ಭಯಾನಕ ವಿಡಿಯೋ: ಗ್ರೇಟ್ ಖಲಿ ಡಬ್ಲ್ಯೂಡಬ್ಲ್ಯೂಇ; ರಾಖಿ ಸಾವಂತ್ ಬೆನ್ನು ಮೂಳೆ ಮುರಿತ!

ಬಾಲಿವುಡ್ ನಟಿ ತನುಶ್ರೀ ದತ್ತಾ ಮೀಟೂ ಆರೋಪದ ವಿರುದ್ಧ ಕಿಡಿಕಾರಿದ್ದ ರಾಖಿ ಸಾವಂತ್ ಇದೀಗ ಗ್ರೇಟ್ ಖಲಿ ಅವರ ಡಬ್ಲ್ಯೂಡಬ್ಲ್ಯೂಇ ಟೂರ್ನಿಯಲ್ಲಿ ಡಬ್ಲ್ಯೂಡಬ್ಲ್ಯೂಇ ಮಹಿಳಾ ಸ್ಪರ್ಧಿ...
ರಾಖಿ ಸಾವಂತ್
ರಾಖಿ ಸಾವಂತ್
ಬಾಲಿವುಡ್ ನಟಿ ತನುಶ್ರೀ ದತ್ತಾ ಮೀಟೂ ಆರೋಪದ ವಿರುದ್ಧ ಕಿಡಿಕಾರಿದ್ದ ರಾಖಿ ಸಾವಂತ್ ಇದೀಗ ಗ್ರೇಟ್ ಖಲಿ ಅವರ ಡಬ್ಲ್ಯೂಡಬ್ಲ್ಯೂಇ ಟೂರ್ನಿಯಲ್ಲಿ ಡಬ್ಲ್ಯೂಡಬ್ಲ್ಯೂಇ ಮಹಿಳಾ ಸ್ಪರ್ಧಿ ರಾಖಿಯನ್ನು ಎತ್ತಿ ಕುಕ್ಕಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. 
ಗ್ರೇಟ್ ಖಲಿ ಅವರ ಡಬ್ಲ್ಯೂಡಬ್ಲ್ಯೂಇ ಟೂರ್ನಿಯನ್ನು ಪಂಚಕುಲ ಆಯೋಜಿಸಿತ್ತು. ಈ ಟೂರ್ನಿಯಲ್ಲಿ ಸ್ಪರ್ಧಿ ಜತೆ ರಾಖಿ ಸಾವಂತ್ ಹೆಜ್ಜೆ ಹಾಕುತ್ತಿದ್ದರು. ಇದೇ ವೇಳೆ ಸ್ಪರ್ಧಿ ಸ್ಟೇಜ್ ಮೇಲೆ ರಾಖಿಯನ್ನು ಎತ್ತಿ ಕುಕ್ಕಿದ್ದಾರೆ. ಇದರಿಂದ ರಾಖಿ ಅವರ ಬೆನ್ನು ಮೂಳೆ ಮುರಿದಿದ್ದರಿಂದ ರಾಖಿ ಎದ್ದು ನಿಲ್ಲಲು ಸಾಧ್ಯವಾಗಿಲ್ಲ. ಕೂಡಲೇ ಪೊಲೀಸರು ಬಂದ ರಾಖಿಯನ್ನು ಏಳಿಸಲು ಮುಂದಾದರೂ ಈ ವೇಳೆ ಸ್ವಲ್ಪ ಎದ್ದು ನಿಂತ ರಾಖಿ ಮತ್ತೆ ಕುಸಿದು ಬಿದ್ದಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಟೂರ್ನಿಯಲ್ಲಿ ಭಾಗವಹಿಸಿದ್ದ ಅಭಿಮಾನಿಯೊಬ್ಬರು ಇದನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com