ಆದಾಯ ತೆರಿಗೆ ವಿವರ ಸಲ್ಲಿಕೆಗೆ ಆಗಸ್ಟ್ 31ರ ಗಡುವು

ಕೇಂದ್ರ ವಿತ್ತ ಸಚಿವಾಲಯ ಭಾನುವಾರ ನೂತನ ಆದಾಯ ತೆರಿಗೆ ರಿಟರ್ನ್ ಅರ್ಜಿಗಳನ್ನು ಪ್ರಕಟಿಸಿದ್ದು, ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವ ದಿನಾಂಕವನ್ನು ಆಗಸ್ಟ್ 31ರರೆಗೂ ವಿಸ್ತರಿಸಿದೆ...
ಕೇಂದ್ರ ವಿತ್ತ ಸಚಿವಾಲಯ
ಕೇಂದ್ರ ವಿತ್ತ ಸಚಿವಾಲಯ
Updated on: 

ನವದೆಹಲಿ: ಕೇಂದ್ರ ವಿತ್ತ ಸಚಿವಾಲಯ ಭಾನುವಾರ ನೂತನ ಆದಾಯ ತೆರಿಗೆ ರಿಟರ್ನ್ ಅರ್ಜಿಗಳನ್ನು ಪ್ರಕಟಿಸಿದ್ದು, ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವ ದಿನಾಂಕವನ್ನು ಆಗಸ್ಟ್ 31ರರೆಗೂ ವಿಸ್ತರಿಸಿದೆ ಎಂದು ತಿಳಿದುಬಂದಿದೆ.

ಐಟಿಆರ್ 2 (income tax return) ಮತ್ತು ಐಟಿಆರ್ 2ಎ ಎಂಬ ಮೂರು ಪುಟಗಳ ಅರ್ಜಿಗಳನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಆದಾಯ ತರಿಗೆ ವಿವರಗಳನ್ನು ಭರ್ತಿ ಮಾಡಿ ಇಲಾಖೆಗೆ ಸಲ್ಲಿಸುವಂತೆ ವಿತ್ತ ಸಚಿವಾಲಯ ಹೇಳಿದೆ. ಅಲ್ಲದೆ ಹೊಸ ಐ-ಟಿ ರಿಟರ್ನ್ಸ್ ಅರ್ಜಿಗಳಲ್ಲಿ ವಿದೇಶೀ ಪ್ರವಾಸ, ಸುಪ್ತ ಬ್ಯಾಂಕ್ ಖಾತೆಗಳ ವಿವರಗಳನ್ನು ಬಹಿರಂಗ ಪಡಿಸಬೇಕಾಗಿಲ್ಲ ಎಂದು ಇಲಾಖೆ ತಿಳಿಸಿದೆ.

ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ವಿದೇಶಿ ಪ್ರವಾಸ ಕುರಿತ ವಿವರಗಳನ್ನು ತುಂಬ ಬೇಕಿದ್ದ ಅರ್ಜಿಗಳನ್ನು ವಿವಾದ ಉಂಟಾದ ಹಿನ್ನಲೆಯಲ್ಲಿ ಸಚಿವಾಲಯ ಹಿಂದಕ್ಕೆ ಪಡೆದಿದೆ. ಪ್ರಸ್ತುತ ಸಚಿವಾಲಯ ಬಿಡುಗಡೆ ಮಾಡಿರುವ ಈ ನೂತನ ಅರ್ಜಿಯಲ್ಲಿ ಕೇವಲ ಪಾಸ್ ಪೋರ್ಟ್ ವಿವರ ಮಾತ್ರ ಸಲ್ಲಿಸಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com