ಮೂವಿ ಮಾಫಿಯಾದ ಬಗ್ಗೆ ಮತ್ತೊಂದು ಗಂಭೀರ ಆರೋಪ ಮಾಡಿದ ಕಂಗನಾ! 

ಬಾಲಿವುಡ್ ನಟಿ ಕಂಗನಾ ರಣಾವತ್ ಮೂವಿ ಮಾಫಿಯಾದ ಬಗ್ಗೆ ಮತ್ತೊಂದು ಗಂಭೀರ ಆರೋಪ ಮಾಡಿದ್ದು ತಮ್ಮ ಟ್ವಿಟರ್ ಖಾತೆ ಯಾವುದೇ ನಿಮಿಷದಲ್ಲಿ ಬೇಕಾದರೂ ಈ ಮಾಫಿಯಾದಿಂದ ಅಮಾನತ್ತಾಗಬಹುದು ಎಂದು ಹೇಳಿದ್ದಾರೆ. 
ಕಂಗನಾ ರನೌತ್
ಕಂಗನಾ ರನೌತ್
Updated on: 

ಬಾಲಿವುಡ್ ನಟಿ ಕಂಗನಾ ರಣಾವತ್ ಮೂವಿ ಮಾಫಿಯಾದ ಬಗ್ಗೆ ಮತ್ತೊಂದು ಗಂಭೀರ ಆರೋಪ ಮಾಡಿದ್ದು ತಮ್ಮ ಟ್ವಿಟರ್ ಖಾತೆ ಯಾವುದೇ ನಿಮಿಷದಲ್ಲಿ ಬೇಕಾದರೂ ಈ ಮಾಫಿಯಾದಿಂದ ಅಮಾನತ್ತಾಗಬಹುದು ಎಂದು ಹೇಳಿದ್ದಾರೆ. 

ತಮ್ಮ ಅಭಿಪ್ರಾಯಗಳನ್ನು ಸಾಮಾಜಿ ಜಾಲತಾಣಗಳಲ್ಲಿ ನಿರ್ಭೀತಿಯಿಂದ ಹಂಚಿಕೊಳ್ಳುವುದಕ್ಕಾಗಿಯೇ ಖ್ಯಾತಿ ಪಡೆದಿರುವ ಕಂಗನಾ ರಣಾವತ್, ತಮ್ಮ ಮಾತುಗಳು ಒಂದೇ ಆಯಾಮವುಳ್ಳದ್ದು ಎಂದುಕೊಳ್ಳುವ ಮೂವಿ ಮಾಫಿಯಾದಿಂದ ತಮ್ಮ ಟ್ವಿಟರ್ ಖಾತೆ ಯಾವುದೇ ಕ್ಷಣದಲ್ಲಿ ಬೇಕಾದರೂ ಅಮಾನತುಗೊಳ್ಳಬಹುದು, ಈ ಬಾರಿ ಅಂತಹವರ ಮುಖವಾಡ ಕಳಚಲು ಇದು ಬಳಕೆಯಾಗಲಿದೆ ಎಂದೂ ಕಂಗಾನ ಮಾರ್ಮಿಕವಾಗಿ ನುಡಿದಿದ್ದಾರೆ. 

ನನ್ನ ಮಾತುಗಳನ್ನು ಇಲ್ಲಿರುವ ನನ್ನ ಮಿತ್ರರು, ಬಹುತೇಕ ಮಂದಿ ಮೂವಿ ಮಾಫಿಯಾದವರು, ಅವರ ರಾಷ್ಟ್ರವಿರೋಧಿ, ಹಿಂದೂಫೋಬಿಕ್ ಗುಂಪಿಗೆ ಒಂದೇ ಆಯಾಮವುಳ್ಳದ್ದು ಎನಿಸಬಹುದು. ನನಗೆ ಹೇಳುವುದಕ್ಕೆ ಸಾಕಷ್ಟು ಇದೆ. ಆದರೆ ಈ ಗುಂಪಿನಿಂದ ನನ್ನ ಟ್ವಿಟರ್ ಖಾತೆ ಯಾವಗ ಬೇಕಾದರೂ ನಿಷ್ಕ್ರಿಯವಾಗಬಹುದು, ಆದರೆ ಈ ಬಾರಿ ಅಂತಹ ಘಟನೆ ನಡೆದರೆ ಅವರ ಮುಖವಾಡ ಕಳಚಲು ನಾನು ಈ ಸನ್ನಿವೇಶವನ್ನು ಬಳಕೆ ಮಾಡಿಕೊಳ್ಳುತ್ತೇನೆ ಎಂದು ಕಂಗನಾ ಟ್ವಿಟರ್ ಮೂಲಕವೇ ಎಚ್ಚರಿಕೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com