

ಕೃತಿ ಸನೋನ್ ಅವರ ಇತ್ತೀಚಿನ ರಕ್ಷಾ ಬಂಧನ ಜಾಹೀರಾತು ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ನಟಿಯ ಹಬ್ಬದ ಡ್ರೆಸ್ ಮತ್ತು ಸಾಕಿದ ನಾಯಿಗೂ ರಾಖಿ ಕಟ್ಟುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಕುಟುಂಬ, ಒಡನಾಟದ ಕುರಿತು ಬದಲಾಗುತ್ತಿರುವ ಪರಿಕಲ್ಪನೆಗಳನ್ನು ಬಿಂಬಿಸುವ ಈ ಆಭರಣ ಬ್ರಾಂಡ್‌ನ ಜಾಹೀರಾತು, ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕೃತಿ ಸನೋನ್ ಇತ್ತೀಚೆಗೆ ಆಭರಣ ಬ್ರಾಂಡ್‌ನ ರಕ್ಷಾ ಬಂಧನ ಅಭಿಯಾನವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಸಹೋದರನೊಂದಿಗೆ ಹಬ್ಬವನ್ನು ಆಚರಿಸುತ್ತಿರುವುದು ಮತ್ತು ಅವರಿಗೆ ರಾಖಿ ಕಟ್ಟುತ್ತಿರುವುದು ಕಂಡುಬರುತ್ತದೆ.
ಈ ಆಚರಣೆಯ ಸಂದರ್ಭದಲ್ಲಿ ಕೃತಿ 'ಡೀಪ್ ವಿ-ನೆಕ್' (ಆಳವಾದ ಕುತ್ತಿಗೆಯ ವಿನ್ಯಾಸವಿರುವ) ಬ್ಲೌಸ್ ಧರಿಸಿದ್ದಾರೆ. ಅಣ್ಣ-ತಂಗಿಯರ ನಡುವಿನ ಸಾಂಪ್ರದಾಯಿಕ ಕೌಟುಂಬಿಕ ಸಂದರ್ಭಕ್ಕೆ ಇಂತಹ ಉಡುಪು ಸೂಕ್ತವೇ ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನಿಸಿದ್ದಾರೆ.
ಸಾಕು ನಾಯಿಗೂ ರಾಖಿ ಕಟ್ಟುತ್ತಾರೆ ಮತ್ತು ಅದನ್ನು ಕುಟುಂಬದ ಪ್ರೀತಿಯ ಸದಸ್ಯನಂತೆ ಪರಿಗಣಿಸುತ್ತಾರೆ. ಮನುಷ್ಯರು ಮತ್ತು ಅವರ ಸಾಕುಪ್ರಾಣಿಗಳ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಈ ಕಲ್ಪನೆಯು ಕೇಂದ್ರೀಕರಿಸಿದಂತೆ ಕಂಡರೂ, ಪ್ರಸ್ತುತಿಯಲ್ಲಿ ಸಹೋದರನಿಗಿಂತ ನಾಯಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಕೆಲವು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಜಾಹೀರಾತು ಆನ್‌ಲೈನ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಇದರ ಪರಿಕಲ್ಪನೆ ಮತ್ತು ಕೃತಿಯ ಡ್ರೆಸ್ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದಾರೆ. ನನ್ನ ವಂಶಾವಳಿಯಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬಳು ಬ್ರಾ ಧರಿಸಿ ತನ್ನ ಸಹೋದರನಿಗೆ ರಾಖಿ ಕಟ್ಟುವುದನ್ನು ನೋಡುತ್ತಿದ್ದೇನೆ!! ಕುಟುಂಬದಲ್ಲಿ ರಾಖಿ ಆಚರಿಸುವಾಗ ಯಾವ ಸಹೋದರಿ ಎದೆಯ ಭಾಗ (cleavage) ಎದ್ದು ಕಾಣುವಂತಹ ಉಡುಪನ್ನು ಧರಿಸುತ್ತಾಳೆ? ಎಂದು ಬರೆದುಕೊಂಡಿದ್ದಾರೆ.
ಈ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ನೆಟ್ಟಿಗರು, ಅದು ಬ್ರಾ ಅಲ್ಲ ಮೂರ್ಖನೇ, ಕೇವಲ ಎಂಗೇಜ್‌ಮೆಂಟ್‌ಗಾಗಿ ವ್ಯರ್ಥ ಟ್ರೋಲ್ ಮಾಡುವುದನ್ನು ನಿಲ್ಲಿಸು. ರಕ್ಷಣೆಯ ಸಂಕೇತವಾಗಿರುವ ರಾಖಿಯ ಭಾವನೆ ಮತ್ತು ಅಣ್ಣ-ತಂಗಿಯರ ಬಾಂಧವ್ಯದತ್ತ ಗಮನಹರಿಸು ಎಂದಿದ್ದಾರೆ. ಇಂತಹ ಟ್ರೋಲ್ ಮಾಡುವವರು ಮಾನಸಿಕವಾಗಿ ಅಸ್ವಸ್ಥರು. ಇದು ಜನರ ನಡುವೆ ಹರಡುತ್ತಿರುವ ವೈರಸ್‌ನಂತಿದೆ ಇವರಿಗೆ ಲಸಿಕೆಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ರಾಖಿಯ ಭಾವನೆಯು ಉಡುಪಿನಲ್ಲಿಲ್ಲ, ಬದಲಾಗಿ ಮನಸ್ಥಿತಿಯಲ್ಲಿದೆ. ನನ್ನ ಪ್ರಕಾರ ಈ ಉಡುಪು ಸಂಪೂರ್ಣವಾಗಿ ಸರಿಯಾಗಿದೆ, ಆದರೆ ಕೊಳೆತ ಮನಸ್ಥಿತಿಯ ಜನರು ಇದರಲ್ಲಿ ಸಮಸ್ಯೆ ಹುಡುಕುತ್ತಾರೆ. ದೇವರು ಮತ್ತು ದೇವತೆಗಳು ಧರಿಸುತ್ತಿದ್ದ ನಿಜವಾದ ಉಡುಪುಗಳ ಬಗ್ಗೆ ಇವರಿಗೆ ತಿಳಿದರೆ, ಇವರು ಆಘಾತದಿಂದ ಸತ್ತೇ ಹೋಗುತ್ತಾರೆ ಎಂದಿದ್ದಾರೆ.