ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕಚ್ಚಾ ತೈಲ ಬೆಲೆ ಏರಿಕೆ ಎಫೆಕ್ಟ್; ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಶೇ.2ರಷ್ಟು ಕುಸಿತ

ವಿದೇಶಿ ಹೂಡಿಕೆದಾರರಿಂದ ನಿರಂತರ ಹಣ ಹೊರಹೋಗುತ್ತಿರುವುದೂ ದೇಶೀಯ ಷೇರು ಮಾರುಕಟ್ಟೆಗೆ ಮತ್ತಷ್ಟು ಒತ್ತಡ ತಂದಿದೆ.
Representational image
ಸಾಂದರ್ಭಿಕ ಚಿತ್ರ
Updated on

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಯುದ್ಧ ತೀವ್ರಗೊಳಿಸುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ರಾಜಕೀಯ ಭೂಗೋಳಿಕ ಉದ್ವಿಗ್ನತೆ ಹೆಚ್ಚಾಗಿ, ಕಚ್ಚಾ ತೈಲದ ಬೆಲೆ ಇಂದು ಏರಿಕೆಯಾಗಿದ್ದು, ಇದರ ಪರಿಣಾಮವಾಗಿ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸುಮಾರು 2 ಶೇಕಡಾ ಕುಸಿದಿವೆ.

ವಿದೇಶಿ ಹೂಡಿಕೆದಾರರಿಂದ ನಿರಂತರ ಹಣ ಹೊರಹೋಗುತ್ತಿರುವುದೂ ದೇಶೀಯ ಷೇರು ಮಾರುಕಟ್ಟೆಗೆ ಮತ್ತಷ್ಟು ಒತ್ತಡ ತಂದಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 1,433.72 ಅಂಕಗಳು (1.96%) ಕುಸಿದು 71,700.60ಕ್ಕೆ ಇಳಿದಿದೆ. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 445.70 ಅಂಕಗಳು (1.97%) ಕುಸಿದು 22,233.70ಕ್ಕೆ ತಲುಪಿದೆ.

ನಿಫ್ಟಿ-ಫಿಫ್ಟಿ ಕುಸಿತ

ಸೆನ್ಸೆಕ್ಸ್‌ನ ಎಲ್ಲಾ 30 ಕಂಪನಿಗಳ ಷೇರುಗಳು ಕುಸಿತದಲ್ಲಿದ್ದು, ಸನ್ ಫಾರ್ಮಾ, ಇಂಡಿಗೋ, ಅದಾನಿ ಪೋರ್ಟ್ಸ್, ಎಟರ್ನಲ್, ಲಾರ್ಸನ್ & ಟೂಬ್ರೋ, ಏಷಿಯನ್ ಪೇಂಟ್ಸ್, ಎನ್‌ಟಿಪಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟ್ರೆಂಟ್, ಕೋಟಕ್ ಮಹೀಂದ್ರ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಪವರ್‌ಗ್ರಿಡ್ ಪ್ರಮುಖವಾಗಿ ಹಿನ್ನಡೆ ಕಂಡಿವೆ.

ಮುಂದಿನ ಎರಡು-ಮೂರು ವಾರಗಳಲ್ಲಿ ಇರಾನ್ ಮೇಲೆ ತೀವ್ರ ದಾಳಿ ಮಾಡುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ ಹಿನ್ನೆಲೆಯಲ್ಲಿ ಮಾರುಕಟ್ಟೆ ಮನೋಭಾವ ಮತ್ತೆ ನಕಾರಾತ್ಮಕವಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಸುಮಾರು 5 ಶೇಕಡಾ ಏರಿಕೆ ಕಂಡು 105 ಡಾಲರ್ ತಲುಪಿದೆ. ಅಮೆರಿಕದ 10 ವರ್ಷದ ಬಾಂಡ್ ಯೀಲ್ಡ್ 4.36 ಶೇಕಡಾ ಮಟ್ಟಕ್ಕೆ ಏರಿಕೆಯಾಗಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮೇಲೆ ಸ್ವಲ್ಪ ಮಟ್ಟಿನ ಒತ್ತಡ ಉಂಟುಮಾಡಿದೆ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

