ಬಾಹುಬಲಿ 2 ದಾಖಲೆ ಮುರಿಯಲು ಸಜ್ಜಾದ "ಟ್ಯೂಬ್ ಲೈಟ್"!

ಬಾಲಿವುಡ್ ನಟ ಸಲ್ಮಾನ್‌ ಖಾನ್‌ ಅಭಿನಯದ ‘ಟ್ಯೂಬ್‌ಲೈಟ್‌' ಚಿತ್ರ ದಾಖಲೆ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದು, ಬಾಹುಬಲಿ 2 ನಿರ್ಮಿಸಿದ್ದ ದಾಖಲೆಯೊಂದನ್ನು ಮುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಬಾಲಿವುಡ್ ನಟ ಸಲ್ಮಾನ್‌ ಖಾನ್‌ ಅಭಿನಯದ ‘ಟ್ಯೂಬ್‌ಲೈಟ್‌' ಚಿತ್ರ ದಾಖಲೆ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದು, ಬಾಹುಬಲಿ 2 ನಿರ್ಮಿಸಿದ್ದ ದಾಖಲೆಯೊಂದನ್ನು ಮುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಇದೇ ಜೂನ್ 25ರಂದು ತೆರೆಕಾಣುತ್ತಿರುವ ಟ್ಯೂಬ್ ಲೈಟ್ ಚಿತ್ರವನ್ನು ವಿಶ್ವಾದ್ಯಂತ ಬರೊಬ್ಬರಿ 10 ಸಾವಿರ ಸ್ಕ್ರೀನ್ ಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಬಾಹುಬಲಿ 2 ಚಿತ್ರ 9 ಸಾವಿರ ಸ್ಕ್ರೀನ್  ಗಳಲ್ಲಿ ಏಕಕಾಲಕ್ಕೆ ತೆರೆಕಾಣುವ ಮೂಲಕ ದಾಖಲೆ ನಿರ್ಮಿಸಿತ್ತು. ಇದೀಗ ಟ್ಯೂಬ್ ಲೈಟ್ ಚಿತ್ರ ಈ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ.

ಟ್ಯೂಬ್ ಲೈಟ್ ಚಿತ್ರವನ್ನು ಖ್ಯಾತ ನಿರ್ದೇಶಕ ಕಬೀರ್ ಖಾನ್ ನಿರ್ದೇಶನ ಮಾಡಿದ್ದು, 1962ರ ಭಾರತ-ಚೀನಾ ಯುದ್ಧದ ಕುರಿತಾದ ಕಥಾಹಂದರವನ್ನು ಚಿತ್ರಹೊಂದಿದೆ. ಲಕ್ಷ್ಮಣ್‌ ಸಿಂಗ್‌ ಬಿಷ್ತ್ ಮತ್ತು ಭಾರತ್‌ ಸಿಂಗ್‌ ಬಿಷ್ತ್ ಪಾತ್ರದಲ್ಲಿ  ಸಲ್ಮಾನ್‌ ಮತ್ತು ಅವರ ಸೋದರ ಸೊಹೇಲ್‌ ಖಾನ್‌ ಅಭಿನಯಿಸಿದ್ದಾರೆ. ಚೀನಾದ ನಟಿ ಝು ಝು ಭಾರತದ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com