ಮುಂಬೈ: ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಅತಿ ವೇಗವಾಗಿ 300 ಕೋಟಿ ಗಳಿಸಿದ ಚಿತ್ರ ಎಂಬ ದಾಖಲೆಗೆ ಪಾತ್ರವಾಗಿದೆ.
ದಂಗಲ್ ಚಿತ್ರ ಬಿಡುಗಡೆಯಾಗಿ 13 ದಿನಗಳಲ್ಲಿ 300 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ಚಿತ್ರದ ವಕ್ತಾರ ತಿಳಿಸಿದ್ದಾರೆ. ಭಾರತದ ಕುಸ್ತಿಪಟು ಮಹಿವೀರ್ ಸಿಂಗ್ ಪೋಗಟ್ ಅವರ ಜೀವನಾಧಾರಿತ ಚಿತ್ರಕಥೆ ಹೊಂದಿದ್ದು ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಸಿದ್ದರು.
ಕಳೆದ ಡಿಸೆಂಬರ್ 23ರಂದು ತೆರೆಕಂಡಿದ್ದ ಚಿತ್ರ ಮೊದಲ ವಾರದಲ್ಲೇ 106.95 ಕೋಟಿ ಹಣ ಗಳಿಕೆ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು.