ಹೊಸ ಜಿಯೊ ಫೋನ್ ನೆಕ್ಸ್ಟ್ ಮೊಬೈಲ್ ದೀಪಾವಳಿಗೆ ಲಭ್ಯ: ಬೆಲೆ 6,499 ರೂ.

ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಸಂಸ್ಥೆ ನೀಡಿದೆ. ಒಂದೇ ಸಲಕ್ಕೆ ಆರೂವರೆ ಸಾವಿರ ರೂ. ತೆರಲು ಶಕ್ತರಲ್ಲದವರು ಕಂತಿನಲ್ಲಿ ಈ ಮೊಬೈಲ್ ಖರೀದಿಸಬಹುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಹುನಿರೀಕ್ಷಿತ ಜಿಯೊಫೋನ್ ನೆಕ್ಸ್ಟ್ ಈ ಬಾರಿ ದೀಪಾವಳಿಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ರಿಲಯನ್ಸ್ ಮತ್ತು ಗೂಗಲ್ ಸಂಸ್ಥೆ ಜಂಟಿ ಪ್ರಕಟಣೆ ಹೊರಡಿಸಿದೆ. 

ಈ ನೂತನ ಫೋನ್ ಬೆಲೆ 6,499 ರೂ. ನಿಗದಿಪಡಿಸಲಾಗಿದೆ. ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಸಂಸ್ಥೆ ನೀಡಿದೆ. ಒಂದೇ ಸಲಕ್ಕೆ ಆರೂವರೆ ಸಾವಿರ ರೂ. ತೆರಲು ಶಕ್ತರಲ್ಲದವರು ಕಂತಿನಲ್ಲಿ ಈ ಮೊಬೈಲ್ ಖರೀದಿಸಬಹುದು.

1,999 ರೂ. ಡೌನ್ ಪೇಮಂಟ್ ಕೊಟ್ಟು 18- 24 ತಿಂಗಳುಗಳ ಕಾಲ ಉಳಿದ ಹಣವನ್ನು ಕಂತು ಕಟ್ಟಬಹುದು. ಏಂಟ್ರಿ ಲೆವೆಲ್ ಮೊಬೈಲ್ ಕೆಟಗರಿಯಲ್ಲಿ ಕಂತು ಸೌಲಭ್ಯ ಸ್ಮಾರ್ಟ್ ಫೋನ್ ಲಭ್ಯವಾಗುತ್ತಿರುವುದು ಇದೇ ಮೊದಲು ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ. 

ಈ ಮೊಬೈಲ್ ಕ್ವಾಲ್ ಕಾಂ ಚಿಪ್ ಸೆಟ್ ಹೊಂದಿದ್ದು, ಟಾಕ್ ಟೈಮ್ ಮತ್ತು ಡೇಟಾ ಪ್ಯಾಕೇಜ್ ಸಹಿತ ಒಳಗೊಳ್ಳಲಿದೆ. ಮೊಬೈಲ್ ಆಪರೇಟಿಂಗ್ ಸಿಸ್ಟಂ ಪ್ರಗತಿ ಯನ್ನು ಜಿಯೊ ಮತ್ತು ಗೂಗಲ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿ ಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com