Representational image
ಹೊಸ ವಿತ್ತೀಯ ವರ್ಷದಲ್ಲಿ ಆಗಿರುವ ಬದಲಾವಣೆಗಳೇನು ಗೊತ್ತಾ? (ಹಣಕ್ಲಾಸು)

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) 8,331.15 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದು, ದೇಶೀಯ ಸಾಂಸ್ಥಿಕ ಹೂಡಿಕೆದಾರರು (DIIs) 7,171.80 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಷೇರು ವಿನಿಮಯ ಕೇಂದ್ರದ ಅಂಕಿಅಂಶಗಳು ತಿಳಿಸಿವೆ.

ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆ, ವ್ಯಾಪಾರ ಹಿನ್ನಡೆ ( trade deficit) ವಿಸ್ತರಣೆ, ಹಣಕಾಸು ವರ್ಗಾವಣೆ ಕುಸಿತದ ಭೀತಿ ಹಾಗೂ ನಿರಂತರ ವಿದೇಶಿ ಹೂಡಿಕೆ ಹೊರಹೋಗುವಿಕೆ ಅಂಶಗಳು ರೂಪಾಯಿ ಮೇಲೆ ಭಾರೀ ಒತ್ತಡ ತಂದಿದ್ದು, ಆರ್‌ಬಿಐ ಕೈಗೊಂಡ ಕ್ರಮಗಳಿದ್ದರೂ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ವಿಜಯಕುಮಾರ್ ಹೇಳಿದರು.

Representational image
ಇರಾನ್ ಯುದ್ಧ ಮುಕ್ತಾಯ ಹಂತದಲ್ಲಿದೆ, ಇನ್ನು 2-3 ವಾರ ಟೆಹ್ರಾನ್ ಮೇಲೆ ದಾಳಿ ತೀವ್ರ; ದೇಶವನ್ನುದ್ದೇಶಿಸಿ ಡೊನಾಲ್ಡ್ ಟ್ರಂಪ್ ಭಾಷಣ; Video

ಏಷ್ಯಾ ಮಾರುಕಟ್ಟೆ ಕೂಡ ಕುಸಿತ

ಏಷ್ಯಾ ಷೇರು ಮಾರುಕಟ್ಟೆಗಳಲ್ಲೂ ಕುಸಿತ ಕಂಡುಬಂದಿದ್ದು, ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕ 4.31%, ಜಪಾನ್‌ನ ನಿಕ್ಕೇಯಿ 225 ಸೂಚ್ಯಂಕ 2.24%, ಹಾಂಗ್ ಕಾಂಗ್‌ನ ಹ್ಯಾಂಗ್ ಸೇಂಗ್ 1.04% ಮತ್ತು ಶಾಂಘೈ SSE ಕಾಂಪೋಸಿಟ್ ಸೂಚ್ಯಂಕ 0.53% ಕುಸಿದಿವೆ.

ಇದರ ಮಧ್ಯೆ, ಅಮೆರಿಕದ ಷೇರು ಮಾರುಕಟ್ಟೆಗಳು ಗಮನಾರ್ಹ ಏರಿಕೆಯಲ್ಲಿ ನಿನ್ನೆ ಮುಕ್ತಾಯಗೊಂಡಿವೆ.

ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲದ ಬೆಲೆ 4.44% ಏರಿಕೆ ಕಂಡು ಪ್ರತಿ ಬ್ಯಾರೆಲ್‌ಗೆ 105.65 ಡಾಲರ್ ಆಗಿದೆ. ಬಿಎಸ್‌ಇ ಸೆನ್ಸೆಕ್ಸ್ 1,186.77 ಅಂಕಗಳು ಏರಿಕೆ ಕಂಡು 73,134.32ಕ್ಕೆ ಮುಕ್ತಾಯಗೊಂಡಿದ್ದು, ಎನ್‌ಎಸ್‌ಇ ನಿಫ್ಟಿ 348 ಅಂಕಗಳು ಏರಿಕೆ ಕಂಡು 22,679.40ಕ್ಕೆ ಮುಕ್ತಾಯಗೊಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com