ಗಾಯಕ ಮಿಕಾ ಸಿಂಗ್ ವಿರುದ್ಧ ಕಿರುಕುಳ ಆರೋಪ ಪ್ರಕರಣ ದಾಖಲು

ಸದಾ ವಿವಾದಗಳ ಸುತ್ತ ಗಿರಕಿ ಹೊಡೆಯುವ ಬಾಲಿವುಡ್ ಗಾಯಕ ಮಿಕಾ ಸಿಂಗ್ ವಿರುದ್ಧ ದೂರು ದಾಖಲಾಗಿದೆ...
ಮಿಕಾ ಸಿಂಗ್
ಮಿಕಾ ಸಿಂಗ್

ಮುಂಬಯಿ: ಸದಾ ವಿವಾದಗಳ ಸುತ್ತ ಗಿರಕಿ ಹೊಡೆಯುವ ಬಾಲಿವುಡ್ ಗಾಯಕ ಮಿಕಾ ಸಿಂಗ್ ವಿರುದ್ಧ ದೂರು ದಾಖಲಾಗಿದೆ.

32 ವರ್ಷದ ರೂಪದರ್ಶಿಯೊಬ್ಬಳು ಮಿಕಾ ಸಿಂಗ್ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ದಾಳೆ. ಸೆಕ್ಷನ್ 354, 323, ಹಾಗೂ 504 ರ ಅಡಿಯಲ್ಲಿ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನಂತರ ಸಂಜೆ ವೇಳೆಗೆ ಪೊಲೀಸ್ ಠಾಣೆಗೆ ಬಂದ ಮಿಕಾ ಸಿಂಗ್ ರೂಪದರ್ಶಿ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ತನ್ನ ಮೆನೆಗೆ ಬಂದ ಮಾಡೆಲ್, 5 ಕೋಟಿ ಹಣ ನೀಡುವಂತೆ ಕೇಳಿದಳು, ಇದಕ್ಕೆ ನಿರಾಕರಿಸಿದಾಗ ನನ್ನ ವೃತ್ತಿ ಬದುಕನ್ನು ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಇದುವರೆಗೂ ಯಾರೊಬ್ಬರ ಬಂಧನವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com