ಬೆಂಗಳೂರು: ಹೋಳಿ ಫೈಟಿಂಗ್ ಸೀನ್ ಜೊತೆ ಚಮಕ್ ಚಿತ್ರದ ಕ್ಲೈಮ್ಯಾಕ್ಸ್ ಮುಗಿಸಲು ನಿರ್ದೇಶಕ ಸುನಿ ನಿರ್ದರಿಸಿದ್ದಾರೆ. ಈ ಶೂಟಿಂಗ್ ನಲ್ಲಿ ಸಾರ್ವಜನಿಕರನ್ನು ಸೇರಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.
ಫೈಟಿಂಗ್ ದೃಶ್ಯವನ್ನು ಆಚಾರ್ಯ ಇನ್ಸ್ ಸ್ಟಿಟ್ಯೂಟ್ ನಲ್ಲಿ ನಡೆಸಲು ಯೋಜಿಸಲಾಗಿತ್ತು, ಆದರೆ ಹಲವು ಕಾರಣಗಳಿಂದ ಶೂಟಿಂಗ್ ಮುಂದೂಡಲಾಗಿದೆ. ಹೀಗಾಗಿ ಅಕ್ಟೋಬರ್ 19 ರಿಂದ 21ರ ವರೆಗೆ ಫೈಟಿಂಗ್ ದೃಶ್ಯದ ಚಿತ್ರೀಕರಣ ನಡೆಯಲಿದೆ.
ವಿಭಿನ್ನ ಅನುಭವ ಹೊಂದಿರುವ ಆಸಕ್ತಿ ಇರುವ ಯುವ ಜನತೆಗೆ ನಿರ್ದೇಶಕ ಸುನಿ ಆಹ್ವಾನ ನೀಡಿದ್ದಾರೆ. ಆಸಕ್ತಿ ಇರುವವರು ಚಾಮರಾಜಪೇಟೆಯ ಡೀರ್ ಪಾರ್ಕ್ ಎದುರಿರುವ ರಾಜೀವ್ ಗಾಂಧಿ ಸಭಾಂಗಣಕ್ಕೆ ಬರಲು ಆಹ್ವಾನ ನೀಡಿದ್ದಾರೆ,. ಭಾಗವಹಿಸುವವರಿಗೆ ಹೆಚ್ಚಿನ ರೀತಿಯ ತಮಾಷೆ ಹಾಗೂ ಮೋಜು ಇರಲಿದೆ, ನಮ್ಮ ಕಡೆಯಿಂದ ಉಡುಗೊರೆ ನೀಡಲಾಗುವುದು ಎಂದು ಹೇಳಿದ್ದಾರೆ.
ಫೈಟಿಂಗ್ ದೃಶ್ಯದೊಂದಿಗೆ ಚಮಕ್ ಸಿನಿಮಾ ಶೂಟಿಂಗ್ ಮುಕ್ತಾಯಗೊಳ್ಳಲಿದೆ. ಸುನಿ ನಿರ್ದೇಶನದ ಈ ಸಿನಿಮಾದಲ್ಲಿ, ಗಣೇಶ್, ರಶ್ಮಿಕಾ ಮಂದಣ್ಣ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಸಾಧುಕೋಕಿಲಾ, ನಿರ್ದೇಶಕರುಗಳಾದ ಗಿರಿ ಮತ್ತು ರಘುರಾಂ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಟಿಸಿದ್ದಾರೆ.