ಫೇಸ್ ಬುಕ್ ನ ಭಾರತದ ವ್ಯವಸ್ಥಾಪಕ ನಿರ್ದೇಶಕ ಉಮಂಗ್ ಬೇಡಿ ರಾಜಿನಾಮೆ!

Published On :
ನವದೆಹಲಿ: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಸಂಸ್ಥೆಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಉಮಂಗ್ ಬೇಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಅಡೋಬ್ ಇಂಡಿಯಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಮಂಗ್ ಬೇಡಿ 2016ರ ಜುಲೈ ತಿಂಗಳಲ್ಲಿ ಫೇಸ್ ಬುಕ್ ಸಂಸ್ಥೆಯನ್ನು ಸೇರಿದ್ದರು. ಇದೀಗ ಸುಮಾರು 16 ತಿಂಗಳ ಬಳಿಕ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಬೇಡಿ ರಾಜಿನಾಮೆಯಿಂದಾಗಿ ತೆರವಾಗಿರುವ ಸ್ಥಾನಕ್ಕೆ ತಾತ್ಕಾಲಿಕವಾಗಿ ಫೇಸ್ ಬುಕ್ ಸಂಸ್ಥೆಯ ದಕ್ಷಿಣ ಏಷ್ಯಾದ ಗ್ರಾಹಕ, ಮಾಧ್ಯಮ ವಿಭಾಗದ ನಿರ್ದೇಶಕ ಸಂದೀಪ್ ಭೂಷಣ್ ಅವರು ಹಂಗಾಮಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಮೂಲಗಳ ಪ್ರಕಾರ ಉಮಂಗ್ ಬೇಡಿ ತಮ್ಮದೇ ಸ್ವತಂತ್ರ ತಂತ್ರಜ್ಞಾನ ಸಂಸ್ಥೆ ತೆರೆಯುವ ಮುನ್ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಬೇಡಿ ರಾಜಿನಾಮೆ ವಿಚಾರವನ್ನು ಫೇಸ್ ಬುಕ್ ಸಂಸ್ಥೆ ಸ್ಪಷ್ಟಪಡಿಸಿದ್ದು, ಬೇಡಿ ಫೇಸ್ ಬುಕ್ ಗಾಗಿ ಬಲಿಷ್ಠ ತಂಡವನ್ನು ಕಟ್ಟಿದ್ದರು. ಸಂಸ್ಥೆಯಲ್ಲಿ ಅವರ ಸೇವೆ ಗಣನೀಯ ಮತ್ತು ಪ್ರಶಂಸಾರ್ಹವಾಗಿತ್ತು. ಅವರ ಮುಂದಿನ ಭವಿಷ್ಯದ ಯೋಜನೆಗೆ ಫೇಸ್ ಬುಕ್ ಸಂಸ್ಥೆ ಶುಭ ಹಾರೈಸುತ್ತದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಈ ಹಿಂದೆ ಭಾರತದಲ್ಲಿ ತನ್ನ ಕನಸಿನ ಯೋಜನೆ ಫ್ರೀ ಬೇಸಿಕ್ಸ್ ಅನ್ನು ಜಾರಿಗೆ ತರಲು ಮುಂದಾಗಿದ್ದ ಫೇಸ್ ಬುಕ್ ಸಂಸ್ಥೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿತ್ತು. ನೆಟ್ ನ್ಯೂಟ್ರಾಲಿಟಿ ಸಮಸ್ಯೆಯ ಕಾರಣ ನೀಡಿ ಫೇಸ್ ಬುಕ್ ಸಂಸ್ಥೆಯ ಫ್ರೀ ಬೇಸಿಕ್ಸ್ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀರಾಕರಿಸಿತ್ತು. ಇದೇ ಸಂದರ್ಭದಲ್ಲಿ ಬೇಡಿ ಫೇಸ್ ಬುಕ್ ಸಂಸ್ಥೆಗೆ ಸೇರ್ಪಡೆಯಾಗಿದ್ದರು.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.