ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಪ್ರವೃತ್ತಿ, ತೈಲ ಬೆಲೆ ಇಳಿಕೆ: ಷೇರು ಮಾರುಕಟ್ಟೆ ಸೂಚ್ಯಂಕ ಜಿಗಿತ

30 ಷೇರುಗಳನ್ನು ಒಳಗೊಂಡ ಬಿಎಸ್‌ಇ ಸೆನ್ಸೆಕ್ಸ್ 327.74 ಅಂಕ ಏರಿಕೆಯಾಗಿ 75,646.13ಕ್ಕೆ ತಲುಪಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 111.75 ಅಂಕ ಏರಿಕೆಯಾಗಿ 23,772.05ರಲ್ಲಿ ವಹಿವಾಟು ನಡೆಸಿತು.
Share market company in Mumbai
ಮುಂಬೈಯ ಬಿಎಸ್ ಇ ಕಂಪೆನಿ
Updated on

ಮುಂಬೈ: ಪಶ್ಚಿಮ ಏಷ್ಯಾದ ಸಂಘರ್ಷ ಶೀಘ್ರದಲ್ಲೇ ಅಂತ್ಯಗೊಳ್ಳಬಹುದು ಎಂಬ ನಿರೀಕ್ಷೆಯಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಷೇರುಮಾರುಕಟ್ಟೆ ಸೂಚ್ಯಂಕ ಭಾರೀ ಏರಿಕೆ ಕಂಡುಬಂದಿದ್ದು, ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವ ಹಿನ್ನೆಲೆ ಇಂದು ಗುರುವಾರ ಆರಂಭಿಕ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಏರಿಕೆಯಲ್ಲಿ ವಹಿವಾಟು ನಡೆಸಿದವು.

30 ಷೇರುಗಳನ್ನು ಒಳಗೊಂಡ ಬಿಎಸ್‌ಇ ಸೆನ್ಸೆಕ್ಸ್ 327.74 ಅಂಕ ಏರಿಕೆಯಾಗಿ 75,646.13ಕ್ಕೆ ತಲುಪಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 111.75 ಅಂಕ ಏರಿಕೆಯಾಗಿ 23,772.05ರಲ್ಲಿ ವಹಿವಾಟು ನಡೆಸಿತು.

ಸೆನ್ಸೆಕ್ಸ್‌ನ 30 ಕಂಪನಿಗಳ ಪೈಕಿ InterGlobe Aviation, Bharat Electronics, Asian Paints, Tata Steel, Larsen & Toubro ಮತ್ತು Eternal ಪ್ರಮುಖ ಲಾಭಾಂಶ ಗಳಿಸಿದ ಕಂಪನಿಗಳಾಗಿದ್ದವು.

ಇನ್ನೊಂದೆಡೆ ಟ್ರೆಂಟ್, ಇನ್ಫೋಸಿಸ್, ಸನ್ ಫಾರ್ಮಾ ಮತ್ತು ಬಜಾಜ್ ಫಿನ್ಸರಿ ಹಿನ್ನಡೆ ಅನುಭವಿಸಿದವು.

ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 105.7 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಯುತ್ತಿತ್ತು.

ಏಷ್ಯಾದ ಮಾರುಕಟ್ಟೆಗಳಲ್ಲಿ ದಕ್ಷಿಣ ಕೊರಿಯಾದ ಕೋಸ್ಪಿ, ಜಪಾನ್‌ನ ನಿಕ್ಕೈ 225 ಹಾಗೂ ಶಾಂಘೈ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕಗಳು ಏರಿಕೆಯಲ್ಲಿ ವಹಿವಾಟು ನಡೆಸಿದರೆ, ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ ಸ್ವಲ್ಪ ಕುಸಿತ ಕಂಡಿತು. ಕೋಸ್ಪಿ ಸೂಚ್ಯಂಕವು 7 ಶೇಕಡಕ್ಕಿಂತ ಹೆಚ್ಚು ಏರಿಕೆಯಾಯಿತು.

ಅಮೆರಿಕದ ಮಾರುಕಟ್ಟೆಗಳು ನಿನ್ನೆ ಏರಿಕೆಯಲ್ಲಿ ಮುಕ್ತಾಯಗೊಂಡಿದ್ದವು. ಇಂದು ಬೆಳಗ್ಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ 106 ಡಾಲರ್‌ಗೆ ಇಳಿದಿರುವುದು ಸಕಾರಾತ್ಮಕ ಸೂಚನೆ. ಸಂಘರ್ಷ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಮತ್ತು ತೈಲದ ಬೆಲೆ ಕುಸಿಯಲಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಮಾರುಕಟ್ಟೆ ಗಮನಿಸುತ್ತಿರುವಂತೆ ಕಾಣುತ್ತಿದೆ ಎಂದು ವಿ ಕೆ ವಿಜಯ್ ಕುಮಾರ್ ಹೇಳಿದ್ದಾರೆ.

Share market company in Mumbai
ಕರೆನ್ಸಿ ಬೆಲೆ ಏರಿಕೆ: ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಈಗ ಇಷ್ಟಿದೆ...

ವಿನಿಮಯ ದತ್ತಾಂಶದ ಪ್ರಕಾರ, ಬುಧವಾರ ವಿದೇಶಿ ಸಂಸ್ಥಾ ಹೂಡಿಕೆದಾರರು (FIIಗಳು) ₹1,597.35 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಶಮನವಾಗಿ ರಾಜತಾಂತ್ರಿಕ ಪರಿಹಾರ ಸಿಗುವ ಸಾಧ್ಯತೆಯನ್ನು ಮಾರುಕಟ್ಟೆಗಳು ಈಗಾಗಲೇ ಲೆಕ್ಕಹಾಕಲು ಆರಂಭಿಸಿರುವುದರಿಂದ ಹೂಡಿಕೆದಾರರ ವಿಶ್ವಾಸ ಗಮನಾರ್ಹವಾಗಿ ಹೆಚ್ಚಿದೆ ಎಂದು ಪೊನ್ಮುಡಿ ಆರ್ ತಿಳಿಸಿದ್ದಾರೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 117.54 ಅಂಕಗಳು ಅಥವಾ 0.16 ಶೇಕಡಾ ಏರಿಕೆಯಾಗಿ 75,318.39ರಲ್ಲಿ ಮುಕ್ತಾಯಗೊಂಡಿತ್ತು.

ನಿಫ್ಟಿ 41 ಅಂಕಗಳು ಅಥವಾ 0.17 ಶೇಕಡಾ ಏರಿಕೆಯಾಗಿ 23,659ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com