ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ: ಆಭರಣ ಕ್ಷೇತ್ರದ ಷೇರುಗಳ ಮೌಲ್ಯ ಕುಸಿತ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ ವಂಚನೆ ಪ್ರಕರಣ ಭಾರತೀಯ ಷೇರುಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು, ಪ್ರಮುಖವಾಗಿ ಜ್ಯುವೆಲರಿ ಕ್ಷೇತ್ರದ ಷೇರುಗಳ ಮೌಲ್ಯ ಕುಸಿತ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ ವಂಚನೆ ಪ್ರಕರಣ ಭಾರತೀಯ ಷೇರುಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು, ಪ್ರಮುಖವಾಗಿ ಜ್ಯುವೆಲರಿ ಕ್ಷೇತ್ರದ ಷೇರುಗಳ ಮೌಲ್ಯ ಕುಸಿತ ಕಂಡಿದೆ.
ಭಾರತೀಯ ಷೇರುಮಾರುಕಟ್ಟೆ ಇಂದಿನ ವಹಿವಾಟಿನಲ್ಲಿ 240 ಅಂಕಗಳಷ್ಟು ಏರಿಕೆ ಕಂಡು 34,385 ಅಂಕಗಳಿಗೆ ಏರಿಕೆಯಾಗಿದ್ದು, ನಿಫ್ಟಿ ಕೂಡ 73 ಅಂಕಗಳ ಏರಿಕೆಯೊಂದಿಗೆ 10,570.20 ಅಂಕಗಳಿಗೆ ಏರಿಕೆಯಾಗಿದೆ. ಇನ್ನು ಇಂದಿನ  ವಹಿವಾಟಿನಲ್ಲಿ ಆಭರಣ ಕ್ಷೇತ್ರದ ಷೇರುಗಳ ಮೌಲಯದಲ್ಲಿ ಬರೊಬ್ಬರಿ ಶೇ.19ರಷ್ಟು ಕುಸಿತ ಕಂಡುಬಂದಿದೆ. ಪ್ರಮುಖವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ ವಂಚನೆ ಪ್ರಕರಣ ಬೆಳಕಿಗೆ ಬಂದ ಬಳಿಕ ಕೇಂದ್ರ ಆದಾಯ  ತೆರಿಗೆ ಇಲಾಖೆ ಆಭರಣ ತಯಾರಿಕಾ ಮತ್ತು ಮಾರಾಟ ಸಂಸ್ಥೆಗಳ ಮೇಲೆ ನಿಗಾವಹಿಸಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಪ್ರಮುಖವಾಗಿ ಇಂದಿನ ವಹಿವಾಟಿನಲ್ಲಿ ಖ್ಯಾತ ಗೀತಾಂಜಲಿ ಜ್ಯುವೆಲರ್ಸ್ ಸಂಸ್ಥೆಗೆ ಭಾರಿ ನಷ್ಟವಾಗಿದ್ದು, ಗೀತಾಂಜಲಿ, ಗಿನ್ನಿ, ನಕ್ಷತ್ರ ಮತ್ತು ನಿರಾವ್ ಮೊದಿ ಆಭರಣ ಸಂಸ್ಥೆಗಳ ಮೇಲೆ ತೆರಿಗೆ ಇಲಾಖೆ ನಿಗಾ ವಹಿಸಿದೆ ಎನ್ನಲಾಗಿದೆ.  ನಿನ್ನೆಯಷ್ಟೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಡಳಿತಾಧಿಕಾರಿಗಳು ತನ್ನ ಖಾಖೆಯಲ್ಲಿ 11, 346 ಕೋಟಿ ರೂ. ಅನುಮಾನಾಸ್ಪದ ವ್ಯವಹಾರ ನಡೆದಿರುವುದನ್ನು ಪತ್ತೆ ಮಾಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com