ವಾಣಿಜ್ಯ

ಒಂದೇ ದಿನಕ್ಕೆ ನೆಲ ಕಚ್ಚಿದ 'ಡಿಎಲ್‌ಎಫ್‌'

ಒಂದೇ ದಿನಕ್ಕೆ ನೆಲ ಕಚ್ಚಿದ 'ಡಿಎಲ್‌ಎಫ್‌'
Published On :

ಮುಂಬೈ: ಸೆಬಿಯಿಂದ ನಿಷೇಧಕ್ಕೆ ಒಳಗಾಗಿದ್ದ ರಿಯಲ್ ಎಸ್ಟೇಟ್ ಉಧ್ಯಮ ಸಂಸ್ಥೆ ಡಿಎಲ್‌ಎಫ್‌ನ ಷೇರುಗಳು ಪಾತಳಕ್ಕೆ ಇಳಿದಿವೆ.

ಅಧಿಕ ಮೊತ್ತದ ಸಾಲದ ಹೊರೆ ಮತ್ತು ಅಸಮರ್ಪಕ ವಾಣಿಜ್ಯ ವ್ಯವಹಾರದ ಹಿನ್ನಲೆಯಲ್ಲಿ ಸೆಬಿಯಿಂದ ನಿಷೇಧಕ್ಕೆ ಒಳಗಾಗಿದ್ದ ಡಿಎಲ್‌ಎಫ್‌ನ ಷೇರುಗಳು ತೀವ್ರಗತಿಯಲ್ಲಿ ಕುಸಿತಗೊಂಡಿದ್ದು, ಕೇವಲ ಒಂದೇ ದಿನದಲ್ಲಿ ಸಂಸ್ಥೆ 7,126ಕೋಟಿಯಷ್ಟು ನಷ್ಟ ಅನುಭವಿಸಿದೆ. ಸಂಸ್ಥೆಯ ಎಲ್ಲ ವಿಭಾಗಗಳ ಷೇರುಗಳು ನೆಲಕಚ್ಚಿದ್ದು, ಷೇರುಮಾರುಕಟ್ಟೆಯಲ್ಲಿ ಶೇ.30ರಷ್ಟು ನಷ್ಟವನ್ನು ಅನುಭವಿಸಿದೆ. ಸಂಸ್ಥೆಯ ಮೇಲೆ ಸೆಬಿ ನಿಷೇಧ ಹೇರಿದ ಬೆನ್ನಲ್ಲಿಯೇ ಷೇರುಗಳ ಮೌಲ್ಯದಲ್ಲಿ ಕುಸಿತ ಕಾಣಲಾರಂಭಿಸಿದ್ದು, ಇಂದು ಷೇರುಮಾರುಕಟ್ಟೆಯಲ್ಲಿ ಡಿಎಲ್‌ಎಫ್ ಭಾರಿ ಕುಸಿತ ಕಂಡಿದೆ.

