ಪ್ರಿಯಾಂಕಾ-ನಿಖ್ ಜೋನಾಸ್ ಮದುವೆ ದಿನಾಂಕ ಫಿಕ್ಸ್!

ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ನಟಿ ಪ್ರಿಯಾಂಕಾ ಹಾಗೂ ಹಾಲಿವುಡ್ ಸಿಂಗರ್ ನಿಖ್ ಜೋನಸ್ ಮದುವೆ ದಿನಾಂಕ ಫಿಕ್ಸ್ ಆಗಿದೆ...
ನಟಿ ಪ್ರಿಯಾಂಕಾ ಹಾಗೂ ಹಾಲಿವುಡ್ ಸಿಂಗರ್ ನಿಖ್ ಜೋನಸ್
ನಟಿ ಪ್ರಿಯಾಂಕಾ ಹಾಗೂ ಹಾಲಿವುಡ್ ಸಿಂಗರ್ ನಿಖ್ ಜೋನಸ್
ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ನಟಿ ಪ್ರಿಯಾಂಕಾ ಹಾಗೂ ಹಾಲಿವುಡ್ ಸಿಂಗರ್ ನಿಖ್ ಜೋನಸ್ ಮದುವೆ ದಿನಾಂಕ ಫಿಕ್ಸ್ ಆಗಿದೆ. 
ಬಿಟೌನ್'ನ ಈ ಹಾಟ್ ಜೋಡಿ ಕೆಲ ದಿನಗಳ ಹಿಂದಷ್ಟೇ ಆಪ್ತ ಸ್ನೇಹಿತರನ್ನು ಭೇಟಿಯಾಗುವ ಸಲುವಾಗಿ ಜೋಧ್ಪುರಕ್ಕೆ ಭೇಟಿ ನೀಡಿತ್ತು ಎಂದು ಹೇಳಲಾಗುತ್ತಿತ್ತು. ಇದೀಗ ಇಬ್ಬರೂ ಮದುವೆಯ ಸಿದ್ಧತೆಗಳನ್ನು ಪರಿಶೀಲನೆ ನಡೆಸಲು ತೆರಳಿದ್ದು ಎಂದು ಮೂಲಗಳು ಮಾಹಿತಿ ನೀಡಿವೆ. 
ಪ್ರಿಯಾಂಕಾ ಹಾಗೂ ನಿಖ್ ವಿವಾಹ ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೂ 3 ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಸುಂದರ ನಗರಿ ಜೋಧ್ಪುರದಲ್ಲಿ ಪ್ರಿಯಾಂಕಾ ಹಾಗೂ ನಿಖ್ ಹಸೆಮಣೆ ಏರಲಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ನಿಖ್ ಭಾರತಕ್ಕೆ ಬಂದಿದ್ದು, ಪ್ರಿಯಾಂಕಾ ಅವರೊಂದಿಗೆ ಜೋಧ್ಪುರಕ್ಕೆ ಭೇಟಿ ನೀಡಿ, ವಿವಾಹಕ್ಕೆ ಸ್ಥಳವನ್ನು ನಿಗದಿ ಮಾಡಿದ್ದರು. ವಿವಾಹ ಕುರಿತು ಸಾಕಷ್ಟು ಕನಸು ಕಂಡಿರುವ ಈ ನವಜೋಡಿಗಳು ಮದುವೆಯ ಸಿದ್ಧತೆಗಳನ್ನು ಹತ್ತಿರದಲ್ಲೇ ಇದ್ದು ನೋಡಿಕೊಳ್ಳುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 
2018ರ ಆಗಸ್ಟಡ್ 18 ರಂದು ಮುಂಬೈ ನಲ್ಲಿ ಪ್ರಿಯಾಂಕಾ ಹಾಗೂ ನಿಖ್ ಜೋನಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com