Indian Stock Market: ಏಷ್ಯಾ ಮಾರುಕಟ್ಟೆ ದುರ್ಬಲ ವಹಿವಾಟು, Sensex 117 ಅಂಕ ಏರಿಕೆ, ರೂಪಾಯಿ ಮೌಲ್ಯ ದಾಖಲೆ ಕುಸಿತ

ಬುಧವಾರ ಭಾರತೀಯ ಷೇರುಮಾರುಕಟ್ಟೆ ಫ್ಲಾಟ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.16ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.17ರಷ್ಟು ಅಲ್ಪ ಏರಿಕೆ ದಾಖಲಿಸಿದೆ.
Indian stock market
ಷೇರುಮಾರುಕಟ್ಟೆ
Updated on

ಮುಂಬೈ: ಏಷ್ಯಾ ಮಾರುಕಟ್ಟೆಯ ದುರ್ಬಲ ವಹಿವಾಟಿನ ಹೊರತಾಗಿಯೂ ಭಾರತೀಯ ಷೇರುಮಾರುಕಟ್ಟೆ ಬುಧವಾರ ಅಲ್ಪ ಪ್ರಮಾಣದ ಏರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಬುಧವಾರ ಭಾರತೀಯ ಷೇರುಮಾರುಕಟ್ಟೆ ಫ್ಲಾಟ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.16ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.17ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು 117.54ಅಂಕಗಳ ಏರಿಕೆಯೊಂದಿಗೆ 75,318.39 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 41 ಅಂಕಗಳ ಏರಿಕೆಯೊಂದಿಗೆ 23,659.00 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಆಟೋ, ಹಣಕಾಸು ಮತ್ತು ತೈಲ ಮತ್ತು ಅನಿಲ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ. ಪ್ರಮುಖವಾಗಿ ನಿಫ್ಟಿ ಆಯಿಲ್ ಮತ್ತು ಗ್ಯಾಸ್ ವಲಯದ ಷೇರುಗಳ ಮೌಲ್ಯ ಶೇ.1.67ರಷ್ಟು ಏರಿಕೆ ದಾಖಲಿಸಿದೆ. ಅಂತೆಯೇ FMCG, ಐಟಿ ಮತ್ತು ಮಾಧ್ಯಮ ವಲಯದ ಷೇರುಗಳು ನಷ್ಟ ಕಂಡಿವೆ.

Indian stock market
ಇಟಲಿಯಲ್ಲಿ ಪ್ರಧಾನಿ ಮೋದಿ: "ವೆಲ್‌ಕಮ್ ಟು ರೋಮ್ ಮೈ ಫ್ರೆಂಡ್" ಎಂದು ಆತ್ಮೀಯ ಸ್ವಾಗತ ಕೋರಿದ PM ಜಾರ್ಜಿಯಾ ಮೆಲೋನಿ!

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಶೇ.2.83 ರಷ್ಟು ಏರಿಕೆ ಕಂಡಿತು. ಬಜಾಜ್ ಫಿನ್‌ಸರ್ವ್, ಟ್ರೆಂಟ್, ಇಂಟರ್‌ಗ್ಲೋಬ್ ಏವಿಯೇಷನ್, ಆಕ್ಸಿಸ್ ಬ್ಯಾಂಕ್ ಮತ್ತು ಮಹೀಂದ್ರಾ & ಮಹೀಂದ್ರಾ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಭಾರತ್ ಎಲೆಕ್ಟ್ರಾನಿಕ್ಸ್, ಟೆಕ್ ಮಹೀಂದ್ರಾ, ಎಟರ್ನಲ್ ಮತ್ತು ಟಾಟಾ ಸ್ಟೀಲ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

ರೂಪಾಯಿ ಮೌಲ್ಯ ಗಣನೀಯ ಕುಸಿತ

ಇತ್ತ ಮಾರುಕಟ್ಟೆ ಗ್ರೀನ್ ನಲ್ಲಿ ಅಂತ್ಯವಾಗಿದ್ದರೂ ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಗಣನೀಯ ಕುಸಿತವಾಗಿದೆ. ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಇಂದು ಮತ್ತೆ 20 ಪೈಸೆಗಳಷ್ಟು ಕುಸಿತವಾಗಿ ದಾಖಲೆಯ ಕನಿಷ್ಠ ಮಟ್ಟ ಅಂದರೆ 96.86ರೂಗೆ ತಲುಪಿದೆ. ಬಡ್ಡಿದರದ ಮುನ್ನೋಟದ ಕುರಿತು ಹೆಚ್ಚಿನ ಸ್ಪಷ್ಟತೆಗಾಗಿ ಮಾರುಕಟ್ಟೆಗಳು ಅಮೆರಿಕನ್ ಫೆಡರಲ್ ರಿಸರ್ವ್‌ನ ಏಪ್ರಿಲ್ ನೀತಿಗಳ ಬಿಡುಗಡೆಗಾಗಿ ಕಾಯುತ್ತಿವೆ.

ಏಷ್ಯಾ ಮಾರುಕಟ್ಟೆಯ ದುರ್ಬಲ ವಹಿವಾಟು

ಭಾರತ ಮಾತ್ರವಲ್ಲದೇ ಏಷ್ಯಾದಾದ್ಯಂತ, ಮಾರುಕಟ್ಟೆಗಳು ಹೆಚ್ಚಾಗಿ ಕುಸಿತದೊಂದಿಗೆ ಕೊನೆಗೊಂಡವು. ಜಪಾನ್‌ನ ನಿಕ್ಕಿ 225 ಶೇ. 1.24 ರಷ್ಟು, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಶೇ. 0.67 ರಷ್ಟು ಮತ್ತು ದಕ್ಷಿಣ ಕೊರಿಯಾದ KOSPI ಶೇ. 0.87 ರಷ್ಟು ಕುಸಿದವು. ತೈವಾನ್, ಜಕಾರ್ತಾ ಮತ್ತು ಸಿಂಗಾಪುರ ಸೂಚ್ಯಂಕಗಳು ಸಹ ನಕಾರಾತ್ಮಕ ಪ್ರದೇಶದಲ್ಲಿ ಮುಕ್ತಾಯಗೊಂಡವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com