ಪೊಗರು ಖದರ್ ಹೆಚ್ಚಿಸಲಿದೆ ಧ್ರುವ ಸರ್ಜಾರ ಪಂಚ್ ಡೈಲಾಗ್

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಸಿನಿಮಾವೆಂದರೆ ಅಲ್ಲಿ ಭರ್ಜರಿ ಡೈಲಾಗ್ ಇರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಭಿಮಾನಿಗಳ ಒತ್ತಾಯದ ಮೇರೆಗೆ ಪೊಗರು ಚಿತ್ರ ತಂಡ ಪೊಗರು ಸಿನಿಮಾದ ಡೈಲಾಗ್ ಟ್ರೈಲರ್'ನ್ನು ಗುರುವಾರ ಬಿಡುಗಡೆ ಮಾಡಲಿದೆ.
ಧ್ರುವ ಸರ್ಜಾ (ಸಂಗ್ರಹ ಚಿತ್ರ)

ನಂದ ಕಿಶೋರ್ ನಿರ್ದೇಶನದ ಪೊಗರು ಸಿನಿಮಾದ ಟೈಟರ್ ಹಾಗೂ ಧ್ರುವ ಅವರ ಲುಕ್ ನೋಡಿದರೆ ಚಿತ್ರದಲ್ಲಿ ಭರ್ಜರಿ ಸಾಹಸ ದೃಶ್ಯಗಳಿರುವುದು ಪಕ್ಕಾ ಎಂಬುದು ತಿಳಿದುಬರುತ್ತಿದೆ. 

ಚಿತ್ರದ ಟ್ರೈಲರ್ ಅನ್ನು ಈ ಹಿಂದೆಯೇ ಚಿತ್ರತಂಡ ಬಿಡುಗಡೆ ಮಾಡಿತ್ತು. ಆದರೆ, ಚಿತ್ರದ ಡೈಲಾಗ್ ಟ್ರೈಲರ್ ಬಿಡುಗಡೆ ಮಾಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದು, ಈ ಹಿನ್ನೆಲೆಯಲ್ಲಿ ದೀಪಾವಳಿ ಪ್ರಯುಕ್ತ ಅ.24ರಂದು ಜಡೈಲಾಗ್ ಟ್ರೈಲರ್'ನ್ನು ಬಿಡುಗಡೆ ಮಾಡುತ್ತಿದೆ. 

ಈಗಾಗಲೇ ಭರ್ಜರಿ ಸೌಂಡ್ ಮಾಡುತ್ತಿರುವ ಧ್ರುವ ಪೊಗರು ಚಿತ್ರದ ಮೂಲಕ ಮತ್ತೊಮ್ಮೆ ಸ್ಯಾಂಡಲ್'ವುಡ್ ನಲ್ಲಿ ಧೂಳೆಬ್ಬಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com