ಚಾಣಕ್ಯನ ಪಾತ್ರದಲ್ಲಿ ಅಜಯ್ ದೇವ್‍ಗನ್

ಭಾರತ ಕಂಡ ಅಪರೂಪದ ರಾಜನಿತಿಜ್ಞ, ತತ್ವಶಾಸ್ತ್ರಜ್ಞ, ಆರ್ಥಿಕ ತಜ್ಞ ಚಾಣಕ್ಯನ ಪಾತ್ರದಲ್ಲಿ ಬಾಲಿವುಡ್ ನ ಅಜಯ್ ದೇವ್‍ಗನ್ ನಟಿಸಲಿದ್ದಾರೆ.
ಅಜಯ್ ದೇವ್‍ಗನ್
ಅಜಯ್ ದೇವ್‍ಗನ್
ಮುಂಬೈ: ಭಾರತ ಕಂಡ ಅಪರೂಪದ ರಾಜನಿತಿಜ್ಞ, ತತ್ವಶಾಸ್ತ್ರಜ್ಞ, ಆರ್ಥಿಕ ತಜ್ಞ ಚಾಣಕ್ಯನ ಪಾತ್ರದಲ್ಲಿ ಬಾಲಿವುಡ್ ನ ಅಜಯ್ ದೇವ್‍ಗನ್ ನಟಿಸಲಿದ್ದಾರೆ. 
ನೀರಜ್ ಪಾಂಡೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ತಾವು ಚಾಣಕ್ಯನ ಪಾತ್ರದಲ್ಲಿ ಅಭಿನಯಿಸುವುದರ ಬಗ್ಗೆ ಸ್ವತಃ ಅಜಯ್ ದೇವ್‍ಗನ್ ಟ್ವೀಟ್ ಮಾಡಿದ್ದು, " ನೀರಜ್ ಪಾಂಡೆ ನಿರ್ದೇಶಿಸುತ್ತಿರುವ ಮುಂದಿನ ಚಿತ್ರದಲ್ಲಿ ಚಾಣಕ್ಯನ ಪಾತ್ರದಲ್ಲಿ ನಟಿಸಲು ಉತ್ಸುಕನಾಗಿರುವೆ ಎಂದು ಟ್ವೀಟ್ ಮಾಡಿದ್ದಾರೆ. 
ರಿಲಾಯನ್ಸ್ ಸಂಸ್ಥೆ, ಫ್ರೈಡೆ ಫಿಲಮ್ಸ್ ಹಾಗೂ ಪ್ಲಾನ್ ಸಿ ಸ್ಟುಡಿಯೋಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ಪ್ರಸ್ತುತ ಇಂದ್ರಕುಮಾರ್ ಅವರ ಸಿನಿಮಾದಲ್ಲಿ ಕಾರ್ಯನಿರತರಾಗಿರುವ ಅಜಯ್ ದೇವ್ ಗನ್ ಈ ಸಿನಿಮಾ ಮುಕ್ತಾಯಗೊಳ್ಳುತ್ತಿದ್ದಂತೆಯೇ ಚಾಣಕ್ಯನ ಪಾತ್ರದಲ್ಲಿ ಪ್ರೇಕ್ಷಕರ ಎದುರು ಪ್ರತ್ಯಕ್ಷರಾಗಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com