ಸ್ಮಾರ್ಟ್ ಫೋನ್
ಸ್ಮಾರ್ಟ್ ಫೋನ್

ಚೀನಾ ಸ್ಮಾರ್ಟ್ ಫೋನ್ ಮಾರಾಟದಲ್ಲಿ ಶೇ.4 ರಷ್ಟು ಕುಸಿತ!

ಸ್ಮಾರ್ಟ್ ಫೋನ್ ಮಾರಾಟದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ರಾಷ್ಟ್ರ ಚೀನಾದಲ್ಲಿ 2017 ರಲ್ಲಿ ಮೊದಲ ಬಾರಿಗೆ ಸ್ಮಾರ್ಟ್ ಫೋನ್ ಮಾರಾಟ ಕುಸಿತ ಕಂಡಿದೆ.
ಬೀಜಿಂಗ್: ಸ್ಮಾರ್ಟ್ ಫೋನ್ ಮಾರಾಟದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ರಾಷ್ಟ್ರ ಚೀನಾದಲ್ಲಿ 2017 ರಲ್ಲಿ ಮೊದಲ ಬಾರಿಗೆ ಸ್ಮಾರ್ಟ್ ಫೋನ್ ಮಾರಾಟ ಕುಸಿತ ಕಂಡಿದೆ.  
ಚೀನಾದಲ್ಲಿನ ಸ್ಮಾರ್ಟ್ ಫೋನ್ ಸಾಗಣೆ ಶೇ.4 ರಷ್ಟು ಕಡಿಮೆಯಾಗಿದ್ದು, 113 ಮಿಲಿಯನ್ ಯುನಿಟ್ ಗಳಷ್ಟಾಗಿದೆ ಎಂದು ಸಿಂಗಪೂರ್ ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲೀಸ್ ಹೇಳಿದೆ. 
ಇನ್ನು ಹುವಾವೇ ಚೀನಾದಲ್ಲಿ ಅತ್ಯಂತ ಹೆಚ್ಚು ಅಂದರೆ 24 ಮಿಲಿಯನ್ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಿದ್ದು 2017 ರಲ್ಲಿ ಒಟ್ಟು 90 ಮಿಲಿಯನ್ ಫೋನ್ ಗಳನ್ನು ಮಾರಾಟ ಮಾಡಿದೆ. 
ಇನ್ನು ಓಪ್ಪೋ ಹಾಗೂ ವಿವೋ ಫೋನ್ ಗಳ ಸಾಗಣೆ ಪ್ರಮಾಣದಲ್ಲಿಯೂ ಶೇ.16 ರಷ್ಟು ಕುಸಿತ ಕಂಡಿದ್ದು, ಓಪ್ಪೋ 19 ಮಿಲಿಯನ್ ಸ್ಮಾರ್ಟ್ ಫೋನ್ ಹಾಗೂ ವಿವೋ 17 ಮಿಲಿಯನ್ ಡಿವೈಸ್ ಗಳನ್ನು ಮಾರಾಟ ಮಾಡಿವೆ. 

Related Stories

No stories found.

Advertisement

X
Kannada Prabha
www.kannadaprabha.com