ಬಾಹುಬಲಿ 2 ನಂತರ 1000 ಕೋಟಿ ಕ್ಲಬ್ ಸೇರಿದ ಆಮೀರ್‌ರ ದಂಗಲ್ ಚಿತ್ರ

ಭಾರತೀಯ ಚಿತ್ರರಂಗದ ದಿಕ್ಕು ದೆಸೆ ಬದಲಿಸಿದ ಚಿತ್ರ ಬಾಹುಬಲಿ 2. ಬಾಹುಬಲಿ ವೇಗಕ್ಕೆ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ದಾಖಲೆಗಳೆಲ್ಲಾ ಧೂಳಿಪಟವಾಗಿದ್ದು ಇದೀಗ...
ದಂಗಲ್
ದಂಗಲ್
ಭಾರತೀಯ ಚಿತ್ರರಂಗದ ದಿಕ್ಕು ದೆಸೆ ಬದಲಿಸಿದ ಚಿತ್ರ ಬಾಹುಬಲಿ 2. ಬಾಹುಬಲಿ ವೇಗಕ್ಕೆ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ದಾಖಲೆಗಳೆಲ್ಲಾ ಧೂಳಿಪಟವಾಗಿದ್ದು ಇದೀಗ ಇತಿಹಾಸ. ಭಾರತೀಯ ಚಿತ್ರವೊಂದು ಸಾವಿರ ಕೋಟಿ ಕ್ಲಬ್ ಸೇರಿದ ಸಾಧನೆ ಮಾಡಿದ್ದ ಬಾಹುಬಲಿ 2 ಚಿತ್ರದ ನಂತರ ಇದೀಗ ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ 1000 ಕೋಟಿ ಕ್ಲಬ್ ಸೇರಿದೆ. 
ದಂಗಲ್ ಚಿತ್ರ ಭಾರತ ಸೇರಿದಂತೆ ವಿಶ್ವದಾದ್ಯಂತ 870 ಕೋಟಿ ಗಳಿಕೆ ಮಾಡಿತ್ತು. ಇದೀಗ ದಂಗಲ್ ಚಿತ್ರ ಚೀನಾದಲ್ಲಿ 9 ಸಾವಿರ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸದ್ಯ ಚೀನಾದಲ್ಲಿ 200 ಕೋಟಿ ಗಳಿಕೆ ಮಾಡುವ ಮೂಲಕ ದಂಗಲ್ ಚಿತ್ರ 1000 ಕೋಟಿ ಕ್ಲಬ್ ಸೇರಿದ ಎರಡನೇ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿದೆ. 
ಆಮೀರ್ ಅಭಿನಯದ ಪಿಕೆ ಚಿತ್ರ ಬಾಲಿವುಡ್ ನಲ್ಲಿ 792 ಕೋಟಿ ಗಳಿಸುವ ಮೂಲಕ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಚಿತ್ರ ಖ್ಯಾತಿಗೆ ಭಾಜನವಾಗಿತ್ತು. ಇದೀಗ ಈ ದಾಖಲೆಯನ್ನು ದಂಗಲ್ ಚಿತ್ರ ಮುರಿದಿದೆ. 1031 ಕೋಟಿ ಗಳಿಸುವ ಮೂಲಕ 1000 ಕೋಟಿ ಕ್ಲಬ್ ಸೇರಿದ ಮೊದಲ ಬಾಲಿವುಡ್ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com