

ಮುಂಬೈ: ಭಾರತೀಯ ಷೇರುಮಾರುಕಟ್ಟೆ ಮತ್ತೆ ಕುಸಿತಕಂಡಿದ್ದು, ಸೆನ್ಸೆಕ್ಸ್ ಬರೋಬ್ಬರಿ 245.40 ಅಂಕಗಳ ಕುಸಿತ ಕಂಡಿದೆ.
ಆಟೋ, ಬ್ಯಾಂಕಿಂಗ್, ರಿಫೈನರಿ ಮತ್ತು ಗ್ರಾಹಕ ಬಳಕೆ ಕ್ಷೇತ್ರಗಳ ಷೇರುಗಳಲ್ಲಿ ಕಂಡುಬಂದ ಷೇರುಗಳ ತೀವ್ರ ಮಾರಾಟದ ಪರಿಣಾಮದಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತಗೊಂಡಿದೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೆನ್ಸೆಕ್ಸ್ ಒಟ್ಟು 245.40 ಅಂಕಗಳ ಕುಸಿತ ಕಂಡು ಒಟ್ಟು 26,523.09 ಅಂಕಗಳಿಗೆ ಸ್ಥಿರವಾಗಿದ್ದರೆ, ನಿಫ್ಟಿ ಕೂಡ 70.55 ಅಂಕಗಳ ಕಳೆದುಕೊಂಡು 8,044.15 ಅಂಕಗಳಿಗೆ ಸ್ಥಿರವಾಗಿದೆ.
ಪ್ರಮುಖವಾಗಿ ವೆಂದಾಂತ ಶೇ.2.30, ಟಾಟಾ ಮೋಟಾರ್ಸ್ ಶೇ.2.12, ಟಾಟಾ ಸ್ಟೀಲ್ ಶೇ.2.01 ಮತ್ತು ಎಸ್ ಬಿಐ ನ ಷೇರುಗಳಲ್ಲಿ ಶೇ.1.57ರಷ್ಟು ನಷ್ಟ ಉಂಟಾಗಿದೆ. ಇನ್ನು ಟಾಟಾ ಪವರ್ (ಶೇ.1.13), ಆಕ್ಸಿಸ್ ಬ್ಯಾಂಕ್ (ಶೇ.0.92), ಬಜಾಜ್ ಆಟೋ (ಶೇ.0.76) ಮತ್ತು ಟಿಸಿಎಸ್ (ಶೇ.0.24) ಷೇರುಗಳ ಮೌಲ್ಯದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.