ಬೆಂಗಳೂರು: ಸಾನ್ ಫ್ರಾನ್ಸಿಸ್ಕೊ, ಲಂಡನ್, ಸಿಂಗಾಪುರ ಮತ್ತು ಬೀಜಿಂಗ್ ನಂತಹ ಜಾಗತಿಕ ಉದ್ಯಮ ಕೇಂದ್ರಗಳನ್ನು ಹಿಂದಿಕ್ಕಿ ಬೆಂಗಳೂರು ಡಿಜಿಟಲ್ ಪರಿವರ್ತನೆಗೆ ಹೆಚ್ಚು ಅನುಕೂಲಕರ ನಗರ ಎಂಬ ಕೀರ್ತಿ ಗಳಿಸಿದೆ. ಇಲ್ಲಿ ಜಗತ್ತಿನ ವಿವಿಧ ಕಡೆಗಳಿಂದ ವಾಣಿಜ್ಯೋದ್ಯಮಿಗಳು, ಬೆಂಗಳೂರಿನಲ್ಲಿ ಡಿಜಿಟಲ್ ಪರಿವರ್ತನೆಗೆ ಹೆಚ್ಚಿನ ಅವಕಾಶವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅರ್ಥಶಾಸ್ತ್ರಜ್ಞ ಗುಪ್ತಚರ ಘಟಕ ನಿನ್ನೆ ಬಿಡುಗಡೆ ಮಾಡಿರುವ ವರದಿಯಲ್ಲಿ, ಭಾರತದ ಪ್ರಮುಖ ನಗರಗಳಲ್ಲಿ ಮೂಲಭೂತ ಸೌಕರ್ಯ ಕೊರತೆಯಿದ್ದರು ಕೂಡ, ಮಾಲಿನ್ಯ, ಬಡತನವಿದ್ದರೂ ಸಹ ಡಿಜಿಟಲ್ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರು ಹೊರತುಪಡಿಸಿ ದೆಹಲಿ ಮತ್ತು ಮುಂಬೈ ಕೂಡ ಡಿಜಿಟಲ್ ಮಾಪಕದಲ್ಲಿ ಮುಂದುವರಿದಿವೆ.
ಒಟ್ಟಾರೆ ಪೂರಕ ಪರಿಸರ, ಸೃಜನಾತ್ಮಕತೆ, ಉದ್ಯಮಶೀಲತೆ, ಹಣಕಾಸಿನ ಪರಿಸರ, ಜನರ ಕೌಶಲ್ಯ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಮಾಹಿತಿ, ಸಂವಹನ ತಂತ್ರಜ್ಞಾನಗಳ ಬೆಳವಣಿಗೆಗಳು ಕೂಡ ರ್ಯಾಂಕಿಂಗ್ ಗೆ ಪರಿಗಣಿಸಲಾಗುತ್ತದೆ.
ವಾಣಿಜ್ಯ ಸಂಪರ್ಕ: ಡಿಜಿಟಲ್ ಪರಿಸರದಲ್ಲಿ ಉದ್ಯಮ ವಿಶ್ವಾಸ ಎಂಬ ವರದಿಯನ್ನು ಟೆಲ್ಸ್ಟಾ ಆರಂಭಿಸಿದ್ದು ಚಾರ್ಲ್ಸ್ ರೊಸ್ಸ್ ಮತ್ತು ಡೆನಿಸ್ ಮ್ಯಾಕ್ಕ್ಯೂಲಿ ಬರೆದಿದ್ದಾರೆ. ಇದರಲ್ಲಿ ಆರ್ಥಿಕ ತಜ್ಞರ ಗುಪ್ತಚರ ಘಟಕದ ಪ್ರತಿನಿಧಿಗಳಿದ್ದಾರೆ. ಕಳೆದ ಜೂನ್ ಮತ್ತು ಜುಲೈಯಲ್ಲಿ 45 ನಗರಗಳ 2,620 ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.