ವಾಣಿಜ್ಯ

ಆಗಸ್ಟ್, ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ವಿಳಂಬ ಪಾವತಿ ದಂಡ ತೆರವು: ವಿತ್ತ ಸಚಿವ ಅರುಣ್ ಜೇಟ್ಲಿ

ಆಗಸ್ಟ್, ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ವಿಳಂಬ ಪಾವತಿ ದಂಡ ತೆರವು: ವಿತ್ತ ಸಚಿವ ಅರುಣ್ ಜೇಟ್ಲಿ
ಸಂಗ್ರಹ ಚಿತ್ರ
Published On :
ನವದೆಹಲಿ: ತಡವಾಗಿ ಜಿಎಸ್ ಟಿ ತೆರಿಗೆ ಪಾವತಿ ಮಾಡಿ ದಂಡದ ಭೀತಿ ಎದುರಿಸುತ್ತಿದ್ದ ತೆರಿಗೆದಾರರಿಗೆ ಕೇಂದ್ರ ಸರ್ಕಾರ ರಿಲೀಫ್ ನೀಡಿದ್ದು, ಜಿಎಸ್ ಟಿ ತೆರಿಗೆ ವಿಳಂಬ ಪಾವತಿ ಮೇಲಿನ ದಂಡವನ್ನು ತೆರವುಗೊಳಿಸಿದೆ.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ತೆರಿಗೆ ವಿಳಂಬ ಪಾವತಿ ಮೇಲಿನ ದಂಡವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಈ ಬಗ್ಗೆ ಇಂದು ಟ್ವಿಟರ್ ನಲ್ಲಿ ಮಾಹಿತಿ  ನೀಡಿರುವ ಜೇಟ್ಲಿ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಜಿಎಸ್ ಟಿ ತೆರಿಗೆ ವಿಳಂಬ ಪಾವತಿ ಮೇಲಿನ ದಂಡವನ್ನು ಸರ್ಕಾರ ತೆರವುಗೊಳಿಸಿದೆ. ಅಲ್ಲದೆ ಈಗಾಗಲೇ ವಿಳಂಬ ಪಾವತಿ ಮಾಡಿ ದಂಡ ತೆತ್ತಿರುವ ತೆರಿಗೆದಾರರಿಗೆ  ದಂಡದ ಹಣ ವಾಪಸ್ ನೀಡಲಾಗುತ್ತದೆ. ತೆರಿಗೆದಾರರ ಖಾತೆಗಳಿಗೆ ಶೀಘ್ರವೇ ದಂಡದ ಹಣವನ್ನು ವಾಪಸ್ ಜಮೆ ಮಾಡಲಾಗುತ್ತದೆ ಎಂದು ಜೇಟ್ಲಿ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಕೇಂದ್ರ ವಿತ್ತ ಇಲಾಖೆ ಜುಲೈ ತಿಂಗಳ ಜಿಎಸ್ ಟಿ ತೆರಿಗೆ ವಿಳಂಬ ಪಾವತಿ ಮೇಲಿನ ದಂಡವನ್ನು ಕೂಡ ತೆರವುಗೊಳಿಸಿತ್ತು. ಜಿಎಸ್ ಟಿ ಜಾರಿಯಲ್ಲಿನ ತಾಂತ್ರಿಕ ದೋಷಗಳ ಸರಿಪಡಿಸುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ  ಕ್ರಮ ಅನುಸರಿಸುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ 3ಬಿ ಜಿಎಸ್ ಟಿ ಪಾವತಿ ಮೇಲಿನ ದಂಡವನ್ನು ತೆರವುಗೊಳಿಸಬೇಕು ಎಂದು ಹಲವು ಉಧ್ಯಮಿಗಳು ಆಗ್ರಹಿಸಿದ್ದರು.
ಸರ್ಕಾರಿ ದತ್ತಾಂಶಗಳ ಅನ್ವಯ ಜುಲೈ ತಿಂಗಳಲ್ಲಿ 55.87 ಲಕ್ಷ ಜಿಎಸ್ ಟಿಆರ್-3ಬಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಆಗಸ್ಟ್ ನಲ್ಲಿ 51.37 ಲಕ್ಷ ಅರ್ಜಿಗಳು ಮತ್ತು ಸೆಪ್ಟೆಂಬರ್ ನಲ್ಲಿ 42 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.