

ಪ್ರಧಾನಿ ನರೇಂದ್ರ ಮೋದಿ ಚೀನಾ ಭೇಟಿ ವೇಳೆ ನಡೆದಿದ್ದ ಒಪ್ಪಂದದ ಪರಿಣಾಮ ಭಾರತೀಯ ರೇಪ್ಸೀಡ್ ಊಟ ಆಮದು ಮಾಡಿಕೊಳ್ಳುವುದಕ್ಕೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸುವುದಕ್ಕೆ ಚೀನಾ ನಿರ್ಧರಿಸಿದೆ.
ಗುಣಮಟ್ಟದ ಕಾರಣ ನೀಡಿದ್ದ ಚೀನಾ, ಮೂರು ವರ್ಷಗಳ ಹಿಂದೆ ಭಾರತೀಯ ರೇಪ್ಸೀಡ್ ಊಟವನ್ನು ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ವಿಧಿಸಿತ್ತು. 2011 ರಲ್ಲಿ ಭಾರತದಿಂದ ಸುಮಾರು 650,000 ಟನ್ ರೇಪ್ಸೀಡ್ ಊಟವನ್ನು ಚೀನಾಗೆ ರಫ್ತು ಮಾಡಲಾಗುತ್ತಿತ್ತು ಚೀನಾದ ವಾರ್ಷಿಕ ಆಮದು ಮಾಡಿಕೊಳ್ಳುತ್ತಿದ್ದ ಪದಾರ್ಥಗಳ ಪೈಕಿ ಅರ್ಧದಷ್ಟು ಮಾರುಕಟ್ಟೆಯನ್ನು ಭಾರತೀಯ ರೇಪ್ಸೀಡ್ ಊಟ ವ್ಯಾಪಿಸಿತ್ತು. ಆದರೆ ಭಾರತದಿಂದ ಅಮದಾಗುತ್ತಿದ್ದ ಪದಾರ್ಥದಲ್ಲಿ ವಿಷಯುಕ್ತ ರಾಸಾಯನಿಕ ಅಂಶಗಳು ಕಂಡುಬಂದಿದ್ದರಿಂದ ಚೀನಾ 2011 ರ ಬಳಿಕ ನಿಷೇಧ ವಿಧಿಸಿತ್ತು.
ರೇಪ್ಸೀಡ್ ಊಟ, ಮೀನು ಸಾಕಣೆಗೆ ಅತ್ಯುತೃಉಷ್ಟ ಅಹಾರವಾಗಿದ್ದು, ಚೀನಾದಲ್ಲಿ ವಾರ್ಷಿಕವಾಗಿ 10.8 ದಶಲಕ್ಷ ಟನ್ ಬೇಡಿಕೆ ಇದ್ದು, ಪ್ರಮುಖವಾಗಿ ಚೀನಾದ ಉತ್ತರ ಭಾಗದಲ್ಲಿ ಭಾರತದಿಂದ ಆಮದು ಮಾಡಿಕೊಳ್ಳುವ ರೇಪ್ಸೀಡ್ ಗೆ ಅತಿ ಹೆಚ್ಚಿನ ಬೇಡಿಕೆ ಇದೆ. ಚೀನಾಗೆ ರೇಪ್ಸೀಡ್ ಗಳನ್ನು ಆಮದು ಮಾಡುವುದರಲ್ಲಿ ಭಾರತದ ಹಾಗೂ ಕೆನಡಾ ನಡುವೆ ಪೈಪೋಟಿ ಇದ್ದು, 2011 ರಲ್ಲೇ ಕೆನಡಾದ ರೇಪ್ಸೀಡ್ ಗಳ ಬೆಲೆ ಭಾರತಕ್ಕಿಂತಲೂ ಶೇ.20 ರಷ್ಟು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಭಾರತದ ರೇಪ್ಸೀಡ್ ಗಳಿಗೆ ಹೆಚ್ಹಿನ ಬೆಲೆ ಇದೆ.
ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಪ್ರವಾಸದ ವೇಳೆ ನಡೆದಿದ್ದ ಒಪ್ಪಂದದಂತೆ ಕಳೆದ ಮೂರು ವರ್ಷಗಳಿಂದ ವಿಧಿಸಿದ್ದ ನಿಷೇಧವನ್ನು ಹಿಂಪಡೆಯುತ್ತೇವೆ ಎಂದು ಚೀನಾದ ಆಡಳಿತ ಸ್ಪಷ್ಟಪಡಿಸಿದೆ.