ಮುಂಬೈ: ಕುಸಿತದೊಂದಿಗೆ ಕಳೆದ ವಾರದ ವಹಿವಾಟು ಮುಕ್ತಾಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಮತ್ತೆ ಕುಸಿತದೊಂದಿಗೆ ವಾರದ ವಹಿವಾಟನ್ನು ಆರಂಭಿಸಿದೆ.
ಸೋಮವಾಪ ಬೆಳಗ್ಗೆ ಸೆನ್ಸೆಕ್ಸ್ ಬರೊಬ್ಬರಿ 481 ಅಂಕಗಳ ಕುಸಿತ ಕಂಡಿದ್ದು, 33,811.35 ಅಂಕಗಳಿಗೆ ಸೆನ್ಸೆಕ್ಸ್ ಕುಸಿದಿದೆ. ಅಂತೆಯೇ ನಿಫ್ಟಿ ಕೂಡ 154 ಅಂಕಗಳ ಕುಸಿತದೊಂದಿಗೆ 10,383.10 ಅಂಕಗಳಿಗೆ ಕುಸಿದಿದ್ದು, ಏಷ್ಯನ್ ಮಾರುಕಟ್ಟೆಗಳ ದುರ್ಬಲ ವಹಿವಾಟು ಷೇರುಪೇಟೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.
ಟಾಟಾ ಸ್ಟೀಲ್, ಎಲ್ ಬಿಐ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಲ್ ಅಂಡ್ ಟಿ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದ್ದು, ಇಂದಿನ ಕುಸಿತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಕೂಡ ಪ್ರಭಾವ ಬೀರಿದೆ ಎನ್ನಲಾಗಿದೆ. ಶುಕ್ರವಾರದ ವಹಿವಾಟಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳ ಷೇರು ಮೌಲ್ಯ ಗಣನೀಯ ಪ್ರಮಾಣದಲ್ಲಿ ಕುಸಿದಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಷೇರುದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿರುವುದೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.
ಉಳಿದಂತೆ ಇಂಡಸ್ ಇಂಡ್ ಬ್ಯಾಂಕ್, ಅದಾನಿ ಪೋರ್ಟ್, ಎಂ ಅಂಡ್ ಎಮ್, ಹಿಂದೂಸ್ಥಾನ್ ಯೂನಿಲಿವರ್, ಭಾರ್ತಿ ಏರ್ ಟೆಲ್, ಏಷ್ಯನ್ ಪೇಂಟ್, ಬಜಾಜ್ ಆಟೋ, ಯೆಸ್ ಬ್ಯಾಂಕ್, ಒಎನ್ ಜಿಸಿ ಮತ್ತು ಕೋಲ್ ಇಂಡಿಯಾ ಷೇರುಗಳ ಮೌಲ್ಯದಲ್ಲಿ ಶೇ.3.22ರವರೆಗೂ ಕುಸಿತ ಕಂಡುಬಂದಿದೆ.