ಹಣಕ್ಕಾಗಿ ರಾಜಕೀಯ ಪಕ್ಷಗಳ ಪರ ಪ್ರಚಾರ: ಕೋಬ್ರಾ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಬಾಲಿವುಡ್ ತಾರೆಯರು

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ 30ಕ್ಕೂ ಹೆಚ್ಚು ಬಾಲಿವುಡ್ ತಾರೆಯರು ಹಣಕ್ಕಾಗಿ ರಾಜಕೀಯ ಮಾಡಲು ಆರಂಭಿಸಿದ್ದು, ಹಣ ನೀಡಿದರೆ...
ವಿವೇಕ್ ಒಬೆರಾಯ್, ಜಾಕಿ ಶ್ರಾಫ್, ಸನ್ನಿ ಲಿಯೋನ್
ವಿವೇಕ್ ಒಬೆರಾಯ್, ಜಾಕಿ ಶ್ರಾಫ್, ಸನ್ನಿ ಲಿಯೋನ್
Updated on: 
ಮುಂಬೈ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ 30ಕ್ಕೂ ಹೆಚ್ಚು ಬಾಲಿವುಡ್ ತಾರೆಯರು ಹಣಕ್ಕಾಗಿ ರಾಜಕೀಯ ಮಾಡಲು ಆರಂಭಿಸಿದ್ದು, ಹಣ ನೀಡಿದರೆ ಸಾಮಾಜಿಕ ಮಾಧ್ಯಮಗಳಲ್ಲಿ ತಾವು ಯಾವುದೇ ಪಕ್ಷದ ಪರ ಸೂಚಿಸಿದಂತೆ ಸಂದೇಶಗಳನ್ನು ಹಾಕಲು ಸಿದ್ಧ ಎಂದು ಒಪ್ಪಿಕೊಂಡಿರುವುದು ಕೋಬ್ರಾ ಪೋಸ್ಟ್ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.
ಹಣಕ್ಕಾಗಿ ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡುತ್ತಿರುವ ಜಾಕಿ ಶ್ರಾಫ್, ಸನ್ನಿ ಲಿಯೋನ್, ಸೋನು ಸೂದ್, ವಿವೇಕ್ ಒಬೆರಾಯ್, ಅಮಿಶಾ ಪಟೇಲ್, ಶಕ್ತಿ ಕಪೂರ್, ಮಹಿಮಾ ಚೌಧರಿ ಹಾಗೂ ಪೂನಂ ಪಾಂಡೆ ಸೇರಿದಂತೆ 30ಕ್ಕೂ ಹೆಚ್ಚು ಬಾಲಿವುಡ್ ತಾರೆಯರ ಮುಖವಾಡವನ್ನು ಕೋಬ್ರಾ ಪೋಸ್ಟ್ ಕಳಚಿದೆ.
ಇತ್ತೀಚೆಗೆ ಕೋಬ್ರಾ ಪೋಸ್ಟ್‌ ನಡೆಸಿದ ಕಾರ್ಯಾಚಾರಣೆಯಲ್ಲಿ ಹಲವು ಬಾಲಿವುಡ್ ಸ್ಟಾರ್‌ಗಳು ಹಣ ಕೊಟ್ಟರೆ ಯಾವ ಪಕ್ಷದ ಪರವಾಗಿ ಬೇಕಾದರೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಪ್ರಕಟಿಸುವುದಾಗಿ ಹೇಳಿದ್ದನ್ನು ವಿಡಿಯೋ ಸಹಿತ ಬಹಿರಂಗಗೊಂಡಿದೆ.
ಈ ಬಾಲಿವುಡ್ ತಾರೆಯರು ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡುವುದಕ್ಕಾಗಿ ಒಂದು ಸಂದೇಶಕ್ಕೆ 2 ಲಕ್ಷ ದಿಂದ 50 ಲಕ್ಷ ರುಪಾಯಿ ವರೆಗೆ ಬೇಡಿಕೆ ಇಟ್ಟಿದ್ದಾರೆ.
ಇನ್ನು ಕೆಲವರು ನಟ, ನಟಿಯರು 8 ತಿಂಗಳ ಗುತ್ತಿಗೆ ಪಡೆದು ಪ್ರಚಾರ ಮಾಡುವುದಕ್ಕೆ 20 ಕೋಟಿ ರುಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಕೋಬ್ರಾ ಪೋಸ್ಟ್ ಮುಖ್ಯಸ್ಥ ಅನಿರುದ್ಧ್ ಬೆಹಲ್ ತಿಳಿಸಿದ್ದಾರೆ.
ವಿದ್ಯಾ ಬಾಲನ್, ಅರ್ಷಾದ್ ವರ್ಸಿ, ರಜಾ ಮುರಾದ್, ಸೌಮ್ಯ ಟಂಡನ್ ಮೊದಲಾದವರು ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡುವುದಕ್ಕೆ ನಿರಾಕರಿಸಿದ್ದಾರೆ.
ಕೇವಲ ಹಣಕ್ಕಾಗಿ ಯಾವುದೋ ರಾಜಕೀಯ ಪಕ್ಷಕ್ಕೆ ಸಹಾಯ ಮಾಡಲು ಮುಂದಾಗಿರುವ ಬಾಲಿವುಡ್ ತಾರೆಯರನ್ನು  ಹಲವು ಮಂದಿ ತೀವ್ರವಾಗಿ ಖಂಡಿಸಿದ್ದಾರೆ.
ಇನ್ನು ಕೋಬ್ರಾ ಕುಟುಕು ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿರುವ ಸನ್ನಿ ಲಿಯೋನ್, ನನ್ನ ಅಭಿಪ್ರಾಯಗಳು ನನ್ನ ವೈಯಕ್ತಿಕವಾಗಿಯೇ ಹೊರತು, ಮಾರಾಟಕ್ಕಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಉದ್ದದ ಪತ್ರವೊಂದನ್ನು ಪ್ರಕಟಿಸಿ ಇದು ಕುಟುಕು ಕಾರ್ಯಾಚರಣೆಯ ಸ್ಪಷ್ಟೀಕರಣ ಎಂದು ಹೇಳಿದ್ದಾರೆ.
ನಟ ಸೋನು ಸೂದ್ ಸಹ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಕೋಬ್ರಾ ಪೋಸ್ಟ್‌ ತಿದ್ದಿದ ವಿಡಿಯೋವನ್ನು ಬಿಡುಗಡೆ ಮಾಡಿದೆ. ನಕಾರಾತ್ಮಕ ಭಾವ ಬರುವಂತೆ ನಮ್ಮ ಮಾತುಗಳನ್ನು ತಿದ್ದಲಾಗಿದೆ. ಅವರು ನನ್ನನ್ನು ಸಂಪರ್ಕಿಸಿದಾಗ ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ, ನನಗೆ ಸರಿ ಕಂಡದ್ದನ್ನು ಮಾತ್ರವೇ ಪ್ರಮೋಟ್ ಮಾಡುತ್ತೇನೆ ಎಂದು, ಆದರೆ ಅದನ್ನು ಉದ್ದೇಶಪೂರ್ವಕವಾಗಿ ಅಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com