ಸೋಮವಾರದ ವಹಿವಾಟಿನಲ್ಲಿ ಡಿಎಲ್‌ಎಫ್ ಸಂಸ್ಥೆಯ ಷೇರುಗಳು ಶೇ.4ರಷ್ಟು ಕುಸಿತ ಕಂಡಿತ್ತು. ಬಿಎಸ್‌ಇನಲ್ಲಿ 108.9ರ ಮುಖಬೆಲೆಯ ಷೇರುಗಳು ಶೇ. 37.80ರಷ್ಟು ಮೌಲ್ಯ ಕಳೆದುಕೊಂಡು 25.77ರಷ್ಟು ಕುಸಿತಕಂಡಿದೆ. ಎನ್‌ಎಸ್‌ಇಯಲ್ಲಿಯೂ ಡಿಎಲ್‌ಎಫ್ ಷೇರುಗಳ ಮೌಲ್ಯ ಕುಸಿದಿದ್ದು, ಶೇ.25.97ರಷ್ಟು ಕುಸಿತಕಂಡಿದೆ. ಇದೇ ಪರಿಸ್ಥಿತಿ ನಾಳೆಯು ಮುಂದುವರೆಯಲಿದ್ದು, ಸಂಸ್ಥೆಯ ನಷ್ಟ ಪ್ರಮಾಣ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಅಧಿಕ ಮೊತ್ತದ ಸಾಲದ ಹೊರೆ ಮತ್ತು ಅಸಮರ್ಪಕ ವಾಣಿಜ್ಯ ವ್ಯವಹಾರದ ಹಿನ್ನಲೆಯಲ್ಲಿ ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಡಿಎಲ್‌ಎಫ್ ಸಂಸ್ಥೆಯನ್ನು 3 ವರ್ಷಗಳ ಕಾಲ ನಿಷೇಧ ಹೇರಿತ್ತು. ಸೆಬಿಯ ನಿರ್ಧಾರ ಹೊರ ಬೀಳುತ್ತಿದ್ದಂತೆಯೇ ಡಿಎಲ್‌ಎಫ್ ಸಂಸ್ಥೆಯ ಷೇರುಗಳು ಗಣನೀಯವಾಗಿ ಕುಸಿಯಲಾರಂಭಿಸಿವೆ.

ಈ ಹಿಂದೆ ಅಸಮರ್ಪಕ ವಾಣಿಜ್ಯ ವ್ಯವಹಾರದ ಹಿನ್ನಲೆಯಲ್ಲಿ ಸೆಬಿ, ಡಿಎಲ್‌ಎಫ್ ಸಂಸ್ಥೆಯ ಉಪಾಧ್ಯಕ್ಷ ಕೆ.ಪಿ.ಸಿಂಗ್, ಅವರ ಪುತ್ರ ರಾಜೀವ್ ಸಿಂಗ್, ಪುತ್ರಿ ಪಿಯಾ ಸಿಂಗ್ ಅವರಿಗೆ ನಿಷೇಧ ಹೇರಿತ್ತು. ಅಲ್ಲದೆ ಡಿಎಲ್‌ಎಫ್ ಸಂಸ್ಥೆಯ ಎಂಡಿ ಟಿಸಿ ಘೋಯಲ್, ಕಾಮೇಶ್ವರ ಸ್ವರೂಪ್, ರಮೇಶ್ ಸಾಕಾ ಅವರನ್ನು ಕೂಡ ನಿರ್ಬಂಧಕ್ಕೊಳಪಡಿಸಲಾಗಿದೆ.

ಸಂಸ್ಥೆ ಮೇಲಿರುವ 19,100 ಕೋಟಿ ರು (3.13 ಯುಎಸ್ ಡಾಲರ್) ಗೂ ಅಧಿಕ ಸಾಲದ ಹೊರೆಯನ್ನು ತಗ್ಗಿಸಲು ಆಸ್ತಿ ಮಾರಾಟವೊಂದೇ ದಾರಿ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 10,000 ಕೋಟಿ ವಾರ್ಷಿಕ ಆದಾಯ ಹೊಂದಿರುವ ರಿಯಲ್ ಎಸ್ಟೇಟ್ ಸಂಸ್ಥೆ ಡಿಎಲ್ ಎಫ್ ನ ಮಾರುಕಟ್ಟೆ ಮೌಲ್ಯ 26,000 ಕೋಟಿ ರು ಮೀರುತ್ತದೆ. 20007ರಲ್ಲಿ ಐಪಿಒ ಮೂಲಕ 9.187 ಕೋಟಿ ರು ಗಳಿಸಿ ದಾಖಲೆ ಬರೆದ ಬೆನ್ನಲ್ಲೇ ಮಾರುಕಟ್ಟೆ ಮೌಲ್ಯವನ್ನು 1 ಲಕ್ಷ ಕೋಟಿ ರು (1.2 ಬಿಲಿಯನ್ ಡಾಲರ್)ಗೆ ಹೆಚ್ಚಿಸಿಕೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.