4ನೈ ತ್ರೈಮಾಸಿಕ ವರದಿ: ಇನ್ಫೋಸಿಸ್ ಗೆ 3,097 ಕೋಟಿ ನಿವ್ವಳ ಲಾಭ

ನಾಲ್ಕನೇ ತ್ರೈಮಾಸಿಕ ವರದಿ ಬಿಡುಗಡೆ ಮಾಡಿರುವ ದೇಶದ ಪ್ರಮುಖ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ 3,097 ಕೋಟಿ ರು ನಿವ್ವಳ ಲಾಭ ತೋರಿಸಿದೆ.
ವಿಶಾಲ್ ಸಿಕ್ಕ
ವಿಶಾಲ್ ಸಿಕ್ಕ

ಚೆನ್ನೈ: ನಾಲ್ಕನೇ ತ್ರೈಮಾಸಿಕ ವರದಿ ಬಿಡುಗಡೆ ಮಾಡಿರುವ ದೇಶದ ಪ್ರಮುಖ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ 3,097 ಕೋಟಿ ರು ನಿವ್ವಳ ಲಾಭ ತೋರಿಸಿದೆ.

ಕಳೆದ ವರ್ಷ ಇದೇ ಅವಧಿಗೆ ಬಂದಿದ್ದ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 3.5 ರಷ್ಟು ಪ್ರಗತಿ ಸಾಧಿಸಿದೆ. ಆದರೆ, ಮಾರುಕಟ್ಟೆ ತಜ್ಞರ ನಿರೀಕ್ಷೆ ಮಟ್ಟ ಮುಟ್ಟಲಾಗಿಲ್ಲ. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟಾರೆ 13,411 ಕೋಟಿ ರು ಆದಾಯ ಸಿಕ್ಕಿದೆ. ಇದೇ ಅವಧಿಗೆ ಹೋಲಿಸಿದರೆ ಶೇ 4.2ರಷ್ಟು ಪ್ರಗತಿ ಕಂಡಿದೆ ಎಂದು ವರದಿಯಲ್ಲಿ ಹೇಳಿದೆ.

ದಿನದ ಷೇರುಮಾರುಕಟ್ಟೆಯಲ್ಲೂ ಹೆಚ್ಚು ಏರಿಳಿತ ಕಂಡ ಇನ್ಫೋಸಿಸ್ ಷೇರುಗಳು ಬಿಎಸ್ಇಯಲ್ಲಿ 2,131 ರು ನಂತೆ ಆರಂಭಗೊಂಡು 2,081 ರು. ನಿಂದ 2,150 ರು.ಗೆ ಅಂತ್ಯಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com