ಮನೆಯಲ್ಲಿ ಹಣ ಇಡುವುದಕ್ಕೂ ಇದೆಯಾ ಮಿತಿ? Income Tax ನಿಯಮ ಹೇಳೋದು ಏನು?

ನಮ್ಮಲ್ಲಿ ಅನೇಕರು ತುರ್ತು ಸಂದರ್ಭಕ್ಕಾಗಿ ಮನೆಯಲ್ಲಿ ಸ್ವಲ್ಪ ಹಣವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಮತ್ತು ಎಷ್ಟು ಹಣ ಇದ್ದರೆ ಆದಾಯ ತೆರಿಗೆ ಅಧಿಕಾರಿಗಳು ರೇಡ್ ಮಾಡುತ್ತಾರೆ ಎಂಬ ಗೊಂದಲ ಅನೇಕರಲ್ಲಿದೆ. ಆ ಕುರಿತ ಮಾಹಿತಿ ಇಲ್ಲಿದೆ:
Income Tax
ಮನೆಯಲ್ಲಿ ಹಣ ಇಡುವುದಕ್ಕೂ ಇದೆಯಾ ಮಿತಿ?AI Image
Updated on: 

ಆಗಾಗ ನಾವು ಅವರ ಮನೆಗೆ ಐಟಿ ರೈಡ್ ನಲ್ಲಿ 2 ಕೋಟಿ ಸಿಕ್ತು, ಇವರ ಮನೆ ರೈಡ್ ನಲ್ಲಿ 8 ಕೋಟಿ ಸಿಕ್ತು ಅಂತ ಕೇಳಿರುತ್ತೀವಿ! ಹಾಗಾದ್ರೆ ನಾವು ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಕೋಬಹುದು? ಇದಕ್ಕೆ ಲಿಮಿಟ್ ಇದ್ಯಾ? ಎಂಬ ಗೊಂದಲ ಅನೇಕರಲ್ಲಿದೆ. ನಿಜ ಹೇಳ್ಬೇಕಂದ್ರೆ ಲಿಮಿಟ್ ಇಲ್ಲ, ಆದ್ರೆ ಒಂದು ಕಂಡೀಷನ್ ಇದೆ. ಆ ಕುರಿತ ವರದಿ ಇಲ್ಲಿದೆ:

ಮನೆಯಲ್ಲಿ ಹಣ ಇಡಲು ಮಿತಿ ಇದೆಯಾ?

ಭಾರತದ ಆದಾಯ ತೆರಿಗೆ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಇಂತಿಷ್ಟೇ ನಗದು ಹಣವನ್ನು ಇಟ್ಟುಕೊಳ್ಳಬೇಕು ಎನ್ನುವ ಯಾವುದೇ ನಿರ್ದಿಷ್ಟ ಮಿತಿ ಇಲ್ಲ. ನೀವು ನಿಮ್ಮ ಮನೆಯಲ್ಲಿ ಕಾನೂನುಬದ್ಧವಾಗಿ ಎಷ್ಟು ಹಣವನ್ನು ಬೇಕಾದರೂ ಇಟ್ಟುಕೊಳ್ಳಬಹುದು. ಅದರಂತೆ, ಕೇವಲ ಮನೆಯಲ್ಲಿ ಹಣ ಇಟ್ಟ ತಕ್ಷಣ ಆದಾಯ ತೆರಿಗೆ ಇಲಾಖೆಯು ನಿಮ್ಮ ಮನೆಗೆ ದಾಳಿ ಮಾಡುವುದಿಲ್ಲ. ಆದರೆ ನೀವು ಇಟ್ಟುಕೊಂಡಿರುವ ಪ್ರತಿ ರೂಪಾಯಿಗೂ ಸರಿಯಾದ ಲೆಕ್ಕ ಮತ್ತು ಕಾನೂನುಬದ್ಧ ಆಧಾರ ಇರಬೇಕಾಗುತ್ತದೆ.

ಎಷ್ಟು ಕ್ಯಾಶ್ ಇದ್ದರೆ ಐಟಿ ರೇಡ್ ಆಗುತ್ತದೆ?

ಆದಾಯ ತೆರಿಗೆ ಇಲಾಖೆ ಸಾಮಾನ್ಯವಾಗಿ ಒಂದು ನಿರ್ದಿಷ್ಟ ಮೊತ್ತದ ಮೇಲೆ ರೇಡ್ ಮಾಡುವುದಿಲ್ಲ. ನಿಮ್ಮ ಆದಾಯಕ್ಕೂ ನಿಮ್ಮ ಬಳಿ ಇರುವ ಆಸ್ತಿ ಮತ್ತು ಹಣಕ್ಕೂ ತಾಳೆಯಾಗದಿದ್ದಾಗ ರೇಡ್ ನಡೆಯುತ್ತದೆ. ಆದರೂ ಕೆಲವು ನಿಯಮಗಳಿವೆ. ಒಂದು ದಿನದಲ್ಲಿ 20 ಲಕ್ಷಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸಿದರೆ ಅಥವಾ ನಿಮ್ಮ ಬ್ಯಾಂಕ್ ಖಾತೆಯಿಂದ ಒಂದೇ ದಿನ 1 ಕೋಟಿಗಿಂತ ಹೆಚ್ಚು ಹಣ ತೆಗೆದರೆ ಇಲಾಖೆಗೆ ಮಾಹಿತಿ ಹೋಗುತ್ತದೆ. ಮನೆಯಲ್ಲಿ 30 ಲಕ್ಷಕ್ಕಿಂತ ಹೆಚ್ಚು ಲೆಕ್ಕವಿಲ್ಲದ ಹಣ ಸಿಕ್ಕಿದರೆ ಅದು ತನಿಖೆಗೆ ಕಾರಣವಾಗಬಹುದು.

