆ?

ಸಾಲ ಮರುಪಾವತಿ ಮಾಡದ ಗ್ರಾಹಕರಿಂದ ಬ್ಯಾಂಕ್‌ಗಳು ಜಪ್ತಿ ಮಾಡಿದ ಕಾರುಗಳು ಮತ್ತು ಸರ್ಕಾರಿ ಇಲಾಖೆಗಳ ಬಳಕೆಯಲ್ಲಿದ್ದ ವಾಹನಗಳನ್ನು 3 ಪೋರ್ಟಲ್‌ಗಳ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಹರಾಜು ಹಾಕಲಾಗುತ್ತದೆ. ಅವುಗಳನ್ನು ಸುಲಭವಾಗಿ ಬಿಡ್ ಮಾಡಿ ಖರೀದಿಸಬಹುದು!

Cars
DL ಕಳೆದುಹೋಯಿತಾ? RTO ಕಚೇರಿಗೆ ಅಲೆಯೋ ಬದಲು, ಮೊಬೈಲ್‌ನಲ್ಲೇ ಹೀಗೆ ಡೌನ್‌ಲೋಡ್ ಮಾಡಿ!

ಎಲ್ಲಿ ಬಿಡ್ ಮಾಡಬಹುದು?

  • MSTC ಇ-ಹರಾಜು ಪೋರ್ಟಲ್ (MSTC e-Auction):

    ಇದು ಭಾರತ ಸರ್ಕಾರದ ಉಕ್ಕು ಸಚಿವಾಲಯದ ಅಡಿಯಲ್ಲಿ ಬರುವ ಅಧಿಕೃತ ಪಿಎಸ್‌ಯು (PSU) ಸಂಸ್ಥೆಯಾಗಿದೆ. ಇದರಲ್ಲಿ, ರಕ್ಷಣಾ ಸಚಿವಾಲಯ, ರೈಲ್ವೆ ಇಲಾಖೆ, ಬಿಎಸ್‌ಎನ್‌ಎಲ್ ಮತ್ತು ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳು ಬಳಸಿದ ವಾಹನಗಳನ್ನು ಹರಾಜು ಮಾಡಲಾಗುತ್ತದೆ. ಅದರಲ್ಲೂ, ಇಲ್ಲಿ, ಅತ್ಯಂತ ಪಾರದರ್ಶಕ ಪ್ರಕ್ರಿಯೆ ಮೂಲಕ ಹರಾಜು ನಡೆಯಲಿದ್ದು, ನೀವು ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಬಿಡ್ ಮಾಡಬಹುದು.

    ಅಧಿಕೃತ ವೆಬ್‌ಸೈಟ್: https://www.mstcindia.co.in/

  • IBAPI ಪೋರ್ಟಲ್ (Indian Banks Auctions Mortgaged Properties Information):

    ಇದು ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಕೇಂದ್ರ ಹಣಕಾಸು ಸಚಿವಾಲಯ ಜಂಟಿಯಾಗಿ ನಡೆಸುವ ಪೋರ್ಟಲ್ ಆಗಿದೆ. ಇನ್ನು, ಇಲ್ಲಿ ಯಾರಾದರೂ ಕಾರು ಸಾಲ ಪಡೆದು ಅದರ EMI ಅನ್ನು ಸರಿಯಾಗಿ ಪಾವತಿಸದಿದ್ದಾಗ, ಬ್ಯಾಂಕ್‌ಗಳು ಆ ವಾಹನಗಳನ್ನು ಜಪ್ತಿ ಮಾಡುತ್ತವೆ. ಇನ್ನೂ, ಬ್ಯಾಂಕ್‌ಗಳು ತಮ್ಮ ಬಾಕಿ ಸಾಲವನ್ನು ಮರುಪಡೆಯಲು ಮಾತ್ರವೇ ಬಯಸುವುದರಿಂದ, 10 ರಿಂದ 12 ಲಕ್ಷದ ಕಾರುಗಳನ್ನು ಕೇವಲ 3 ಲಕ್ಷದ ಆರಂಭಿಕ ಬಿಡ್ಡಿಂಗ್ ಬೆಲೆಯಲ್ಲಿ ಪಟ್ಟಿ ಮಾಡುತ್ತವೆ. ಅದರಲ್ಲೂ, ಇಲ್ಲಿ ಸಿಗುವ ಹೆಚ್ಚಿನ ಕಾರುಗಳು ಹೆಚ್ಚಾಗಿ ಹೊಸ ಮಾಡೆಲ್ ಹಾಗೂ ಕಡಿಮೆ ಕಿಲೋಮೀಟರ್ ಓಡಿರುವ ಉತ್ತಮ ಸ್ಥಿತಿಯಲ್ಲಿರುತ್ತವೆ.

