ಕನ್ನಡ ರಿಮೇಕ್ 'ಕ್ವೀನ್' ಚಿತ್ರವನ್ನು ಕಂಗಾನಾಗೆ ತೋರಿಸಲು ಉತ್ಸುಕಳಾಗಿದ್ದೇನೆ: ಪಾರುಲ್ ಯಾದವ್

ಕನ್ನಡ ಅವತರಣಿ ಕ್ವೀನ್ ಚಿತ್ರವನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ತೋರಿಸಲು ಸಾಕಷ್ಟು ಉತ್ಸುಕಳಾಗಿದ್ದೇನೆಂದು ನಟಿ ಪಾರುಲ್ ಯಾದವ್ ಹೇಳಿದ್ದಾರೆ...
ಪಾರುಲ್ ಯಾದವ್
ಪಾರುಲ್ ಯಾದವ್
Updated on
ಮುಂಬೈ: ಕನ್ನಡ ಅವತರಣಿ ಕ್ವೀನ್ ಚಿತ್ರವನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ತೋರಿಸಲು ಸಾಕಷ್ಟು ಉತ್ಸುಕಳಾಗಿದ್ದೇನೆಂದು ನಟಿ ಪಾರುಲ್ ಯಾದವ್ ಹೇಳಿದ್ದಾರೆ. 
ಬಾಲಿವುಡ್ ನಲ್ಲಿ ಹಿಟ್ ಆಗಿರುವ ಕ್ವೀನ್ ಚಿತ್ರದಲ್ಲಿ ಕಂಗನಾ ರಣಾವತ್ ಅವರು ನಟಿಸಿದ್ದು, ಇದೇ ಚಿತ್ರ ಕನ್ನಡದಲ್ಲಿಯೂ ರಿಮೇಕ್ ಆಗುತ್ತಿದೆ. ಚಿತ್ರದಲ್ಲಿ ಪಾರುಲ್ ಯಾದವ್ ಅವರು ಕಂಗನಾ ಅವರು ನಟಿಸಿದ್ದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಚಿತ್ರದ ಟೀಸರ್ ಇದೀಗ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. 
ಚಿತ್ರ ಕುರಿತಂತೆ ಪ್ರತಿಕ್ರಿಯೆ ನೀಡುರುವ ಪಾರುಲ್ ಅವರು, ಕಂಗನಾ ಅವರಿಗೆ ಚಿತ್ರವನ್ನು ತೋರಿಸಲು ಕಾತುರಳಾಗಿದ್ದೇನೆ. ಚಿತ್ರದ ಸಹ ನಿರ್ಮಾಪಕಿಯಾಗಿರುವ ನನಗೆ ಚಿತ್ರವನ್ನು ಕಂಗನಾ ಅವರು ನೋಡಿದರೆ ಬಹಳ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. 
ಕಂಗನಾ ಅವರು ಚಿತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ. ಆ ಮಟ್ಟವನ್ನು ತಲುಪಲು ನಮಗೆ ಸಾಧ್ಯವಾಗದೆಯೇ ಇದ್ದಿರಬಹುದು. ಆದರೆ, ವಿಭಿನ್ನ ರೀತಿಯಲ್ಲಿ ಚಿತ್ರವನ್ನು ತೋರಿಸಲು ಯತ್ನ ನಡೆಸಿದ್ದೇವೆಂದು ತಿಳಿಸಿದ್ದಾರೆ. 
2014ರಲ್ಲಿ ಕ್ವೀನ್ ಚಿತ್ರ ಬಿಡುಗಡೆಯಾಗಿತ್ತು. ಇದೀಗ ಇದೇ ಚಿತ್ರ ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಮೇಕ್ ಆಗಿದ್ದು, ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com