ಫಿಚ್ ಮುನ್ನೋಟ: 2019 ನೇ ಆರ್ಥಿಕ ವರ್ಷದ ಭಾರತದ ಬೆಳವಣಿಗೆ ದರ ಶೇ.7.8 ಕ್ಕೆ ಏರಿಕೆ

ಅಮೆರಿಕದ ಬಹುರಾಷ್ಟ್ರೀಯ ಫಿಚ್ ರೇಟಿಂಗ್ ಭಾರತದ ಪ್ರಸಕ್ತ ಆರ್ಥಿಕ ವರ್ಷದ ಬೆಳವಣಿಗೆಯನ್ನು ಶೇ.7.8 ಕ್ಕೆ ಏರಿಕೆ ಮಾಡಿದೆ. ಈ ಹಿಂದೆ 7.4 ರಷ್ಟಿರಲಿದೆ ಎಂದು ರೇಟಿಂಗ್ ಸಂಸ್ಥೆ ಅಂದಾಜಿಸಿತ್ತು.
ಫಿಚ್ ಮುನ್ನೋಟ: 2019 ನೇ ಆರ್ಥಿಕ ವರ್ಷದ ಭಾರತದ ಬೆಳವಣಿಗೆ ದರ ಶೇ.7.8 ಕ್ಕೆ ಏರಿಕೆ
ಫಿಚ್ ಮುನ್ನೋಟ: 2019 ನೇ ಆರ್ಥಿಕ ವರ್ಷದ ಭಾರತದ ಬೆಳವಣಿಗೆ ದರ ಶೇ.7.8 ಕ್ಕೆ ಏರಿಕೆ
ನವದೆಹಲಿ: ಅಮೆರಿಕದ ಬಹುರಾಷ್ಟ್ರೀಯ ಫಿಚ್ ರೇಟಿಂಗ್ ಭಾರತದ ಪ್ರಸಕ್ತ ಆರ್ಥಿಕ ವರ್ಷದ ಬೆಳವಣಿಗೆಯನ್ನು ಶೇ.7.8 ಕ್ಕೆ ಏರಿಕೆ ಮಾಡಿದೆ. ಈ ಹಿಂದೆ 7.4 ರಷ್ಟಿರಲಿದೆ ಎಂದು ರೇಟಿಂಗ್ ಸಂಸ್ಥೆ ಅಂದಾಜಿಸಿತ್ತು. 
ಆರ್ಥಿಕ ಪರಿಸ್ಥಿತಿಗಳು, ಜಾಗತಿಕ ತೈಲ ಬೆಲೆ, ವಾಪಸ್ಸಾಗಬೇಕಿರುವ ಸಾಲದ ಮೊತ್ತ ದೇಶದ ಆರ್ಥಿಕ ಅಭಿವೃದ್ಧಿಗೆ ಸ್ವಲ್ಪ ಮಟ್ಟಿಗಿನ ಹಿನ್ನಡೆಯುಂಟು ಮಾಡಿದೆ ಎಂದು ಫಿಚ್ ಹೇಳಿದೆ.  ಜಾಗತಿಕ ಮಟ್ಟದ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಪ್ರಕಟಿಸಿರುವ ಫಿಚ್ ಸಂಸ್ಥೆ, ಅಮೆರಿಕದ ರಕ್ಷಣಾತ್ಮಕ ವ್ಯಾಪಾರ ನೀತಿಗಳು ಜಾಗತಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಅಮೆರಿಕ-ಚೀನಾ ನಡುವಿನ ಟ್ರೇಡ್ ವಾರ್ 2019 ರ ಜಿಡಿಪಿ ಮುನ್ನೋಟವನ್ನು ಕುಗ್ಗಿಸುವಂತೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com