    ಅಧಿಕೃತ ವೆಬ್‌ಸೈಟ್: https://ibapi.in/

  • ಇ-ಹರಾಜು ಇಂಡಿಯಾ (eAuction India):

    ಇದು ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸಿರುವ ಭಾರತ ಸರ್ಕಾರದ ಅಧಿಕೃತ ಹರಾಜು ಪ್ಲಾಟ್‌ಫಾರ್ಮ್ ಆಗಿದೆ. ಇಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು, ಕಸ್ಟಮ್ಸ್ ಇಲಾಖೆ ಮತ್ತು ಆದಾಯ ತೆರಿಗೆ ಇಲಾಖೆಗಳು ಜಪ್ತಿ ಮಾಡಿದ ಅಥವಾ ಮುಟ್ಟುಗೋಲು ಹಾಕಿಕೊಂಡ ಐಷಾರಾಮಿ ವಾಹನಗಳನ್ನು ಹರಾಜಿಗಿಡಲಾಗುತ್ತದೆ. ಅದರಲ್ಲೂ, ಯಾವುದೇ ಮಧ್ಯವರ್ತಿಗಳು ಅಥವಾ ಏಜೆಂಟರ ಕಮಿಷನ್ ಇಲ್ಲದೆ ನೇರವಾಗಿ ಸರ್ಕಾರದಿಂದಲೇ ವಾಹನ ಖರೀದಿಸಬಹುದು.

    ಅಧಿಕೃತ ವೆಬ್‌ಸೈಟ್: https://www.eauctionsindia.com/

Cars
Online Desk
Cars
ಪೆಟ್ರೋಲ್ ಕಾರಿಗೆ ಹೇಳಿ ಗುಡ್ ಬೈ: 2026 ರಲ್ಲಿ ಕೇವಲ 8 ಲಕ್ಷ ರೂ ಬಜೆಟ್‌ನಲ್ಲಿ ಸಿಗುವ ಬೆಸ್ಟ್ Electric Cars ಇಲ್ಲಿವೆ!

ಹರಾಜಿನಲ್ಲಿ ಭಾಗವಹಿಸುವುದು ಹೇಗೆ?

  • ಮೊದಲು ಈ ಮೇಲಿನ ಯಾವುದೇ ಪೋರ್ಟಲ್‌ಗೆ ಭೇಟಿ ನೀಡಿ 'Bidder Enrollment' ಅಥವಾ ಬಳಕೆದಾರರಾಗಿ ನೋಂದಣಿ ಮಾಡಿಕೊಳ್ಳಿ. ಇದಕ್ಕೆ ನಿಮ್ಮ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಇಮೇಲ್ ಐಡಿ ಅಗತ್ಯವಿರುತ್ತದೆ.

  • ನಂತರ ಹರಾಜಿನಲ್ಲಿ ಭಾಗವಹಿಸುವ ಮುನ್ನ ವಾಹನದ ನಿಗದಿತ ಮುಂಗಡ ಹಣವನ್ನು ಆನ್‌ಲೈನ್‌ನಲ್ಲಿ ಠೇವಣಿ ಇಡಬೇಕು. ನಿಮಗೆ ಕಾರು ಸಿಗದಿದ್ದರೆ ಈ ಹಣವನ್ನು ಸಂಪೂರ್ಣವಾಗಿ ವಾಪಾಸ್ ನೀಡಲಾಗುತ್ತದೆ.

  • ತದನಂತರ ಬಿಡ್ಡಿಂಗ್ ಪ್ರಕ್ರಿಯೆ ಆರಂಭವಾಗುವ ಮುನ್ನ ನೀವು ನೇರವಾಗಿ ವಾಹನ ಇರುವ ಯಾರ್ಡ್ ಅಥವಾ ಸ್ಥಳಕ್ಕೆ ಭೇಟಿ ನೀಡಿ ಕಾರಿನ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಬಹುದು.

  • ಮುಂದೆ, ನಿಗದಿತ ದಿನದಂದು ಆನ್‌ಲೈನ್‌ನಲ್ಲಿ ನಿಮ್ಮ ಬಿಡ್ ಮೊತ್ತವನ್ನು ನಮೂದಿಸಬೇಕು. ನಿಮ್ಮ ಬಿಡ್ ಅತ್ಯಂತ ಹೆಚ್ಚಾಗಿದ್ದರೆ ಕಾರು ನಿಮಗೆ ಸಿಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com