'ಇಂದಿರಾ ಗಾಂಧಿ ಕುರಿತ ಎಮರ್ಜೆನ್ಸಿ ಸಿನಿಮಾವನ್ನು ನನ್ನ ಹೊರತಾಗಿ ಯಾರೂ ಉತ್ತಮವಾಗಿ ನಿರ್ದೇಶಿಸಲು ಸಾಧ್ಯವೇ ಇಲ್ಲ!'

ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಕುರಿತ 'ಎಮರ್ಜೆನ್ಸಿ' ಸಿನಿಮಾವನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ನಿರ್ದೇಶಿಸಲಿದ್ದಾರೆ.
ಕಂಗನಾ ರಣಾವತ್
ಕಂಗನಾ ರಣಾವತ್
Updated on

ಮುಂಬಯಿ: ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಕುರಿತ 'ಎಮರ್ಜೆನ್ಸಿ' ಸಿನಿಮಾವನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ನಿರ್ದೇಶಿಸಲಿದ್ದಾರೆ.

ಈ ಮೊದಲು ರಿವಾಲ್ವರ್ ರಾಣಿ ಸಿನಿಮಾ ನಿರ್ದೇಶಿಸಿದ್ದ ಸಾಯಿ ಕಬೀರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬುಧವಾರ ಈ ಸಂಬಂಧ ಸ್ಪಷ್ಟನೆ ನೀಡಿರುವ ಕಂಗನಾ ಕಣಾವತ್ ತಾವೇ ಈ ಸಿನಿಮಾ ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ.

ಈ ಹೊಸ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಕಂಗನಾ, 'ನನಗೆ ಇನ್ನೊಮ್ಮೆ ಡೈರೆಕ್ಟರ್ ಕ್ಯಾಪ್​ ಧರಿಸಲು ಸಂತಸವಾಗುತ್ತಿದೆ. ಈ ಸಿನಿಮಾಗಾಗಿ ನಾನು 2 ವರ್ಷಕ್ಕೂ ಹೆಚ್ಚಿನ ಸಮಯವನ್ನು ನೀಡಿದ್ದೇನೆ, ಈ ಸಿನಿಮಾವನ್ನು ನನ್ನ ಹೊರತಾಗಿ ಬೇರೆ ಯಾರೂ ಕೂಡ ಉತ್ತಮವಾಗಿ ಡೈರೆಕ್ಟ್ ಮಾಡಲು  ಸಾಧ್ಯವೇ ಇಲ್ಲ! 'ಎಮರ್ಜೆನ್ಸಿ'ಗಾಗಿ ಕೆಲವು ಹೊಸ ಪ್ರಾಜೆಕ್ಟ್​ಗಳನ್ನೇ ನಾನು ತ್ಯಾಗ ಮಾಡಬೇಕಾಗಿ ಬಂದಿದೆ. 

ಆದರೂ ಕೂಡ ನಾನು 'ಎಮರ್ಜೆನ್ಸಿ' ಸಿನಿಮಾ ಮಾಡುವುದಕ್ಕೆ ದೃಢ ನಿರ್ಧಾರ ಮಾಡಿದ್ದೇನೆ. ಈ ಚಿತ್ರದ ಬಗ್ಗೆ ತುಂಬ ಉತ್ಸುಕಳಾಗಿದ್ದೇನೆ ಮತ್ತು ಇದೊಂದು ಅತ್ಯದ್ಭುತ ಪಯಣವಾಗಿರಲಿದೆ' ಎಂದು ಹೊಸ ಸಿನಿಮಾ ಬಗ್ಗೆ ಹೇಳಿದ್ದಾರೆ. 2019 ರಲ್ಲಿ 'ಮಣಿಕರ್ಣಿಕಾ' ಸಿನಿಮಾಕ್ಕೆ ನಿರ್ದೇಶನ ಮಾಡಿದ ಅನುಭವ ಕಂಗನಾಗೆ ಇದೆ. ಇದೀಗ ಅದೇ ಅನುಭವದ ಮೇಲೆ 'ಎಮರ್ಜೆನ್ಸಿ' ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com