ಶುಕ್ರವಾರ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 550 ಅಂಕಗಳ ಕಳೆದುಕೊಂಡು 33,941.72 ಅಂಕಗಳಿಗೆ ಇಳಿಕೆಯಾಗಿದೆ. ಇನ್ನು ನಿಫ್ಟಿ ಕೂಡ 145 ಅಂಕಗಳ ಕುಸಿತ ಕಾಣುವ ಮೂಲಕ 10,429.75 ಅಂಕಗಳಿಗೆ ಕುಸಿತ ಕಂಡಿದೆ. ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಷೇರು ಹೂಡಿಕೆದಾರರಿಗೆ ಭಾರೆ ಹೊಡೆತ ಬಿದ್ದಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.1.33ರಷ್ಟು ನಷ್ಟ ಅನುಭವಿಸಿದೆ.