ಭಾರತದ ಜಿಡಿಪಿ 2017ಕ್ಕೆ ಶೇ.7 .7 ರಷ್ಟಾಗಲಿದೆ: ವಿಶ್ವ ಬ್ಯಾಂಕ್ ವರದಿ

ವಾಷಿಂಗ್ ಟನ್: ದಕ್ಷಿಣ ಏಷ್ಯಾ ಆರ್ಥಿಕತೆಗೆ ಸಂಬಂಧಿಸಿದ ವರದಿ ನೀಡಿರುವ ವಿಶ್ವ ಬ್ಯಾಂಕ್, 2017 ನೇ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.7 .7 ರಷ್ಟಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಭಾರತದಲ್ಲಿ ಖಾಸಗಿ ಹೂಡಿಕೆಗಳು ಬಲಗೊಳ್ಳುತ್ತಿರುವ ಪರಿಣಾಮ 2016 ರಲ್ಲಿ ಜಿಡಿಪಿ ಶೇ.7 .5 ರಷ್ಟಾಗುವ ನಿರೀಕ್ಷೆ ಇದ್ದು, 2017 ರಲ್ಲಿ ಶೇ.7.7 ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜು ಮಂಡಿಸಿದೆ. ಜಾಗತಿಕ ಆರ್ಥಿಕತೆ ಸಂಕಷ್ಟದಲ್ಲಿದ್ದರೂ, ಭಾರತದಲ್ಲಿ ಹೆಚ್ಚಿನ ಕೃಷಿ ಉತ್ಪಾದನೆ ಭಾರತದ ಜಿಡಿಪಿ ಶೇ.7.7 ಕ್ಕೆ ಏರಿಕೆಯಾಗಲು ನೆರವು ನೀಡಲಿದೆ ಎಂದು ವಿಶ್ವ ಬ್ಯಾಂಕ್ ನ ದಕ್ಷಿಣ ಏಷ್ಯಾ ಉಪಾಧ್ಯಕ್ಷರಾದ ಆನೆಟ್ ಡಿಕ್ಸನ್ ಹೇಳಿದ್ದಾರೆ.
ಇನ್ನು ನೆರೆ ರಾಷ್ಟ್ರ ಪಾಕಿಸ್ತಾನದ ಜಿಡಿಪಿ 2017 ರಲ್ಲಿ ಶೇ.4 .8 ಕ್ಕೆ ಏರಿಕೆಯಾಗಲಿರುವುದಾಗಿ ವಿಶ್ವ ಬ್ಯಾಂಕ್ ನ ವರದಿ ಮೂಲಕ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


