ಸಿನಿರಂಗದ ಅತಿದೊಡ್ಡ ಫ್ಲಾಪ್ ಸಿನಿಮಾ! 45 ಕೋಟಿ ಖರ್ಚು ಮಾಡಿ ಗಳಿಸಿದ್ದು ಕೇವಲ 60 ಸಾವಿರ

ಬಿಡುಗಡೆಯಾದ ಮೊದಲ ದಿನ ಮಾರಾಟವಾಗಿದ್ದು 293 ಟಿಕೆಟ್ ಮಾತ್ರ; ಹೂಡಿಕೆ ಮಾಡಿದ ಹಣದಲ್ಲಿ ಶೇ. 99.99ರಷ್ಟು ಭಾರಿ ನಷ್ಟ ಅನುಭವಿಸಿದ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಫ್ಲಾಪ್ ಸಿನಿಮಾ ಇದು! ಎಲ್ಲಾ ಒಟಿಟಿ ಸಂಸ್ಥೆಗಳಿಂದಲೂ ರಿಜೆಕ್ಟ್ ಆಗಿ ಯೂಟ್ಯೂಬ್‌ನಲ್ಲಿ ಉಚಿತವಾಗಿ ರಿಲೀಸ್ ಆಯ್ತು ಈ ಚಿತ್ರ!
Films
Updated on

ಶುಕ್ರವಾರ ಬಂತು ಅಂದ್ರೆ ಸಿನಿಪ್ರಿಯರಿಗೆ ರಸದೌತಣ. ಯಾಕಂದ್ರೆ, ಪ್ರತಿ ಭಾಷೆಯಲ್ಲೂ ಹತ್ತಾರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಹೀಗೆ ಬಿಡುಗಡೆಯಾದ ಸಿನಿಮಾಗಳು ಕೋಟಿ ಕೋಟಿ ಕಲೆಕ್ಷನ್ ಮಾಡುತ್ತವೆ. ಕೆಲ ಸಿನಿಮಾಗಳಂತು, ಸಾವಿರ ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿ ಹಿಟ್, ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಎನಿಸಿಕೊಳ್ಳುತ್ತವೆ. ಆದ್ರೆ, ಮತ್ತೊಂದೆಡೆ ಫ್ಲಾಪ್ ಚಿತ್ರ ಅಂದ್ರು ಕೂಡ ಚಿತ್ರದ ಬಜೆಟ್‌ನ ಅರ್ಧದಷ್ಟಾದರೂ ಕಲೆಕ್ಷನ್ ಮಾಡುತ್ತವೆ. ಆದ್ರೆ, ನಿಮಗೆ ಗೊತ್ತಾ, ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ನಷ್ಟವನ್ನು ಕಂಡ ಚಿತ್ರ ಯಾವುದು ಎಂದು? ಇಲ್ಲಿದೆ ಆ ಕುರಿತ ವರದಿ:

ಯಾವುದು ಗೊತ್ತಾ ಆ ಚಿತ್ರ?

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಫ್ಲಾಪ್ ಸಿನಿಮಾ ಎಂಬ ಕುಖ್ಯಾತಿಗೆ ಒಳಗಾದ ಆ ಚಿತ್ರ 'ದಿ ಲೇಡಿ ಕಿಲ್ಲರ್' (The Lady Killer). ಹೌದು, ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ನಟಿ ಭೂಮಿ ಪೆಡ್ನೇಕರ್ ಮುಖ್ಯ ಭೂಮಿಕೆಯಲ್ಲಿದ್ದ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ 2023 ರಲ್ಲಿ ಬಿಡುಗಡೆಯಾಗಿತ್ತು. ಆದ್ರೆ, ಹೂಡಿಕೆ ಮಾಡಿದ ಹಣದಲ್ಲಿ ಶೇಕಡಾ 99.99 ರಷ್ಟು ಭಾರಿ ನಷ್ಟ ಅನುಭವಿಸಿತು ಎನ್ನಲಾಗಿದೆ.

45 ಕೋಟಿ ಬಜೆಟ್‌ 60 ಸಾವಿರ ಕಲೆಕ್ಷನ್!

