ಕ್ಯಾನ್ಸರ್​ನಿಂದ ಬಳಲುತ್ತಿರುವ ಬಾಲಿವುಟ್ ನಟಿ ಸೊನಾಲಿ ಬೇಂದ್ರೆ ನೋವಿನಲ್ಲೂ ಗಂಡನಿಗೆ ಬರೆದ ಪತ್ರ!

ಕನ್ನಡದ ಪ್ರೀತ್ಸೆ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಜತೆ ನಟಿಸಿದ್ದ ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಅವರು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದು ತನ್ನ ಗಂಡನಿಗೆ ಪತ್ರವೊಂದನ್ನು ಬರೆದಿದ್ದಾರೆ...
ಗೋಲ್ಡಿ ಬೆಹ್ಲ್-ಸೊನಾಲಿ ಬೇಂದ್ರೆ
ಗೋಲ್ಡಿ ಬೆಹ್ಲ್-ಸೊನಾಲಿ ಬೇಂದ್ರೆ
Updated on
ಕನ್ನಡದ ಪ್ರೀತ್ಸೆ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಜತೆ ನಟಿಸಿದ್ದ ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಅವರು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದು ತನ್ನ ಗಂಡನಿಗೆ ಪತ್ರವೊಂದನ್ನು ಬರೆದಿದ್ದಾರೆ. 
ಕಿಮೋಥೆರಪಿ ಪಡೆದುಕೊಳ್ಳುವ ಸಲುವಾಗಿ ತಮ್ಮ ತಲೆಗೂದಲನ್ನು ಬೋಳಿಸಿಕೊಂಡ ಫೋಟೋವನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಾಗ ಅಭಿಮಾನಿಗಳು ಸಾಂತ್ವನದ ಮಾತುಗಳನ್ನಾಡಿದ್ದರು. ಇನ್ನು ತಮ್ಮ 16ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಲುವಾಗಿ ಪತಿ ನಿರ್ದೇಶಕ ಗೋಲ್ಡಿ ಬೆಹ್ಲ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. 
ಸೊನಾಲಿ ಬೇಂದ್ರೆ ಅವರು ಪತ್ರದಲ್ಲಿ... ನಾನೇನೋ ನನಗೆ ಅನಿಸಿದ್ದನ್ನೆಲ್ಲ ಬರೆಯಬೇಕು ಎಂದುಕೊಂಡು ಕುಳಿತಿದ್ದೇನೆ. ಆದರೆ, ನಮ್ಮೆಲ್ಲ ಭಾವನೆಗಳನ್ನು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಎಂದು ನನಗೂ ಅನಿಸಿದೆ. ನನ್ನ ಗಂಡ.. ನನ್ನ ಒಳ್ಳೆಯ ಸಂಗಾತಿ, ಅತ್ಯುತ್ತಮ ಗೆಳೆಯ, ನನ್ನೆಲ್ಲವೂ ನನ್ನ ಗಂಡನೇ, ನನ್ನ ಪ್ರತಿ ಖುಷಿ, ಬೇಸರ, ನೋವಿನಲ್ಲೂ ನನ್ನ ಗಂಡ ನನ್ನ ಜೊತೆಗಿದ್ದಾನೆ. ಈಗ ನಾನು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವಾಗಲೂ ನನಗೆ ಬೇಕಾದ ಎಲ್ಲ ಮಾನಸಿಕ ಸ್ಥೈರ್ಯವನ್ನು ಆತ ತುಂಬಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com