#MeToo: ನಾನಾ ಪಾಟೇಕರ್ ಗೆ ನೋಟೀಸ್ ಕೊಟ್ಟ ಮಹಾರಾಷ್ಟ್ರ ಮಹಿಳಾ ಆಯೋಗ ಹೇಳಿದ್ದೇನು?

ಬಾಲಿವುಡ್ ನಟಿ ತನುಶ್ರೀ ಅವರ ದೂರನ್ನು ಆಧರಿಸಿ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ನಾನಾ ಪಾಟೇಕರ್ ಗೆ ಮಹಾರಾಷ್ಟ್ರ ಮಹಿಳಾ ಆಯೋಗ ನೋಟೀಸ್ ಕಳಿಸಿದೆ.
ನಾನಾ ಪಾಟೇಕರ್
ನಾನಾ ಪಾಟೇಕರ್
ಬಾಲಿವುಡ್ ನಟಿ ತನುಶ್ರೀ ಅವರ ದೂರನ್ನು ಆಧರಿಸಿ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ನಾನಾ ಪಾಟೇಕರ್ ಗೆ ಮಹಾರಾಷ್ಟ್ರ ಮಹಿಳಾ ಆಯೋಗ ನೋಟೀಸ್ ಕಳಿಸಿದೆ. 
ನಾನಾ ಪಾಟೇಕರ್ ಜೊತೆಗೆ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀರ್ ಸಿದ್ದಿಕಿ ಮತ್ತು ನಿರ್ದೇಶಕ ರಾಕೇಶ್ ಸರಂಗ್ ಅವರಿಗೂ ನೋಟೀಸ್ ಜಾರಿಗೊಳಿಸಲಾಗಿದ್ದು 10 ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ. ಇದೇ ವೇಳೆ ಪ್ರೊಡಕ್ಷನ್ ಹೌಸ್ ಹಾಗೂ ಟಿವಿ ಕಲಾವಿದರ ಸಂಘಟನೆಗೂ ನೊಟೀಸ್ ಜಾರಿಗೊಳಿಸಲಾಗಿದ್ದು, ಲೈಂಗಿಕ ಕಿರುಕುಳ ದೂರನ್ನು ಪರಿಹರಿಸುವುದಕ್ಕೆ ಯಾವೆಲ್ಲಾ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ವಿವರಿಸಿ ಎಂದು ಕೇಳಿದೆ. 
ರಾಷ್ಟ್ರೀಯ ಮಹಿಳಾ ಆಯೋಗವೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಲೈಂಗಿಕ ಕಿರುಕುಳ ಬಗ್ಗೆ ಬಹಿರಂಗಪಡಿಸಿರುವ ಮಹಿಳೆಯರ ಆರೋಪಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸಂತ್ರಸ್ತರನ್ನು ವೈಯಕ್ತಿಕವಾಗಿ ಸಂಪರ್ಕ ಮಾಡುತ್ತೇವೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com