

ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಅಲ್ಪ ಕುಸಿತಕಂಡಿದ್ದು, 108 ಅಂಕಗಳಷ್ಟು ಕುಸಿತವಾಗಿದೆ.
ಏಪ್ರಿಲ್ ತಿಂಗಳ ಉತ್ಪನ್ನಗಳ ಏಕ್ಸ್ ಪೈರಿ ಹಿನ್ನಲೆಯಲ್ಲಿ ಬುಧವಾರ ಷೇರುಮಾರುಕಟ್ಟೆ ಮಂಕಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಷೇರು ಸಂವೇದಿ ಸೂಚ್ಯಂಕದಲ್ಲಿ 108.97 ಅಂಕಗಳನ್ನು ಕಳೆದುಕೊಂಡು 27, 287.41 ಅಂಕಗಳಿಗೆ ಸ್ಥಿರವಾಗಿದೆ. ನಿಫ್ಟಿಯಲ್ಲಿಯೂ ಕೂಡ ಕುಸಿತ ಕಂಡುಬಂದಿದ್ದು, 33.40 ಅಂಕಗಳನ್ನು ಕಳೆದುಕೊಳ್ಳುವ ಮೂಲಕ 8, 252.20 ಅಂಕಗಳಿಗೆ ನಿಫ್ಟಿ ಸ್ಥಿರವಾಗಿದೆ.
ಏಷ್ಯಾದ ಮಾರುಕಟ್ಟೆಯಲ್ಲಿ ದುರ್ಬಲ ವ್ಯವಹಾರ ಪ್ರವೃತ್ತಿ ಮುಂದುವರೆದಿದ್ದು, ಭಾರತೀಯ ಷೇರುಮಾರುಕಟ್ಟೆಯ ಮೇಲೂ ಇದು ಪರಿಣಾಮ ಬೀರಿದೆ. ಅಲ್ಲದೆ ಏಪ್ರಿಲ್ ತಿಂಗಳ ಉತ್ಪನ್ನಗಳ ಏಕ್ಸ್ ಪೈರಿ ಹಿನ್ನಲೆಯಲ್ಲಿಯೂ ಕೂಡ ಮಾರುಕಟ್ಟೆ ಕೊಂಚ ನಿಧಾನಗತಿಯಲ್ಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖ ದೂರವಾಣಿ ಸಂಸ್ಥೆ ಭಾರ್ತಿ ಏರ್ ಟೆಲ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ.1.02 ರಷ್ಟು ಕಡಿತವಾಗಿದ್ದು, ಪ್ರತೀ ಷೇರಿನ ಮೌಲ್ಯ 396.70 ರು.ಗಳಿಗೆ ಸ್ಥಿರವಾಗಿದೆ.