

ನವದೆಹಲಿ: ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿದ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರುವಾಗಲೇ ಇಂತಹದ್ದೇ ಮತ್ತೊಂದು ಕೇಸು ಕೇಳಿಬಂದಿದೆ.
ಕೇಂದ್ರ ತನಿಖಾ ದಳ(ಸಿಬಿಐ) ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ ಆರ್ ಪಿ ಇನ್ಫೋಸಿಸ್ಟಮ್ ಕಂಪೆನಿ 515.15 ಕೋಟಿ ರೂಪಾಯಿಗಳನ್ನು ಬ್ಯಾಂಕಿಗೆ ವಂಚಿಸಿದೆ ಎಂದು ಕೇಸು ದಾಖಲಿಸಿದೆ.
ಕಂಪೆನಿ ನಿರ್ದೇಶಕ ಶಿವಾಜಿ ಪಂಜ, ಕೌಸ್ತವ್ ರಾಯ್, ವಿನಯ್ ಬಫ್ನ, ಉಪಾಧ್ಯಕ್ಷ ದೆಬ್ ನಾತ್ ಪಾಲ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಕಳೆದ ಜೂನ್ ತಿಂಗಳಿನಲ್ಲಿ ಪಂಜ ಮತ್ತು ಆತನ ಇಬ್ಬರು ಸಹೋದ್ಯೋಗಿಗಳು ಮತ್ತು ಆರ್ ಪಿ ಇನ್ಫೋಸಿಸ್ಟಮ್ ಕಂಪೆನಿ ಐಡಿಬಿಐ ಬ್ಯಾಂಕಿಗೆ 180.44 ಕೋಟಿ ರೂಪಾಯಿ ವಂಚಿಸಿದೆ ಎಂದು ಕೇಸು ದಾಖಲಾಗಿತ್ತು.