ಡ್ರಗ್ಸ್ ಸಾಗಾಟ ಆರೋಪ: ಮಂಗಳೂರಿನಲ್ಲಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ

ಪ್ರಸಿದ್ಧ ಡ್ಯಾನ್ಸರ್ ಕಿಶೋರ್ ಅಮನ್ ಅಲಿಯಾಸ್ ಕಿಶೋರ್ ಶೆಟ್ಟಿಯನ್ನು ಸೆಪ್ಟೆಂಬರ್ 19 ರ ಶನಿವಾರ ಮಂಗಳೂರು  ನಗರ ಕ್ರೈಂ ಬ್ರ್ಯಾಂಚ್ ಪೊಲೀಸರು (ಸಿಸಿಬಿ) ಬಂಧಿಸಿದ್ದಾರೆ. ಆತ ಮಾದಕ ವಸ್ತು ಸಾಗಾಟ ನಡೆಸಿದ್ದನೆಂದು ವರದಿಯಾಗಿದೆ.
ಕಿಶೋರ್ ಶೆಟ್ಟಿ
ಕಿಶೋರ್ ಶೆಟ್ಟಿ

ಮಂಗಳೂರು: ಪ್ರಸಿದ್ಧ ಡ್ಯಾನ್ಸರ್ ಕಿಶೋರ್ ಅಮನ್ ಅಲಿಯಾಸ್ ಕಿಶೋರ್ ಶೆಟ್ಟಿಯನ್ನು ಸೆಪ್ಟೆಂಬರ್ 19 ರ ಶನಿವಾರ ಮಂಗಳೂರು  ನಗರ ಕ್ರೈಂ ಬ್ರ್ಯಾಂಚ್ ಪೊಲೀಸರು (ಸಿಸಿಬಿ) ಬಂಧಿಸಿದ್ದಾರೆ. ಆತ ಮಾದಕ ವಸ್ತು ಸಾಗಾಟ ನಡೆಸಿದ್ದನೆಂದು ವರದಿಯಾಗಿದೆ.

ಕಿಶೋರ್ ಬಾಲಿವುಡ್ ಚಿತ್ರ  'ಎಬಿಸಿಡಿ' ಯಲ್ಲಿ ನಟಿಸಿದ್ದರು. ಅಲ್ಲದೆ ಜೀ ಟಿವಿಯ  'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ಟೆಲಿವಿಷನ್ ರಿಯಾಲಿಟಿ ಡ್ಯಾನ್ಸ್ ಸ್ಪರ್ಧೆಯ ಸೀಸನ್ 2 ರಲ್ಲಿಯೂ ಭಾಗವಹಿಸಿದ್ದ ಅವರು ಅಗ್ರ ಎಂಟರ ಘಟ್ಟ ತಲುಪಿದ್ದರು.

ಮಾದಕವಸ್ತು ಜಾಲ ಬೇಧಿಸಲು ರಾಜ್ಯಾದ್ಯಂತ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಇಂದು ಈ ಡ್ಯಾನ್ಸರ್ ಬಂಧನವಾಗಿದೆ. ಇತ್ತ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಪ್ರಕರಣ ದಿನಕ್ಕೊಂದು  ಹೊಸ ತಿರುವು ಪಡೆಯುತ್ತಿದ್ದು ಇಂದು ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ಬುಲಾವ್ ನೀಡೀದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com