ರಿಯಲ್ ಎಸ್ಟೇಟ್ ಹೂಡಿಕೆಗೆ ಉತ್ತಮ ತಾಣ ಬೆಂಗಳೂರು

ರಿಯಲ್ ಎಸ್ಟೇಟ್ ವ್ಯವಹಾರ ಎಂಬುದು ಭಾರತದಲ್ಲಿ ಅತೀ ಹೆಚ್ಚು ಲಾಭ ತರುವ ಉದ್ಯಮವಾಗಿ ಮಾರ್ಪಟ್ಟಿದೆ. ರಿಯಲ್ ಎಸ್ಟೇಟ್ ಭಾರತದಲ್ಲಿ ಶೀಘ್ರವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, ಅತೀ ಹೆಚ್ಚು ಲಾಭ ತರುವ ಕ್ಷೇತ್ರವಾಗಿದೆ. ರಿಯಲ್ ಎಸ್ಟೇಟ್ ಉದ್ಯಮ ಇಂದು ಭಾರತ ದಕ್ಷಿಣ ಭಾಗದಲ್ಲಿ ಅತೀ ಹೆಚ್ಚು ಬೆಳವಣಿಗೆ ಕಾಣುತ್ತಿದ್ದು, ಅದರಲ್ಲಿಯೂ ಪ್ರಮುಖವಾಗಿ ಬೆಂಗಳೂರು ನಗರ ಹೆಚ್ಚು ಹೆಸರುವಾಸಿಯಾಗಿದೆ.
ಸಿಲಿಕಾನ್ ಸಿಟಿ ಇದೀಗ ಹೂಡಿಕೆದಾರರಿಗೆ ಅತೀ ಹೆಚ್ಚು ಅವಕಾಶ ಒದಗಿಸುವ ನಗರವಾಗಿದ್ದು, ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಪ್ರಶಾಂತ ವಾತಾವರಣ, ಕಾಸ್ಮೋಪಾಲಿಟನ್ ಲುಕ್, ನುರಿತ ಮಾನವ ಸಂಪನ್ಮೂಲ ಇರುವುದರಿಂದ ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿ ತಮ್ಮ ಕಚೇರಿಗಳನ್ನು ಸ್ಥಾಪಿಸುತ್ತಿವೆ. ಹೀಗಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುವ ಕಟ್ಟಡಗಳಿಗೆ ಇಲ್ಲಿ ಹೆಚ್ಚು ಬೇಡಿಕೆ ಬರುತ್ತವೆ. ಹೀಗಾಗಿ ವಾಣಿಜ್ಯ ಉದ್ದೇಶದ ಸ್ಥಿರಾಸ್ತಿ ಮೇಲಿನ ಹೂಡಿಕೆಗೆ ಹೆಚ್ಚು ಅವಕಾಶ ಒದಗಿಸುವ ನಗರವಾಗಿದೆ.
ಇತ್ತೀಚಿನ ಬೆಳವಣಿಗೆಯ ಪ್ರಕಾರ ಬೆಂಗಳೂರು ನಗರದಲ್ಲಿ ಭೂಮಿಯ ಬೆಲೆ ಶೇ.7-21 ರಷ್ಟು ಏರಿಕೆಯಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಇದರ ಬೆಲೆ ದುಪ್ಪಟ್ಟು ಆಗುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಬೆಳವಣಿಗೆ ಕಾಣಲಿಚ್ಚಿಸುವ ಜನರಿಗೆ ಬೆಂಗಳೂರು ಇಂದು ಹೆಚ್ಚು ಲಾಭ ತರುವ ಕ್ಷೇತ್ರವಾಗಿದೆ. ಹೂಡಿಕೆದಾರರಿಗೆ ಮಾಹಿತಿ ನೀಡಲು ಇಂದು ಅನೇಕ ವೆಬ್ ತಾಣಗಳು ಅಂತರ್ಜಾಲದಲ್ಲಿ ತಲೆ ಎತ್ತುತ್ತಿದ್ದು, ಇದರಲ್ಲಿ ನೀಡ್ ಎ ಪ್ರಾಪರ್ಟಿ ( NeedaProperty ) ಎಂಬ ವೆಬ್ ತಾಣವೂ ಒಂದಾಗಿದೆ. ಬೆಂಗಳೂರಿನಲ್ಲಿ ಹೂಡಿಕೆ ಮಾಡುವವರು ಈ ವೆಬ್ ತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಕ್ಕಿಳಿಯುವ ಜನರಿಗೆ ಲಾಭ ತರುವ ಬೆಂಗಳೂರು ನಗರದ ಕೆಲವು ಕ್ಷೇತ್ರಗಳ ಮಾಹಿತಿ ಇಲ್ಲಿದೆ.
