"ಕೊಟ್ನಲ್ಲಪ್ಪೋ ಕೈ": ಚೆಕ್ ಬೌನ್ಸ್ ಪ್ರಕರಣದಲ್ಲಿ ನಿರ್ದೇಶಕ ರಿಷಿ ಬಂಧನ

ಕೊಟ್ಲಲ್ಲಪ್ಪೋ ಕೈ ಚಿತ್ರ ವಿವಾದ ಮತ್ತು ನಟಿ ಮೈತ್ರಿಯಾ ಗೌಡ ಅವರನ್ನು ವಿವಾಹವಾಗಿದ್ದೇನೆ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದ ವಿವಾದಿತ ನಿರ್ದೇಶಕ ರಿಷಿ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊಟ್ಲಲ್ಲಪ್ಪೋ ಕೈ ಚಿತ್ರ ವಿವಾದ ಮತ್ತು ನಟಿ ಮೈತ್ರಿಯಾ ಗೌಡ ಅವರನ್ನು ವಿವಾಹವಾಗಿದ್ದೇನೆ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದ ವಿವಾದಿತ ನಿರ್ದೇಶಕ ರಿಷಿ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ನಟನೋರ್ವನಿಂದ ಹಣ ಪಡೆದು ಬಳಿಕ ಆತನಿಗೆ ಚೆಕ್ ನೀಡಿ ವಂಚಿಸಿದ ಆರೋಪ ಮೇರೆಗೆ ಚಿತ್ರ ನಿರ್ದೇಶಕ ರಿಷಿಯನ್ನು ವೈಯಾಲಿಕಾವಲ್‌ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇದೇ ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್‌  ನ್ಯಾಯಾಲಯ ರಿಷಿಗೆ ವಾರಂಟ್‌ ಜಾರಿ ಮಾಡಿತ್ತು. ಹೀಗಾಗಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲಳ ಪ್ರಕಾರ ನಿರ್ದೇಶಕ ರಿಷಿ ಒನ್ ವೇ ಹೆಸರಿನ ಚಿತ್ರ ಮಾಡುತ್ತಿರುವುದಾಗಿ ಹೇಳಿ ದೀಪಕ್ ಬಾಬು ಎಂಬಾತನಿಂದ ಸುಮಾರು 6 ಲಕ್ಷ ರು. ಪಡೆದಿದ್ದರಂತೆ. ಚಿತ್ರಕ್ಕೆ ನೀನೇ ನಾಯಕ ಎಂದು ಹೇಳಿ ಹಣ ಪಡೆದಿದ್ದರು. ಬಳಿಕ  ಚಿತ್ರದ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿದ್ದರು. ಹೀಗಾಗಿ ಹಣ ವಾಪಸ್ ನೀಡುವಂತೆ ಅವರನ್ನು ಒತ್ತಾಯಿಸಿದ್ದೆ. ಅಂತಿಮವಾಗಿ ಒಂದು ದಿನ ರಿಷಿ 6 ಲಕ್ಷ ರು.ಗಳ ಚೆಕ್ ನೀಡಿದ್ದರು. ಆದರೆ ಅದನ್ನು ಬ್ಯಾಂಕಿಗೆ ಹಾಕಿದಾಗ ಅದು ಬೌನ್ಸ್  ಆಗಿತ್ತು.  ಹೀಗಾಗಿ ದೀಪಕ್ ಪೊಲೀಸರ ಮೊರ ಹೋಗಿದ್ದರು. ಇದೀಗ ನಿರ್ದೇಶಕ ರಿಷಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com