ಸುಮಾರು 45 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಥಿಯೇಟರ್‌ಗಳಿಂದ ಗಳಿಸಿದ್ದು ಬರೀ 60,000 ರೂಪಾಯಿ ಮಾತ್ರ! ಅಂದರೆ ಹೂಡಿಕೆ ಮಾಡಿದ ಹಣದಲ್ಲಿ ಶೇಕಡಾ 99.99 ರಷ್ಟು ಭಾರಿ ನಷ್ಟ ಅನುಭವಿಸಿತು. ಜೊತೆಗೆ ಸಿನಿಮಾ ಬಿಡುಗಡೆಯಾದ ಮೊದಲ ದಿನ ಇಡೀ ದೇಶಾದ್ಯಂತ ಮಾರಾಟವಾಗಿದ್ದು ಕೇವಲ 293 ಟಿಕೆಟ್‌ಗಳು ಮಾತ್ರ. ಅದರಲ್ಲೂ, ಈ ಸಿನಿಮಾ ಬಿಡುಗಡೆಯಾಗಿದ್ದು, ಇಡೀ ದೇಶದಲ್ಲಿ ಕೇವಲ 12 ಚಿತ್ರಮಂದಿರಗಳಲ್ಲಿ ಮಾತ್ರ.

Films
ಆಪ್ ಕಿ ಅದಾಲತ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್: 'ಟಾಕ್ಸಿಕ್' ಬಿಡುಗಡೆ ಹೊತ್ತಿನಲ್ಲಿ ಕುತೂಹಲ ಮೂಡಿಸುವ ಸಂದರ್ಶನ

ಅರ್ಧಂಬರ್ಧ ಶೂಟಿಂಗ್, ಕ್ಲೈಮ್ಯಾಕ್ಸ್ ಇಲ್ಲ:

ಚಿತ್ರದ ನಿರ್ದೇಶಕ ಅಜಯ್ ಬಹ್ಲ್ ಅವರ ಪ್ರಕಾರ, ಬಜೆಟ್ ಕೊರತೆಯಿಂದಾಗಿ ಚಿತ್ರಕಥೆಯ ಅರ್ಧದಷ್ಟು ಭಾಗವನ್ನು ಚಿತ್ರೀಕರಿಸಲು ಸಾಧ್ಯವಾಗಿರಲಿಲ್ಲ. ಚಿತ್ರಕ್ಕೆ ಸರಿಯಾದ ಮುಕ್ತಾಯ ಅಥವಾ 'ಕ್ಲೈಮ್ಯಾಕ್ಸ್' ಇಲ್ಲದೆಯೇ ಹಾಗೇ ಬಿಡುಗಡೆ ಮಾಡಲಾಗಿತ್ತು. ಇದು ಪ್ರೇಕ್ಷಕರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಇದರೊಂದಿಗೆ, ಸಿನಿಮಾ ಬಿಡುಗಡೆಯಾಗುವ ಮುನ್ನ ಯಾವುದೇ ಟ್ರೈಲರ್ ಲಾಂಚ್ ಇವೆಂಟ್ ಆಗಲಿ ಅಥವಾ ದೊಡ್ಡ ಮಟ್ಟದ ಪ್ರಚಾರವಾಗಲಿ ನಡೆದಿರಲಿಲ್ಲ. ಸಿನಿಮಾ ರಿಲೀಸ್ ಆಗುತ್ತಿರುವ ವಿಷಯವೇ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ.

ಒಟಿಟಿ ಸಂಸ್ಥೆಗಳಿಂದಲೂ ರಿಜೆಕ್ಟ್

ಚಿತ್ರದ ಕಳಪೆ ಗುಣಮಟ್ಟದಿಂದಾಗಿ ನೆಟ್‌ಫ್ಲಿಕ್ಸ್ ಸೇರಿದಂತೆ ಯಾವುದೇ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಇದರ ಡಿಜಿಟಲ್ ಹಕ್ಕುಗಳನ್ನು ಖರೀದಿಸಲು ಮುಂದೆ ಬರಲಿಲ್ಲ. ಹೀಗಾಗಿ, ಬೇರೆ ದಾರಿ ಇಲ್ಲದೆ ನಿರ್ಮಾಪಕರು ಈ ಚಿತ್ರವನ್ನು ಉಚಿತವಾಗಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಬೇಕಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com