ಸೌತ್‍ಆಫ್ರಿಕಾದ ಅಭಿಮಾನಿಗೆ ಸಿಗದ ಬಿಗ್‍ಬಿ ದರ್ಶನ

ಪ್ರತಿ ಭಾನುವಾರ ಅಮಿತಾಭ್ ಮನೆಯಲ್ಲೇ ಇರುತ್ತಾರೆ. ಯಾಕೆ ಗೊತ್ತಾ? ಅವತ್ತೊಂದು ದಿನ ಅಭಿಮಾನಿಗಳಿಗೆ ದರ್ಶನ ಕೊಡುವುದೇ ಅವರ ಕೆಲಸ. ಮುಂಬೈನ ಜಾಲ್ಸಾದ ಮನೆಯ ಆವರಣದಲ್ಲಿ...
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
Updated on: 
ಪ್ರತಿ ಭಾನುವಾರ ಅಮಿತಾಭ್ ಮನೆಯಲ್ಲೇ ಇರುತ್ತಾರೆ. ಯಾಕೆ ಗೊತ್ತಾ? ಅವತ್ತೊಂದು ದಿನ ಅಭಿಮಾನಿಗಳಿಗೆ ದರ್ಶನ ಕೊಡುವುದೇ ಅವರ ಕೆಲಸ. ಮುಂಬೈನ ಜಾಲ್ಸಾದ ಮನೆಯ ಆವರಣದಲ್ಲಿ ಸಾವಿರಾರು ಅಭಿಮಾನಿಗಳು ನೆರೆಯುತ್ತಾರೆ. ಇವರೆಲ್ಲರಿಗೂ ಚಾ, ಬಿಸ್ಕತ್, ಲೈಟ್ ಟಿಫಿನ್‍ನ ವ್ಯವಸ್ಥೆ ಇರುತ್ತೆ. ಒಂದೆರಡು ಗಂಟೆ ಅಭಿಮಾನಿಗಳೊಂದಿಗೇ ಕಳೆಯುತ್ತಾರೆ ಬಿಗ್‍ಬಿ. ಆದರೆ ಮೊನ್ನೆಯ ಕಾರ್ಯಕ್ರಮದಲ್ಲಿ ಬಿಗ್‍ಬಿ, ಒಬ್ಬಳು ಅಭಿಮಾನಿಗೆ ಬೇಸರ ಹುಟ್ಟಿಸಿದ್ದಾರೆ. ಸೌತ್ ಆಫ್ರಿಕಾದ ಅಂಗವಿಕಲೆಯೊಬ್ಬಳು ವ್ಹೀಲ್ ಚೇರಿನಲ್ಲಿ ಮನೆಮುಂದೆ ಹಾಜರಾಗಿದ್ದಳು. ಬಚ್ಚನ್ ಅವರ ಎಲ್ಲ ಚಿತ್ರಗಳನ್ನೂ ನೋಡಿದವಳು. ಆದರೆ, ಅಭಿಮಾನಿಗಳ ಪ್ರವಾಹದಲ್ಲಿ ಈಕೆಗೆ ಬಿಗ್‍ಬಿಯನ್ನು ಭೇಟಿ ಆಗಲು ಸಾಧ್ಯವೇ ಆಗಲಿಲ್ಲ. ಈ ಸಂಗತಿ ಅಮಿತಾಭ್‍ಗೆ ನಂತರ ಗೊತ್ತಾಗಿ ಟ್ವೀಟ್ ಮಾಡಿದರು, 'ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತಿದ್ದೇನೆ, ಜನಸ್ತೋಮದಲ್ಲಿ ನನ್ನ ಪ್ರೀತಿಯ ಅಭಿಮಾನಿಯನ್ನು ಭೇಟಿ ಮಾಡಲಾಗಲಿಲ್ಲ'. ಈ ಹುಡುಗಿ ಮತ್ತೆ ಬಿಗ್‍ಬಿಯನ್ನು ಭೇಟಿ ಮಾಡುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com