Money
ಹಣAI Image

ಲೆಕ್ಕವಿಲ್ಲದ ಹಣ ಸಿಕ್ಕರೆ ಆಗುವ ದಂಡವೇನು?

ಒಂದು ವೇಳೆ ಆದಾಯ ತೆರಿಗೆ ದಾಳಿಯ ಸಮಯದಲ್ಲಿ ನಿಮ್ಮ ಮನೆಯಲ್ಲಿ ಸಿಕ್ಕ ನಗದಿಗೆ ಸೂಕ್ತ ದಾಖಲೆ ನೀಡಲು ವಿಫಲರಾದರೆ, ಆ ಹಣವನ್ನು ಬಹಿರಂಗಪಡಿಸದ ಆದಾಯ ಎಂದು ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ತೆರಿಗೆ ಕಾಯ್ದೆಯ ನಿಯಮಗಳ ಪ್ರಕಾರ, ಅಂತಹ ಪತ್ತೆಯಾಗದ ಹಣದ ಮೇಲೆ ಶೇಕಡಾ 78 ರಷ್ಟು ತೆರಿಗೆ ಮತ್ತು ದಂಡವನ್ನು ವಿಧಿಸಲಾಗುತ್ತದೆ. ಜೊತೆಗೆ ಅಕ್ರಮದ ತೀವ್ರತೆಯನ್ನು ನೋಡಿ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇರುತ್ತದೆ.

Income Tax
ಬ್ಯಾಂಕ್ ಖಾತೆಗೆ ಲಕ್ಷ ಲಕ್ಷ ಹಣ ಹಾಕ್ತಿದ್ದೀರಾ? IT ನೋಟೀಸ್ ಬರಬಹುದು ಎಚ್ಚರ! ಹಾಗಾದ್ರೆ, ನಿಮ್ಮ ಸೇವಿಂಗ್ಸ್ ಅಕೌಂಟ್‌ಗೆ ಎಷ್ಟು ಹಣ ಹಾಕಬಹುದು?

ನಗದು ವ್ಯವಹಾರದ ಪ್ರಮುಖ ನಿಯಮಗಳು:

ದೇಶದಲ್ಲಿ ಮನೆಯಲ್ಲಿ ಹಣ ಇಡಲು ಮಿತಿ ಇಲ್ಲದಿದ್ದರೂ, ನಗದು ರೂಪದ ವಹಿವಾಟುಗಳಿಗೆ ಕೆಲವು ಕಠಿಣ ಮಿತಿಗಳಿವೆ. ಯಾವುದೇ ಒಬ್ಬ ವ್ಯಕ್ತಿಯಿಂದ ಒಂದು ದಿನದಲ್ಲಿ ಅಥವಾ ಒಂದು ವ್ಯವಹಾರಕ್ಕಾಗಿ 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ. ಹಾಗೆಯೇ ಯಾವುದೇ ವ್ಯಕ್ತಿಯಿಂದ 20,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲವನ್ನು ನಗದು ರೂಪದಲ್ಲಿ ಪಡೆಯಲು ಅಥವಾ ಮರುಪಾವತಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಬ್ಯಾಂಕ್ ಖಾತೆಗೆ ಒಂದೇ ಬಾರಿಗೆ 50,000 ರೂಪಾಯಿಗಿಂತ ಹೆಚ್ಚು ನಗದು ಜಮಾ ಮಾಡಲು ಪಾನ್ ಕಾರ್ಡ್ ಕಡ್ಡಾಯವಾಗಿದೆ.

ಕೊನೆಯದಾಗಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ನಿಮ್ಮ ಮನೆಯಲ್ಲಿರುವ ಹಣವು ಬ್ಯಾಂಕ್ ನಿಂದ ಡ್ರಾ ಮಾಡಿದ್ದಾಗಿದ್ದರೆ, ಆಸ್ತಿ ಮಾರಾಟದ ಕಾನೂನುಬದ್ಧ ಗಳಿಕೆಯಾಗಿದ್ದರೆ ಅಥವಾ ವ್ಯಾಪಾರದ ಲಾಭವಾಗಿದ್ದು ಅದಕ್ಕೆ ಸರಿಯಾಗಿ ತೆರಿಗೆ ಪಾವತಿಸಿದ್ದರೆ ನೀವು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ.

Income Tax
ದೇಶದ ಬ್ಯಾಂಕ್‌ಗಳಲ್ಲಿ ಧೂಳು ಹಿಡಿಯುತ್ತಿದೆ 86,917 ಕೋಟಿ ರೂಪಾಯಿ! ನಿಮ್ಮ ಹಣವೂ ಇರಬಹುದಾ? ಹೀಗೆ ಚೆಕ್ ಮಾಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com