ಬೆಂಗಳೂರು ನಗರದ ಪ್ರಾಪರ್ಟಿ ಪ್ರಪಂಚದಲ್ಲಿ ಅತೀ ಹೆಚ್ಚು ಲಾಭ ತರುವ ಕ್ಷೇತ್ರವೆಂದರೆ ಜಯನಗರ. ಜಯನಗರ ಇಂದು ನಗರದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಕಾಣುತ್ತಿರುವ ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಶೈಕ್ಷಣಿಕ ಸಂಸ್ಥೆ, ಆರೋಗ್ಯ ಕೇಂದ್ರ, ಶಾಪಿಂಗ್ ಮಾಲ್ ಹಾಗೂ ಮೂಲಭೂತ ಸೌಕರ್ಯ ಸೇರಿದಂತೆ ಇನ್ನಿತರೆ ಅನುಕೂಲಕರ ವಾತಾವರಣ ಹೊಂದಿರುವ ಅಭಿವೃದ್ಧಿ ನಗರವಾಗಿದೆ. ಇದೀಗ ಜಯನಗರದಲ್ಲಿ ಒಂದು ಚದರ ಅಡಿ ಭೂಮಿಗೆ 8,055 ಸಾವಿರು ರುಪಾಯಿ ಬೆಲೆಯಿದ್ದು, ಬಂಡವಾಳ ಹೂಡಿಕೆದಾರರಿಗೆ ಹೆಚ್ಚು ಲಾಭ ತರುವ ಕ್ಷೇತ್ರವಾಗಿದೆ.
ಇದಲ್ಲದೆ ಹೂಡಿಕೆದಾರರಿಗೆ ಬೆಂಗಳೂರಿನ ಬನಶಂಕರಿ, ಹೊಸೂರು ರಸ್ತೆಯ ಪ್ರದೇಶಗಳು ಕೂಡ ಹೆಚ್ಚ ಲಾಭದಾಯಕವಾಗ ಬಲ್ಲವು. ಈ ಪ್ರದೇಶಗಳು ಇಂದು ಹೆಚ್ಚು ಬೆಳೆವಣಿಗೆ ಕಾಣುತ್ತಿರುವ ಪ್ರದೇಶವಾಗುತ್ತಿದ್ದು. ದಿನದಿಂದ ದಿನಕ್ಕೆ ಇಲ್ಲಿರುವ ಭೂಮಿಯ ಬೆಲೆ ಏರಿಕೆಯಾಗುತ್ತಿರುವುದರಿಂದ ಯಾವುದೇ ಸಂದೇಹವಿಲ್ಲದೆ ಹೂಡಿಕೆದಾರರು ಇಲ್ಲಿನ ಭೂಮಿಗೆ ಹಣ ಹೂಡಬಹುದಾಗಿದೆ. ಇನ್ನು ಮಾರತಳ್ಳಿಯಲ್ಲಿಯೂ ಬಿಲ್ಡರ್ಸ್ ಗಳ ಸಂಖ್ಯೆ ಹೆಚ್ಚುತ್ತಿದ್ದು, ಎನ್ ಬಿಆರ್, ಬ್ರೇನೆ ಅವಲೋನ್, ಶ್ರದ್ಧಾ ಮತ್ತು ಸೃಷ್ಠಿ ಪ್ರಧಾನ್ ಡೆವಲಪರ್ಸ್ ರಂತಹ ಸಂಸ್ಥೆಗಳು ಅಪಾರ್ಟ್ ಮೆಂಟ್, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಈ ಕ್ಷೇತ್ರಗಳಲ್ಲಿ ಒದಗಿಸುತ್ತಿರುವುದರಿಂದ ಹೂಡಿಕೆದಾರರು ಸಂದೇಹವಿಲ್ಲದೆ ಹೂಡಿಕೆ ಮಾಡಬಹುದಾಗಿದೆ.
ದೇವನಹಳ್ಳಿಯು ಬೆಂಗಳೂರು ಏರ್ ಪೋರ್ಟ್ ಪ್ರದೇಶಕ್ಕೆ ಬಹಳ ಹತ್ತಿರ ಪ್ರದೇಶವಾಗಿದೆ. ಇದೀಗ ಅತೀ ಹೆಚ್ಚು ಬೇಡಿಕೆಯಲ್ಲಿರುವ ಪ್ರದೇಶವಾಗಿ ಮಾರ್ಪಟ್ಟಿದೆ. ಇಲ್ಲಿ ಹೂಡಿಕೆ ಮಾಡುವ ಹಣವು ದಿನದಿಂದ ದಿನಕ್ಕೆಏರಿಕೆಯಾಗುತ್ತಿದ್ದು, ಅತೀ ಹೆಚ್ಚು ಲಾಭ ತರುವ ಸ್ಥಳವಾಗಿದೆ. ಇದಲ್ಲದೆ ಹೆಬ್ಬಾಳ ಪ್ರದೇಶ ಕೂಡ ಹೂಡಿಕೆದಾರರ ಗಮನ ಸೆಳೆಯುತ್ತಿದ್ದು, ವಾಣಿಜ್ಯ ಕಟ್ಟಡಗಳು, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ, ಅತ್ಯಾಧುನಿಕ ಶಿಕ್ಷಣ, ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಕ್ಷೇತ್ರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


