ಕಾಮಿಡಿ ಟಾಕೀಸ್ ಜಡ್ಜ್ ಆಗಿ ರಚಿತಾ ರಾಮ್, ಸೃಜನ್ ಲೋಕೇಶ್

ಸ್ಯಾಂಡಲ್ ವುಡ್ ನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಚಿತಾರಾಮ್ ಜಾನಿ ಜಾನಿ ಎಸ್ ಪಾಪ, ಉಪ್ಪಿ-ರುಪ್ಪಿ ಸಿನಿಮಾಗಳಲ್ಲಿ...
ರಚಿತಾ ರಾಮ್, ಸೃಜನ್ ಲೋಕೇಶ್ ಮತ್ತು ವಿಜಯ್ ಸೂರಿಯ
ರಚಿತಾ ರಾಮ್, ಸೃಜನ್ ಲೋಕೇಶ್ ಮತ್ತು ವಿಜಯ್ ಸೂರಿಯ
ಬೆಂಗಳೂರು: ಸದ್ಯ ಸ್ಯಾಂಡಲ್ ವುಡ್ ನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಚಿತಾರಾಮ್ ಜಾನಿ ಜಾನಿ ಎಸ್ ಪಾಪ, ಉಪ್ಪಿ-ರುಪ್ಪಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಇದರ ಜೊತೆಗೆ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.
ಈ ಮೊದಲು ಡ್ಯಾನ್ಸ್ ರಿಯಾಲಿಟಿ ಶೋ ಗೆ ಜಡ್ಜ್ ಆಗಿದ್ದ ರಚಿತಾ, ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಟಾಕೀಸ್ ಎಂಬ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಭಾಗವಹಿಸಲಿದ್ದಾರೆ.
ರಚಿತಾ ಜೊತೆಗೆ ಮತ್ತೊಬ್ಬ ಪಾಪ್ಯುಲರ್ ನಿರೂಪಕ ಸೃಜನ್ ಲೋಕೇಶ್ ಕೂಡ  ಈ ರಿಯಾಲಿಟಿ ಶೋಗೆ ಜಡ್ಜ್ ಆಗಿ ಬರಲಿದ್ದಾರೆ, ಇನ್ನೂ ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಎಲ್ಲರ ಮನ ಗೆದ್ದಿರುವ ನೀಲಿ ಕಣ್ಣಿನ ಹುಡುಗ ವಿಜಯ್ ಸೂರಿಯಾ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ಮೊದಲ ಕೆಲವೊಂದು ಎಪಿಸೋಡ್ ಗಳ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ನವೆಂಬರ್ 4 ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಮೂವರು ಒಟ್ಟಿಗೆ ಬರುತ್ತಿರುವ ರಿಯಾಲಿಯಿ ಶೋ ಬಗ್ಗೆ ಈಗಾಗಲೇ ಕೂತೂಹಲ ಮೂಡಿದೆ, ಸೃಜನ್ ಅದ್ಬುತ ಕಾಮಿಡಿ ಕಾರ್ಯಕ್ರಮದ ಹೈಲೈಟ್ ಆಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com