ಚಿರು-ಮೇಘನಾ ಮದುವೆ ಡೇಟ್ ಫಿಕ್ಸ್: ಮೇ 2 ರಂದು ಮದುವೆ!

ಸ್ಯಾಂಡಲ್ ವುಡ್ ನ ಮತ್ತಿಬ್ಬರು ತಾರೆಗಳು ಹಸೆಮಣೆ ಏರಲು ಸಜ್ಜಾಗಿದ್ದು, ಕಳೆದ ವರ್ಷ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರ ಮದುವೆ ದಿನಾಂಕ ಫಿಕ್ಸ್ ಆಗಿದೆ ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತಿಬ್ಬರು ತಾರೆಗಳು ಹಸೆಮಣೆ ಏರಲು ಸಜ್ಜಾಗಿದ್ದು, ಕಳೆದ ವರ್ಷ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರ ಮದುವೆ ದಿನಾಂಕ ಫಿಕ್ಸ್ ಆಗಿದೆ ಎನ್ನಲಾಗಿದೆ.
ಕುಟುಂಬದ ಮೂಲಗಳ ಪ್ರಕಾರ ಇದೇ ಮೇ 2ರಂದು ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಅವರ ಮದುವೆ ನಿಗದಿಯಾಗಿದೆ ಎನ್ನಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಮದುವೆ ಆಯೋಜಿಸಲು ಉಭಯ ಕುಟುಂಬದವರು ನಿಶ್ಚಯಿಸಿದ್ದು, ಈಗಾಗಲೇ ಈ ಸಂಬಂಧ ಉಭಯ ಕುಟುಂಬಸ್ಥರು ತಯಾರಿ ನಡೆಸುತ್ತಿದ್ದಾರೆ.
ಇನ್ನು ಮೇ 2ರಂದು ವಿವಾಹ ಮುಕ್ತಾಯದ ಬಳಿಕ ಅದೇ ದಿನ ಸಂಜೆ ವಿವಾಹ ಆರತಕ್ಷತೆಯನ್ನೂ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಆದರೆ ವಿವಾಹ ದಿನಾಂಕ ನಿಶ್ಚಯ ಸಂಬಂಧ ಚಿರು ಕುಟುಂಬದಿಂದ ಅಥವಾ ಮೇಘನಾರಾಜ್ ಅವರ ಕುಟುಂಬದಿಂದ ಯಾವುದೇ ರೀತಿಯ ಅಧಿಕೃತ ಹೇಳಿಕೆ ಬಂದಿಲ್ಲ. ಕಳೆದ ವರ್ಷ ಚಿರು ಹಾಗೂ ಮೇಘನಾ ನಿಶ್ಚಿತಾರ್ಥ ನೆರವೇರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com