

ದೇಶದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಇನ್ಫೋಸಿಸ್ ಡ್ಯೂಶೆ ಬ್ಯಾಂಕ್ ಜೊತೆ ಮಲ್ಟಿ ಮಿಲಿಯನ್ ಯೂರೋ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಪ್ಪಂದದ ಪ್ರಕಾರ ಇನ್ಫೋಸಿಸ್ ಡ್ಯೂಶೆ ಬ್ಯಾಂಕ್ ಸಮೂಹಕ್ಕೆ, ಅಭಿವೃದ್ಧಿ, ಅಪ್ಲಿಕೇಷನ್ ಮೈಂಟೆನೆನ್ಸ್, ಡಿಜಿಟಲ್ ಮೊಬಿಲಿಟಿ, ಪ್ಯಾಕೇಜ್ ಇಂಪ್ಲಿಮಂಟೇಶನ್, ಪರೀಕ್ಷಾ ಸೇವೆ ಒದಗಿಸಲಿದೆ.
ಡ್ಯೂಶೆ ಬ್ಯಾಂಕ್ ಮತ್ತು ಇನ್ಫೋಸಿಸ್ ನಡುವಣ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸಲು, ಬ್ಯಾಂಕ್ ನ ಅಭಿವೃದ್ಧಿಗೆ ಬೇಕಾದ ಎಲ್ಲಾ ಅಗತ್ಯ ಸೇವೆಗಳನ್ನು ಒದಗಿಸುವುದಾಗಿ ಇನ್ಪೊಸಿಸ್ ನ ಜಾಗತಿಕ ಹಣಕಾಸು ಮುಖ್ಯಸ್ಥ ಮೋಹಿತ್ ಜೋಶಿ ತಿಳಿಸಿದ್ದಾರೆ.
ಡ್ಯೂಶೆ ಬ್ಯಾಂಕ್ ತನ್ನ ಗ್ರಾಹಕರಿಗೆ ನೂತನ ತಂತ್ರಜ್ಞಾನ ಹಾಗೂ ಸಮರ್ಥ ಸೇವೆ ಗಳನ್ನು ಒದಗಿಸಲು ಬದ್ದವಾಗಿದೆ. ಈ ನಿಟ್ಟಿನಲ್ಲಿ ಇನ್ ಪೋಸಿಸ್ ಸಹಭಾಗಿತ್ವದಲ್ಲಿ ಕೆಲಸ ಮಾಡುವುದರಿಂದ ತನ್ನ ಸಾಧನೆಯ ಗುರಿ ತಲುಪಲು ಬ್ಯಾಂಕ್ ಗೆ ಸಹಾಯವಾಗುತ್ತದೆ ಎಂದು ಡ್ಯೂಶೆ ಬ್ಯಾಂಕ್ ನ ಜಾಗತಿಕ ಮುಖ್ಯ ಮಾಹಿತಿ ಅಧಿಕಾರಿ ಕಿಮ್ ಹಾಮಂಡ್ ಹೇಳಿದ್ದಾರೆ.