2017ನೇ ಸಾಲಿನ ಅಂತಿಮ ದಿನದ ವಹಿವಾಟು: ಸೆನ್ಸೆಕ್ಸ್ 135 ಅಂಕಗಳ ಏರಿಕೆ

ಈ ಹಿಂದಿನ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಮತ್ತೆ ಏರುಗತಿಯಲ್ಲಿ ಸಾಗಿದ್ದು, ದಿನದ ವಹಿವಾಟಿನ ಆರಂಭದಲ್ಲೇ ಸೆನ್ಸೆಕ್ಸ್ ನೂರಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮುಂಬೈ: ಈ ಹಿಂದಿನ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಮತ್ತೆ ಏರುಗತಿಯಲ್ಲಿ ಸಾಗಿದ್ದು, ದಿನದ ವಹಿವಾಟಿನ ಆರಂಭದಲ್ಲೇ ಸೆನ್ಸೆಕ್ಸ್ ನೂರಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡಿದೆ.
ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 163 ಅಂಕಗಳ ಏರಿಕೆ ಕಾಣುವ ಮೂಲಕ 34,010.29 ಅಂಕಗಳಿಗೆ ಏರಿಕೆಯಾಗಿದೆ. ಇನ್ನು ನಿಫ್ಚಿ ಕೂಡ ಏರುಗತಿಯಲ್ಲಿ ಸಾಗಿದ್ದು, 40 ಅಂಕಗಳ ಏರಿಕೆಯೊಂದಿಗೆ ನಿಫ್ಟಿ 10,522.10 ಅಂಕಗಳಿಗೆ  ಏರಿಕೆಯಾಗಿದೆ. 
ಇಂದಿನ ವಹಿವಾಟಿನಲ್ಲಿ ರಿಲಯನ್ಸ್‌, ಲೂಪಿನ್‌, ಎಚ್‌ ಡಿ ಎಫ್ ಸಿ, ಮಾರುತಿ ಸುಜುಕಿ ಮತ್ತು ಸನ್‌ ಫಾರ್ಮಾ ಷೇರುಗಳು ಹೆಚ್ಚಿನ ವಹಿವಾಟು ನಡೆಸುತ್ತಿದ್ದು, ಪವರ್‌ ಗ್ರಿಡ್‌, ಟಾಟಾ ಸ್ಟೀಲ್‌, ಎಲ್‌ ಆ್ಯಂಡ್‌ ಟಿ, ಅದಾನಿ ಪೋರ್ಟ್‌, ಎಕ್ಸಿಸ್‌  ಬ್ಯಾಂಕ್‌, ಎಸ್‌ಬಿಐ, ಎನ್‌ಟಿಪಿಸಿ, ಏಶ್ಯನ್‌ ಪೇಂಟ್‌, ಎಚ್‌ ಡಿ ಎಫ್ ಸಿ, ಹೀರೋ ಮೋಟೋ ಕಾರ್ಪ್‌, ಐಟಿಸಿ, ಸನ್‌ ಫಾರ್ಮಾ, ಮಾರುತಿ ಸುಜುಕಿ, ಟಿಸಿಎಸ್‌, ರಿಲಯನ್ಸ್‌ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.
ಇನ್ನು ಇಂದು ಪ್ರಸಕ್ತ ವರ್ಷದ ಕೊನೆಯ ವಹಿವಾಟಿನ ದಿನವಾಗಿದ್ದು, ಕೊನೆಯ ದಿನದಂದು ಷೇರುಮಾರುಕಟ್ಟೆಯಲ್ಲಿ ಭಾರತೀಯ ಹೂಡಿಕೆದಾರರು ಹೆಚ್ಚು ಕಾರ್ಯಶೀಲರಾಗಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com